ಬೆಳಗಾವಿ
ಪಂಚಮಸಾಲಿ ಮೀಸಲಾತಿ ಹೋರಾಟಗಾರು ಹೈಕೋರ್ಟ್ ಆದೇಶ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ಬಲ ಪ್ರಯೋಗ ಮಾಡಬೇಕಾದ ಅನಿವಾರ್ಯತೆ ಬಂದಿತು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.
ಮಂಗಳವಾರ , ಐಜಿಪಿ,ಎಸ್ಪಿ ಮತ್ತು ನಗರ ಪೊಲೀಸ್ ಆಯುಕ್ತರ ಉಪಸ್ಥಿತಿ ಯಲ್ಲಿ ನಡೆಸಿದ ಜಂಟೀ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕಳೆದ ಎರಡೂ ದಿನದ ಹಿಂದೆ ಪಂಚಮಸಾಲಿ ಮೀಸಲಾತಿ ಹೋರಾಟದ ಅರ್ಜಿ ಬಂದ ಹಿನ್ನೆಲೆಯಲ್ಲಿ ಅವರಿಗೆ ಜಿಲ್ಲಾಡಳಿತದಿಂದ ಕೆಲವೊಂದು ಸೂಚನೆ ನೀಡಲಾಗಿತ್ತು. ಆದರೆ ಹೈರ್ಕೋಟ್ ಆದೇಶದಂತೆ ಕಾನೂನು ಸುವ್ಯವಸ್ಥೆ ಹಾಗೂ ರಾಷ್ಟ್ರೀಯ ಹೆದ್ದಾರಿಯ ಬಂದ್ ಮಾಡದಂತೆ ಸ್ಪಷ್ಟವಾಗಿ ತಿಳಿಸಿದರೂ ಹೋರಾಟಗಾರರು ಜಿಲ್ಲಾಡಳಿತಕ್ಕೆ ಸಹಕರಿಸಬೇಕಿತ್ತು ಎಂದರು.
ಪಂಚಮಸಾಲಿ ಲಿಂಗಾಯತ ಸಮಾಜದವರು ಬೆಳಗಾವಿ ಸುವರ್ಣ ವಿಧಾನಸೌಧ ಮುಂಭಾಗದಲ್ಲಿ ಶಾಂತಿಯುತ ಹೋರಾಟ ನಡೆಸಬೇಕು. ಅವರು ಆಯ್ಕೆ ಮಾಡಿದ ಸ್ಥಳದಲ್ಲಿ ಹೋರಾಟ ಮಾಡಬಹುದಿತ್ತು. ಪಂಚಮಸಾಲಿ ಹೋರಾಟಗಾರು ಬೆಳಗಾವಿ ನಗರದಲ್ಲಿ ಬರಬಹುದು. ಆದರೆ ಟ್ರ್ಯಾಕ್ಟರ್ ತರಬಾರದು ಎಂದು, ಶಾಂತಿಯುತ ಹೋರಾಟ ನಡೆಸಬೇಕು ಹೈಕೋರ್ಟ್ ಆದೇಶ ಮಾಡಿತ್ತು ಎಂದು ಡಿಸಿ ವಿವರಿಸಿದರು
ಹೀಗಾಗಿ ನಾವು ನ್ಯಾಯಾಲಯದ ಆದೇಶ ಪಾಲನೆ ಜೊತೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ಜಿಲ್ಲಾಡಳಿತದ ಕರ್ತವ್ಯ ಎಂದರು.
ಉತ್ತರ ವಲಯ ಐಜಿಪಿ ವಿಕಾಸ್ ಕುಮಾರ ಮಾತನಾಡಿ, ಸುವರ್ಣ ವಿಧಾನಸೌಧದ ಕೊಂಡುಸಕೊಪ್ಪದ ಬಳಿ ಪಂಚಮಸಾಲಿ ಸಮಾವೇಶದ ಮೀಸಲಾತಿ ಹೋರಾಟದ ಪ್ರತಿಭಟನೆಯಲ್ಲಿ ನ್ಯಾಯಾಲಯದ ಆದೇಶದಂತೆ ನಾವು ಕಾನೂನು ಸುವ್ಯವಸ್ಥೆ ಕಾಪಾಡಿದ್ದೇವೆ ಎಂದರು.
ಟ್ರ್ಯಾಕ್ಟರ್ ರ್ಯಾಲಿ ನಡೆಸುತ್ತೇವೆ ಎಂದಾಗ ಪಂಚಮಸಾಲಿ ಮುಖಂಡರಿಗೆ ಫೋನ್ ಕರೆ ಮಾಡಿದ್ದು ನಿಜ. ಆದರೆ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿದ್ದು ತಪ್ಪು ಎಂದರು.

ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಮಾತನಾಡಿ, ಕಾನೂನು ಸುವ್ಯವಸ್ಥೆ ಕಾಪಾಡುವುದು ಪೊಲೀಸರ ಕರ್ತವ್ಯ. ರಾಘವೇಂದ್ರ ಬಡಾವಣೆಯಲ್ಲಿ ಪ್ರತಿಭಟನೆ ಮಾಡಿ ಎಂದರೂ ಅವರು ಕೊಂಡುಸಕೊಪ್ಪದಲ್ಲಿ ಪ್ರತಿಭಟನೆ ಮಾಡುದಾಗಿ ಸ್ವಾಮೀಜಿ ಹೇಳಿದರು. ಅದಕ್ಕೆ ಅನುಮತಿ ನೀಡಿದ್ದೇವು. ಬೆಳಗಾವಿ ಸುವರ್ಣ ವಿಧಾನಸೌಧದ ಮುಂಭಾಗದ ಚನ್ನಮ್ಮ ಮೂರ್ತಿ ಮಾಲಾರ್ಪಣೆಗೆ ಹತ್ತು ಜನಕ್ಕೆ ಅನುಮತಿ ಕೊಟ್ಟಿದ್ದೇವು. ಆದರೆ ಅವರು ಹತ್ತು ಸಾವಿರ ಜನ ಸೌಧಕ್ಕೆ ಹೊರಡಲು ಮುಂದಾದರು. ಆಗ ಏಕಾಏಕಿ ಕಲ್ಲು ತೂರಾಟ ನಡೆಸಿದ ಹಿನ್ನೆಲೆಯಲ್ಲಿ 14 ಪೊಲೀಸರಿಗೆ ಗಂಭೀರವಾಗಿ ಗಾಯವಾಗಿದ್ದು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 70 ರಿಂದ 80 ಜನರನ್ನು ವಶಕ್ಕೆ ಪಡೆದಿದ್ದೇವೆ. ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಸಿದ್ಧತೆ ನಡೆಸಿದ್ದೇವೆ ಎಂದರು.
ಘಟನೆಯಲ್ಲಿ ನಮ್ಮ ಪೊಲೀಸ್ ಇಲಾಖೆಯ ವಾಹನ ಸೇರಿದಂತೆ ನಾಲ್ಕು ಸಾರಿಗೆ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಿ ಜಖಂಗೊಳಿಸಿದ್ದಾರೆ ಎಂದರು.
ಎಸ್ಪಿ ಡಾ. ಭೀಮಾಶಂಕರ ಗುಳೇದ್ ಇದ್ದರು.