ಆ ಸಾವಿನ ಜೊತೆ ಸತ್ಯವೂ ಮಣ್ಣಾಯಿತಾ?

ಬೆಳಗಾವಿ ಪೊಲೀಸರು ಅಷ್ಟು ಕಟುಕರಾದರಾ? ಯಾರ ಮಾತು‌ ಕೇಳಿ ಕಣ್ಣಿದ್ದೂ ಕುರುಡರಂತಾದರಾ?

ಮಗನನ್ನು ಕಳೆದುಕೊಂಡ ಆ ತಾಯಿಯ ಕಣ್ಣೀರ ಕಥೆ ಇವರಿಗೆ ಅರ್ಥ ಆಗಲಿಲ್ಲವೇ?

ಇಂತಹ ಆಡಳಿತ ವ್ಯವಸ್ಥೆಯಿಂದ ನೊಂದವರಿಗೆ ನ್ಯಾಯ ಸಿಗಬಹುದಾ?

ಕಿಂಚಿತ್ತಾದರೂ ಆರೋಪ ಹೊತ್ತವರಿಗೆ ರುದ್ರೇಶ ಸಾವನ್ನು ಕಂಡು ಏನೂ ಅನಿಸಲಿಲ್ಲವೇ.?

ನ್ಯಾಯಕ್ಕಾಗಿ ಬಿಜೆಪಿ ಹೋರಾಟ ಇಷ್ಟೇನಾ? ಇದಕ್ಕೊಂದು ತಾರ್ಕಿಕ ಅಂತ್ಯ ಬೇಡವೇ?

ತಹಶೀಲ್ದಾರ ಕಚೇರಿ ವ್ಯವಹಾರದ ಬಗ್ಗೆನೇ ಲೋಕಾಯುಕ್ತ ತನಿಖೆ ಬೇಡವೇ?

ಬೆಳಗಾವಿ..

ನಿಜಕ್ಕೂ ಬೆಳಗಾವಿ ಪೊಲೀಸರು ಸಾವಿನ ಪ್ರಕರಣದಲ್ಲೂ‌ ಈ ರೀತಿಯ ಒತ್ತಡಕ್ಕೆ ಒಳಗಾಗಿ ರುದ್ರೇಶನ ಸಾವಿನ‌ ಜೊತೆಗೆ ಸತ್ಯವನ್ನೂ ಮಣ್ಣು ಮಾಡ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ.

ಆರಂಭದಲ್ಲಿ ಪೊಲೀಸರು ತಹಶೀಲ್ದಾರ ಸೇರಿದಂತೆ ಮೂವರ ವಿರುದ್ಧ FIR ಮಾಡಿಕೊಂಡಾಗ ಎಲ್ಲರೂ ಹುಬ್ಬೇರಿಸಿದ್ದರು. ಕೊನೆಪಕ್ಷ ಸತ್ತವ ಹುಟ್ಟಿ ಬರಲ್ಲ.‌ಆದರೆ ಆತನ ಆತ್ಮಕ್ಕೆ ಶಾಂತಿ ಕೊಡುವ ಕೆಲಸವನ್ಬು ಪೊಲೀಸರು ಮಾಡುತ್ತಿದ್ದಾರೆಂದು ನಂಬಿದ್ದರು.

ಆದರೆ ಈಗ ನಡೆದಿರುವ ಬೆಳವಣಿಗೆಯನ್ನು ಗಮನಿಸಿದರೆ ಬೆಳಗಾವಿ ಪೊಲೀಸರು ಸತ್ಯವನ್ನು ಮಣ್ಷು ಮಾಡಿದರು ಎಂದೇ ಹೇಳಬಹುದು.

ಮತ್ತೊಂದು ಸಂಗತಿ ಎಂದರೆ, ಅರೋಪ ಹೊತ್ತ ಜವಾಬ್ದಾರಿ ಯುತ ಸ್ಥಾನದಲ್ಲಿರುವ ಗೆಜೆಟೆಡ್ ಅಧಿಕಾರಿಯ ವರ್ತನೆ ಯಾವ ರೀತಿ‌ ಈ ಪ್ರಕರಣದಲ್ಲಿ ಇರಬೇಕಿತ್ತು ಎನ್ನುವ ಪ್ರಶ್ನಾರ್ಥಕ ಮಾತುಗಳು ಸಾರ್ವಜನಿಕ‌ ವಲಯದಲ್ಲಿಕೇಳಿ ಬರುತ್ತಿವೆ.

