ಪಾಲಿಕೆಯಲ್ಲಿ ಚಾಲ್ತಿಯಲ್ಲಿದೆ SPL TAX..!?

ನೋಟೀಸ್ ಆಯಿತು? ಆಕ್ಷನ್ ಏನು ಅಂತ ಬೆಳಗಾವಿಗರ ಪ್ರಶ್ನೆ.

ಪಾಲಿಕೆ ಕಂದಾಯ ಶಾಖೆಯಲ್ಲೇ ಕಂಸಾಯ ಸೋರಿಕೆ?

ಪಾಲಿಕೆ ಆದಾಯಕ್ಕೆ ಭಾರೀ ಪೆಟ್ಟು!

ಆ ಕಂಪನಿಯಿಂದ ತೆರಿಗೆ ಎಷ್ಟು ಬರಬೇಕಿತ್ತು? ಆದರೆ ಅವರು ಕೊಟ್ಟಿದ್ದೆಷ್ಡು? ಅದರಲ್ಲಿ ಕೈ ಆಡಿಸಿದವರೆಷ್ಟು ಜನ?

ಪಾಲಿಕೆಯಲ್ಲಿ Special TAX. ದ್ದೆ ಸದ್ದು

ಬೆಳಗಾವಿ.

ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಡೆಯುತ್ತಿರುವ ಬಾರಾಭಾನಗಡಿ ಹೊಸದೇನಲ್ಲ.ಇಲ್ಲಿನ ಜನ ಎಲ್ಲವೂ ಗೊತ್ತಿದ್ದರೂ ಗೊತ್ತಿಲ್ಲದಂತೆ ಇದ್ದಾರೆ.

ಆದರೆ ಅದು ಅತೀಯಾದಾಗ ಒಂದಿಷ್ಟು ಸಹನೆ ಕಟ್ಟೆಯೊಡೆದು ಬಿಡುತ್ತದೆ.

ಸಿಂಪಲ್ ಆಗಿ ಹೇಳಬೇಕೆಂದರೆ, ಬೆಳಗಾವಿ ಮಹಾನಗರ ಪಾಲಿಕೆಯ ಕಂದಾಯ ಶಾಖೆ, ಟಿಪಿಓ ಸೇರಿದಂತೆ ಆರೋಗ್ಯ ಶಾಖೆಗಳು ಯಾವ ರೀತಿ ಕಾರ್ಯನಿರ್ವಹಿಸುತ್ತಿವೆ ಎನ್ನುವುದು ಗುಟ್ಟಿನ ವಿಷಯವೇನಿಲ್ಲ. ಮೇಲಾಗಿ ಮಹಾನಗರ ಪಾಲಿಕೆಯಲ್ಲಿ ನಡೆಯುತ್ತಿರುವ ಕದ್ದು ಮುಚ್ಚಿ ನಡೆದ ಘಟನೆಗಳನ್ನು ಅದುಮಿಡಲು ಆಗಲ್ಲ. ಅವು ಕ್ಷಣಾರ್ಧದಲ್ಲಿ ಬಹಿರಂಗವಾಗಿ ಬಿಡುತ್ತವೆ.

ಅದು ಬಿಡಿ. ಬೆಳಗಾವಿಯ ಖಾಸಗಿ ಶಿಕ್ಷಣ ಸಂಸ್ಥೆಗೆ ಚಲನ್ ನೀಡುವ ವಿಷಯದಲ್ಲಿ ಕಂದಾಯ ಶಾಖೆಯವರು ಮಾಡಿದ ಯಡವಟ್ಟು ಈಗ ಅನೇಕ ಗೊಂದಲಕ್ಕೆ ಕಾರಣವಾಗಿದೆ ಅಷ್ಟೆ ಅಲ್ಲ ಅಲ್ಲಿ ನಡೆಯುತ್ತಿರುವ ಕಾರ್ಯವೈಖರಿ ಹತ್ತು ಹಲವು ಕಹಾನಿಗಳಿಗೆ ಸಾಕ್ಷಿಯಾಗುತ್ತಿದೆ.

ಗಮನಿಸಬೇಕಾದ ಸಂಗತಿ ಎಂದರೆ, ಇಲ್ಲಿ ತಪ್ಪು ಮಾಡೇ ಇಲ್ಲ ಎನ್ನಲು ಆಗೋದೇ ಇಲ್ಲ. ಏಕೆಂದರೆ ಅಷ್ಟೊಂದು ಆಡಿಯೋಗಳು ಆ ಕರಾಳ ಸತ್ಯವನ್ನು ಬಿಚ್ವಿಡುತ್ತವೆ

ಈಗ‌ ಆ ಖಾಸಗಿ ಸಂಸ್ಥೆಗೆ ಚಲನ‌ ಕೊಡುವಾಗ ಏನ್ ಮಾಡಿಕೊಂಡರು ಎನ್ನುವುದು ಬೇರೆ ಮಾತು. ಇಲ್ಲಿ ಚಲನ್ ಒಟ್ಟು ಮೊತ್ತವೇ ಕೇವಲ 20 ರಿಂದ 26 ಸಾವಿರ ಆದರೆ, ಪಾಲಿಕೆಯ ಕಂದಾಯ ಶಾಖೆ ಅದಕ್ಕೆ ತಮ್ಮ ಜಿಎಸ್ಟಿ ಪ್ರತ್ಯೇಕ ಸೇರಿಸಿಬಿಟ್ಡರು.ಇದು ಚರ್ಚೆ ವಿಷಯವಾಗಿದೆ.

