Headlines

ವಿಜಯೇಂದ್ರ ನಾಯಕತ್ವ ಒಪ್ಪಲ್ಲ- ರಮೇಶ ಜಾರಕಿಹೊಳಿ

ಬೆಳಗಾವಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂಸ್ರ ನಾಯಕತ್ವ ಒಪ್ಪುವುದಿಲ್ಲ ಎನ್ನುವ ಮೂಲಕ ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಹೈಕಮಾಂಡಗೆ ಶೆಡ್ಡು ಹೊಡೆದಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರ ನಾಯಕತ್ವದ ಚುನಾವಣೆಯಲ್ಲಿ ನಾನು ಭಾಗವಹಿಸಲ್ಲ ಎಂದರು. ಆದರೆ ಉಪ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಒಳ್ಳೆಯದಾಗಲಿದೆ ಎಂದರು.

ಮಹಾರಾಷ್ಟ್ರ ಚುನಾವಣೆಯಲ್ಲಿ ನನಗೆ ಜವಾಬ್ದಾರಿ ಬೇಡ. ಅಣ್ಣಾ ಸಾಹೇಬ ಜೊಲ್ಲೆ ಅವರಿಗೆ ಕೊಡಿ. ಅವರ ಜೊತೆ ಸೇರಿ ನಾನು ಪ್ರಚಾರಕ್ಕೆ ಹೋಗುತ್ತೇನೆ ಎಂದಿದ್ದೇನೆ. ಅಕ್ಕಲಕೋಟ, ಸೋಲಾಪುರ, ಜತ್ತ ಸೇರಿದಂತೆ ಕನ್ನಡದ ಕ್ಷೇತ್ರದಲ್ಲಿ ಪ್ರಚಾರ ನಡೆಸಲು ಹೇಳಿದ್ದರು. ನಾನು ನೀರಾವರಿ ಇಲಾಖೆ ಸಚಿವನಾಗಿದ್ದಾಗ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಪಾಟ್೯ ಟೈಮ್ ನೀರಾವರಿ ಸಚಿವ. ಹೆಚ್ಚಿನ ಸಮಯ ಬಿಬಿಎಂಪಿಯಲ್ಲಿಯೇ ಕಳೆಯುತ್ತಾರೆ.. ದಯಮಾಡಿ ಫುನ್ ಟೈಮ್ ನೀರಾವರಿ ಸಚಿವರನ್ನು ಸರಕಾರ ನೇಮಕ ಮಾಡಬೇಕೆಂದು ವ್ಯಂಗ್ಯವಾಡಿದರು.
ಬಿಜೆಪಿ ತೋರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ಸಿ.ಪಿ.ಯೋಗೇಶ್ವರ ಒಳ್ಳೆಯ ಹೋರಾಟಗಾರ. ಅವನಿಗೆ ಅನ್ಯಾಯವಾಯಿತು. ಅದಕ್ಕೆ ಕಾಂಗ್ರೆಸ್ ಹೋಗಿ ಚನ್ನಪಟ್ಟಣದ ವಿಧಾನಸಭಾ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ.ಆದರೆ ಗೆಲ್ಲುತ್ತಾನೋ ಸೋಲುತ್ತಾನೋ ಗೊತ್ತಿಲ್ಲ ಎಂದರು‌.ಮಾಜಿ ಶಾಸಕ ಮಹೇಶ ಕುಮಠಳ್ಳಿ ಇದ್ದರು‌.

Leave a Reply

Your email address will not be published. Required fields are marked *

error: Content is protected !!