ಚರ್ಚೆಗೆ ಕಾರಣ


ತಹಶೀಲ್ದಾರ ಕಚೇರಿಯ ದ್ವಿತೀಯ ದರ್ಜೆ ಗುಮಾಸ್ತ ರುದ್ರೇಶ್ ಯಡವಣ್ಣವರ ಆತ್ಮಹತ್ಯೆ ಪ್ರಕರಣದಲ್ಲಿ ಬೆಳಗಾವಿ ಪೊಲೀಸ್ ನಡೆದುಕೊಂಡ ರೀತಿ ಈಗ ಭಾರೀ ಚರ್ಚೆಗೆ ಕಾರಣವಾಗುತ್ತಿದೆ.

ಇಲ್ಲಿ ಎದೆ ಎತ್ತರಕ್ಕೆ ಬೆಳೆದ ಮತ್ತು ಇಡೀ ಕುಟುಂಬಕ್ಕೆ ಆಧಾರವಾಗಿದ್ದ ಹೆತ್ತ ಮಗನನ್ನ ಕಳೆದುಕೊಂಡ ಆ ತಾಯಿಯ ಕಣ್ಣೀರಕ್ಕೂ ಖಾಕಿಗೆ ಕನಿಕರ ಬರಲಿಲ್ಲವೇ ಎನ್ನುವ ಪ್ರಶ್ನೆ ಬಹುತೇಕರನ್ನು ಕಾಡುತ್ತಿದೆ.
ಎಲ್ಲಕ್ಕೂ ಕೈ ಕಟ್ಟಿಸಿಕೊಂಡವರಂತೆ ಕಾರ್ಯನಿರ್ವಹಿಸುತ್ತಿರುವ ಬೆಳಗಾವಿ ಪೊಲೀಸರಿಗೆ ತಿಳಿ ಹೇಳೋರು ಸಹ ಇಲ್ಲವೇ ಎಂದು ಜನ ಕೇಳುತ್ತಿದ್ದಾರೆ.
.


ಇಲ್ಲಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡ ನಂತರ ಆರೋಪ ಹೊತ್ತವರನ್ನು ಹೆಡಮುರಿ ಕಟ್ಟಿ ಜೈಲು ಕಂಬಿ ಹಿಂದೆ ನಿಲ್ಲಿಸಿದ್ದರೆ ಪೊಲೂಸರ ಕಾರ್ಯದ ಬಗ್ಗೆ ಯಾರೂ ಅನುಮಾನ ಪಡುವ ಪ್ರಮೇಯವೇ ಬರುತ್ತಿರಲಿಲ್ಲ.
ಆದರೆ ಬೆಳಗಾವಿ ಪೊಲೀಸರು ಮಾತ್ರ ಪ್ರಭಲ ಸಾಕ್ಷಿಯ ನೆಪ ಹೇಳುತ್ತ ಪರೋಕ್ಷವಾಗಿ ಜಾಮೀನಿಗೆ ‘ಸಹಕಾರ’ ಕೊಟ್ಡರು ಎನ್ನುವುದು ಈಗ ಜಗಜ್ಜಾಹೀರ.
ಮತ್ತೊಂದು ಸಂಗತಿ ಎಂದರೆ, ರುದ್ರೇಶ ಆತ್ಮಹತ್ಯೆ ಮಾಡಿಕೊಂಡ ತಕ್ಷಣ ಪೊಲೀಸ ಅಧಿಕಾರಿಗಳಿಗೆ ವಾಟ್ಸಪ್ ಸಂದೇಶ ಸಿಕಿತ್ತು. ಆದರೆ ಆಗ ಘಟನಾ ಸ್ಥಳಕ್ಕೆ ಬಂದ ತಹಶೀಲ್ದಾರ ನಾಗರಾಳ ಅವರನ್ನು ತಡೆಗಟ್ಟಬೇಕಾಗಿದ್ದ ಪೊಲೀಸರು ಕೈ ಕಟ್ಟಿಕೊಂಡು ನಿಂತಿದ್ದು ಯಾಕೆ? ಎನ್ನುವ ಬಹುದೊಡ್ಡ ಪ್ರಶ್ನೆ ಬೆಳಗಾವಿಗರನ್ನು ಕಾಡುತ್ತಿದೆ
.