ತೆರಿಗೆ ವಸೂಲಿಯಲ್ಲಿ ಭಾರೀ ಹೊಡೆತ

ಬೆಳಗಾವಿಯಲ್ಲಿ ಪಾಲಿಕೆಯವರು ಸರಿಯಾಗಿ ತೆರಿಗೆ ವಸೂಲಿ ಮಾಡಿದರೆ ಇದು ರಾಜ್ಯದ ಶ್ರೀಮಂತ ಪಾಲಿಕೆಗಳಲ್ಲಿ ಒಂದಾಗುತ್ತದೆ.

ಆದರೆ ಆ ತೆರಿಗೆ ವಸೂಲಿಯಲ್ಲಿ ದೊಡ್ಡ ಪ್ರಮಾಣದ ಲೋಪ ನಡೆದಿದ್ದು ಈಗ ಬೆಳಕಿಗೆ ಬರುತ್ತಿದೆ.

ಬೆಳಗಾವಿ ಉದ್ಯಮಬಾಗದ ಹೊರವಲಯದಲ್ಲಿ ಹೆಸರಾಂತ ಹೆಲ್ಮೆಟ್ ಕಂಪನಿಯೊಂದಿದೆ. ಅದು ವರ್ಷಕ್ಕೆ ಏನಿಲ್ಲವೆಂದರೂ ಹತ್ತು ಲಕ್ಷ ರೂ ತೆರಿಗೆಯನ್ನು ಪಾಲಿಕೆಗೆ ತುಂಬಬೇಕು. ಅವರು ಅದನ್ಬು ಸರಿಯಾಗಿ ತುಂಬಿದ್ದರೆ ಪಾಲಿಕೆ ಕಂದಾಯ ಶಾಖೆ ಬಗ್ಗೆ ಯಾರೂ ಸಂಶಯ ದೃಷ್ಟಿಯಿಂದ ನೋಡುವ ಪ್ರಶ್ನೆಯೇ ಬರುತ್ತಿರಲಿಲ್ಲ.

ಪಾಲಿಕೆಯ ಮೂಲಗಳ ಪ್ರಕಾರ ಈ ಕಂಪನಿಯವರು ಕಳೆದ ಸುಮಾರು 2002 ,ರಿಂದ ತೆರಿಗೆ ತುಂಬಿಲ್ಲವಂತೆ. ಈ ಬಗ್ಗೆ ಕಂದಾಯ ಶಾಖೆಯವರು ಅಲ್ಲಿಗೆ ಹೋಗಿದ್ದ ಸಂದರ್ಭದಲ್ಲಿ ಒಂದು ರೀತಿಯ ಒಪ್ಪಂದ ಮಾಡಿಕೊಂಡು ಬಂದು ಪಾಲಿಕೆಗೆ ಬರಬೇಕಾಗಿದ್ದ ಆದಾಯಕ್ಕೆ ಭಾರೀ ಪೆಟ್ಟುಕೊಟ್ಟರು ಎನ್ನುವುದು ಈಗ ವಿವಾದದ ಕೇಂದ್ರ ಬಿಂದು.ಮತ್ತೊಂದು ಸಂಗತಿ ಎಂದರೆ ಈ ತೆರಿಗೆ ದೋಖಾದಲ್ಲಿ ಮೂರನೇ ವ್ಯಕ್ತಿಯೊಬ್ಬರು ಕೈ ಆಡಿಸಿದ್ದಾರೆ ಎನ್ನುವ ಗುಸುಗುಸು ಚರ್ಚೆ ನಡೆದಿದೆ.

ಇದೊಂದೇ ಪ್ರಕರಣವನ್ನು ಮುಂದಿಟ್ಟುಕೊಂಡು ಕಳೆದ ಒಂದು ವರ್ಷದ ಅವಧಿಯ ಕಡತ, ಪಿಐಡಿ ಎಲ್ಲವನ್ನೂ ವಿಚಾರಣೆಗೊಳಪಡಿಸಿದರೆ ಮೈಸೂರು ಮೂಡಾ ಮೀರಿಸುವಷ್ಟು ಹಗರಣ ಬೆಳಕಿಗೆ ಬರುವ ಸಾಧ್ಯತೆ ಗಳಿವೆ. ಆದರೆ ವಿಚಾರಣೆ ಮಾಡಿಸೋರು, ಮಾಡುವವರು ಯಾರು ಎನ್ನುವುದೇ ಈಗ ಚರ್ಚೆಯ ವಸ್ತು.

Leave a Reply

Your email address will not be published. Required fields are marked *

error: Content is protected !!