“ಮಹಾ” ದವರಿಗೆ ಕೆಲಸ- ವಿಚಾರಣೆಗೆ ಸೂಚನೆ

ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ಯಲ್ಲಿ ಕೆಲ ಸಿಬ್ಬಂದಿಗಳ ನೇಮಕಾತಿಯಲ್ಲಿ ಮಹಾರಾಷ್ಟ್ರ ದವರಿಗೆ ಆಧ್ಯತೆ ನೀಡಲಾಗಿದೆ ಎನ್ನುವುದನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಿದ್ದಾರೆ.

ಕಳೆದ ದಿನ ಇ ಬೆಳಗಾವಿ ಡಾಟ್ ಕಾಮ್ ವರದಿ ಪ್ರಕಟಿಸಿತ್ತು.

ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಪಾಲಿಕೆ ಆಯುಕ್ತ. ಅಶೋಕ ದುಡಗುಂಟಿ ಅವರು ಪೌರಕಾರ್ಮಿಕ, ಸೂಪರ್ ವೈಸರ್ ಸೇರಿದಂತೆ ಇನ್ನಿತರ ನೇಮಕದ ಬಗ್ಗೆ ವಿಚಾರಣೆಗೆ ಮೌಖಿಕವಾಗಿ ಸಂಬಂಧಿಸಿದವರಿಗೆ ಆದೇಶ ನೀಡಿದ್ದಾರೆ.

ಪಾಲಿಕೆಯಲ್ಲಿ ಮಹಾ ದವರ ನೇಮಕ

https://ebelagavi.com/index.php/2023/08/28/hi-22/

ಮೇಲಾಗಿ ಈ ಮಹಾ ನೇಮಕದ ಸಂಗತಿಯನ್ಬು ಬಿಜೆಪಿ ಶಾಸಕರೂ ಸಹ ಗಂಭೀರವಾಗಿ ಪರಿಗಣಿಸಿ ಸ್ಥಳೀಕರಿಗೆ ಉದ್ಯೋಗ ಕಲ್ಪಿಸುವುದರ ಜೊತೆಗೆ ಪಾರದರ್ಶಕ ನೇಮಕ ಮಾಡಬೇಕು ಎಂದು ಸಂಬಂಧಿಸಿದವರಿಗೆ ತಾಕೀತು ಮಾಡಿದ್ದಾರೆಂದು ಗೊತ್ತಾಗಿದೆ.

error: Content is protected !!