ಅಂದರೆ ಬೆಳಗಾವಿ ಪೊಲೀಸರು ಯಾರದೊ ಒತ್ತಡಕ್ಕೆ ಒಳಗಾಗಿ ತಾಳಕ್ಕೆ ತಕ್ಕಂತೆ ಕುಣಿದು ಮಾನವೀಯತೆ ಮರೆಯುತ್ತಿದ್ದಾರೆ ಎನ್ನುವ ಮಾತುಗಳು ಸರ್ವೇ ಸಾಮಾನ್ಯವಾಗಿ ಕೇಳಿ ಬರುತ್ತಿವೆ.

ಮಗ ಅನ್ಯಾಯ ಮಾಡಿಲ್ಲ

ನನ್ನ ಮಗ ಯಾರಿಗೂ ಅನ್ಯಾಯ ಮಾಡಿಲ್ಲ.. ಯಾರಿಗೂ ನೋವು ಕೊಟ್ಟಿಲ್ಲ. .ದೇವರಾದರೂ ಇವನ ರಕ್ಷಣೆಗೆ ಬರಬೇಕಿತ್ತು..


ಹೀಗೆಂದು ಆತ್ಮಹತ್ಯೆ ಮಾಡಿಕೊಂಡ ಎಸ್‌ಡಿಎ ರುದ್ರೇಶ ಯಡವಣ್ಣವರ ತಾಯಿ ಮಲ್ಲವ್ವ ಹೇಳುವಾಗ ಕಣ್ಣುಗಳು ನೀರಾಗಿದ್ದವು. ಮನಸ್ಸು ಭಸರವಾಗಿತ್ತು.

ಈಗಲೂ ಕೂಡ ನಿತ್ಯ ಮಗನ ನೆನೆದು ತಾಯಿ ಮಲ್ಲವ್ವ ಹಾಗೂ ಪತ್ನಿ ಕಣ್ಣಿರಿನಲ್ಲೇ ಕೈ ತೊಳೆಯುತ್ತಿದ್ದಾರೆ. ಎಸ್‌ ಡಿಎ ರುದ್ರೇಶ ಯಡವಣ್ಣವರ ಆತ್ಮಹ್ಯತ್ಯೆ ಮಾಡಿಕೊಂಡು ಇಂದಿಗೆ 11 ದಿನ ಕಳೆದಿವೆ. ಆದರೆ, ಇಂದಿಗೂ ಮಗನ ಕಳೆದುಕೊಂಡ ತಾಯಿ, ಪತಿಯನ್ನು ಕಳೆದುಕೊಂಡ ಪತ್ನಿ ಹಾಗೂ ಇನ್ನು ಗರ್ಭದಲ್ಲಿರುವ ಪುಟ್ಟ ರುದ್ರಣ್ಣನ ಕಂದಮ್ಮ ನಿತ್ಯ ಮರಗುತ್ತಿವೆ. ರುದ್ರಣ್ಣನ ಸಾವಿಗೆ ಕಾರಣರಾದವರ ವಿರುದ್ಧ ಆಕ್ರೋಶದ ಬಿಸಿ ಕಣ್ಣೀರಿನ ಹನಿಗಳು ನೆಲೆಕ್ಕೆ ಉದುರುತ್ತಿವೆ. ಆದರೆ ಇವೆಲ್ಲ ದಪ್ಪ ಚರ್ಮದ ಅದಿಕಾರಿಗಳಿಗೆ ಅರ್ಥವಾಗುತ್ತಿಲ್ಲ.

ಮೂವರೇ ನೇರಕಾರಣ?
.ರುದ್ರೇಶ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ನನ್ನ ಸಾವಿಗೆ ತಹಶೀಲ್ದಾರ್ ಬಸವರಾಜ್ ನಾಗರಾಳ , ಸಚಿವೆ ಲಕ್ಷ್ಮೀ ಹೆಬ್ಬಾಳಕರ ಆಪ್ತ ಸಹಾಯಕ ಸೋಮು ಮತ್ತು ಅಶೋಕ ಕಬ್ಬಲಗೇರಿ ಇವರೇ ನೇರಕಾರಣ, ನಮ್ಮ ಕಚೇರಿಯಲ್ಲಿ ತುಂಬಾ ಅನ್ಯಾಯ ನಡೆಯುತ್ತಿದೆ. ದಯವಿಟ್ಟು ಎಲ್ಲರೂ ಒಟ್ಟಾಗಿ ಹೋರಾಡಿ ಎಂದು ಮಸೇಜ್ ಹಾಕಿದ್ದನು.

ಆದರೆ ಆಡಳಿತ ನಡೆಸುವ ಹಿರಿಯ ಅಣದಿಕಾತಿಗಳು ಇದುವರೆಗೂ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವುದು ದುರ್ದೈವ. ವಿಪರ್ಯಾಸವೆಂದರೆ ತಹಶೀಲ್ದಾರ್‌ ಕಚೇರಿಯಲ್ಲಿ ಎನೂ ನಡದೆಯಿಲ್ಲ, ನಮಗೆನೂ ಗೊತ್ತಿಲ್ಲ ಎಂಬಂತೆ ಯಥಾ ಸ್ಥಿತಿ ತಹಶೀಲಾರ್ ಕಚೇರಿಗೆ ಆರೋಪಿ ಬಸವರಾಜ್ ಹಾಗೂ ಎಫ್ ಡಿಎ ಅಶೋಕ್ ಕಗ್ಗಲಿಗೇರ್ ಕಚೇರಿಗೆ ಬಂದು ಹಾಜರಾಗಿದ್ದಾರೆ. .

ಕಣ್ಣೀರಿಡುತ್ತಿರುವ ತಾಯಿ:
ರಾತ್ರಿ ಊಟಕ್ಕೆ ಮನೆಗೆ ಬರುವುದಾಗಿ ಹೇಳಿದ್ದ ಮಗ, ಕೆಲಹೊತ್ತು ಆದ ಬಳಿಕ ಮತ್ತೆ ಪೋನ್‌ ಮಾಡಿದ ಸ್ವಲ್ಪ ಕೆಲಸ ಇದೆ ಲೇಟಾಗಿ ಬರುತ್ತೇನೆ ಎಂದು ಹೇಳಿ ಹೋದವನು ಮತ್ತೇ ಬರಲೇ ಇಲ್ಲ. ಈಗ ನನ್ನ ಮಗನ ಸಾವಿಗೂ ನ್ಯಾಯ ತಂದು ಕೋಡೊವರ‍್ಯಾರು,? ಅವನಿಗೆ ಹುಟ್ಟೋ ಕಂದಮ್ಮಗೆ ಅಪ್ಪಾ ಎಲ್ಲಿ ಎಂದು ಕೇಳಿದರೆ ನಾನು ಎನು ಮಾಡಲಿ.. ಎನು ಹೇಳಲಿ ಎಂದು ತಾಯಿ ಮಲ್ಲವ್ವ ನಿತ್ಯ ಮಗನ ನೆನಪಿನಲ್ಲೇ ಕಣ್ಣೀರಿಡುತ್ತಿದ್ದಾರೆ.

ವೈರಲ್ ಆದ ದೂರವಾಣಿ ಕರೆ:

ಎಸ್‌ಡಿಎ ರುದ್ರೇಶ ನಡೆಸಿದ ದೂರವಾಣಿ ಕರೆಯ ರೆಕಾರ್ಡಿಂಗ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಆಪ್ತ ಸಹಾಯಕರಲ್ಲಿ ಒಬ್ಬರಾದ ಸೋಮು ದೊಡವಾಡಿ ಅವರ ಮೂಲಕ ಬೆಳಗಾವಿ ತಹಶೀಲ್ದಾರ್ ಬಸವರಾಜ್ ನಾಗರಾಳ ಅವರಿಗೆ ಬೆಳಗಾವಿಯಲ್ಲಿ ಎಸ್‌ಡಿಎ ಆಗಿ ಪೋಸ್ಟಿಂಗ್ ಮುಂದುವರಿಸಲು 2 ಲಕ್ಷ ರೂಪಾಯಿ ಲಂಚ ನೀಡಿದ್ದೇನೆ ಎಂದು ರುದ್ರೇಶ ಮಾತನಾಡುವಾಗ ಹೇಳಿದ್ದಾನೆ . ಈ ಕೆಲಸ ಮಾಡಿಕೊಡಲು ತನಗೆ ಹೆಚ್ಚುವರಿಯಾಗಿ 50,000 ರೂ ನೀಡುವಂತೆ ಸೋಮು ಒತ್ತಡ ಹಾಕಿದ್ದ. ತಹಶೀಲ್ದಾರ್ ಕಚೇರಿಯಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರದಿಂದ ಹತಾಶರಾದ ರುದ್ರಣ್ಣ ಅವರು ತಮ್ಮ ವರ್ಗಾವಣೆಯನ್ನು ತಡೆಯುವಂತೆ ಸುದ್ದಿ ವರದಿಗಾರರ ಬಳಿ ಸಹಾಯ ಕೇಳಿರುವ ದೂರವಾಣಿ ಕರೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

.

Leave a Reply

Your email address will not be published. Required fields are marked *

error: Content is protected !!