38 ವರ್ಷಗಳ ಸಾರ್ಥಕ ಸೇವೆ..!

ಬೆಳಗಾವಿ. ಸತತ 38 ವರ್ಷಗಳ ಕಾಲ ಯಾವುದೇ ಕಪ್ಪು ಚುಕ್ಕೆಯಿಲ್ಲದೇ ನಿರಂತರ ಸರ್ಕಾರಿ‌ಸೇವೆಯನ್ನು‌ ಸಲ್ಲಿಸಿ ನಗುನಗುತ ನೀವೃತ್ತಿಯಾಗುವುದು‌ ಅಷ್ಟು ಸುಲಭದ ಮಾತಲ್ಲ.

ಅಂತಹ ಸಾರ್ಥಕ ಸೇವೆ ಸಲ್ಲಿಸಿ ನಾಳೆ ದಿ. 31 ರಂದು ನಿವೃತ್ತಿಯಾಗುತ್ತಿರುವವರಲ್ಲಿ ಬೂಡಾ ಅಭಿಯಂತ ಎಂ.ವಿ ಹಿರೇಮಠ ಒಬ್ಬರು.

ಬೆಳಗಾವಿ ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಖಾನಾಪುರ ಜಿಲ್ಲಾ ಪಂಚಾಯತಿಯಲ್ಲಿ ಇವರು ಸೇವೆ ಸಲ್ಲಿಸಿದ್ದಾರೆ. ಈಗ ಬೆಳಗಾವಿ‌ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಭಿಯಂತರಾಗಿ ಸೇವೆ ಸಲ್ಲಿಸಿ ನಾಳೆ ನಿವೃತ್ತಿ ಹೊಂದಲಿದ್ದಾರೆ.

ಹಾಗೇ ನೋಡಿದರೆ ಹಿರೇಮಠರಿಗೆ ಅಭಿಮಾನಿ ಬಳಗ ಜಾಸ್ತಿ. ಯಾರೊಂದಿಗೂ ವೈರತ್ವ ಕಟ್ಟಿಕೊಳ್ಳದೇ ನಗುಮುಖದಿಂದಲೇ ಸ್ಪಂದಿಸುವ ಕೆಲಸ ಮಾಡುತ್ತಾರೆ. ಸದಾ ಓಂ ಶಾಂತಿ ಮಂತ್ರ ಪಠಿಸುವ ಅವರು ತಮ್ಮ‌ಸೇವಾ ಅವಧಿಯಲ್ಲಿ ಮುಖ‌ ಸಿಂಡರಿಸಿಕೊಂಡಿದ್ದು .ಅಪರೂಪವೇ ಸರಿ.!

ನಾಳೆ ನಿವೃತ್ತಿಯಾಗುವ ಅವರನ್ನು ಸನ್ಮಾನಿಸಲು ಇಂದಿನಿಂದಲೇ ಅಭಿಮಾನಿಗಳು ದೌಡಾಯಿಸುತ್ತಿದ್ದಾರೆ.


ಬೆಳಗಾವಿ ಮಹಾನಗರ ಪಾಲಿಕೆ, ಲೋಕೋಪಯೋಗಿ ಇಲಾಖೆ ಹಾಗೂ ಬುಡಾದಲ್ಲಿ ಸೇವೆ ಸಲ್ಲಿಸಿ ಸೆ.೧ರಂದು ನಿವೃತ್ತರಾಗಲಿರುವ ಬುಡಾ ಅಭಿಯಂತರ ಎಂ.ವಿ.ಹಿರೇಮಠ ಅವರನ್ನು
ಬುಧವಾರ ಸನ್ಮಾನಿಸಿ, ಭವಿಷ್ಯ ಉಜ್ವಲಗಲೆಂದು ಅಭಿಮಾನಿಗಳು ಶುಭ ಹಾರೈಸಿದರು.
ಬೆಳಗಾವಿ ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ರಾಜಶೇಖರ ಡೋಣಿ, ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ವಾಣಿ ವಿಲಾಸ ಜೋಶಿ, ಅಶೋಕ ಚಂದರಗಿ, ಪತ್ರಕರ್ತ ರಾಜಶೇಖರ ಪಾಟೀಲ, ಪಾಲಿಕೆ ಸದಸ್ಯ ಹನುಮಂತ ಕೊಂಗಾಲಿ ಬುಡಾ ಅಭಿಯಂತ ಆರ್.ಎಸ್. ನಾಯಕ ಮೊದಲಾವರು ಎಂ.ವಿ.ಹಿರೇಮಠ ಅವರನ್ನು ಸನ್ಮಾನಿಸಿ, ಶುಭ ಹಾರೈಸಿದರು.

ಬೆಳಗಾವಿ ಮಹಾನಗರ ಪಾಲಿಕೆಯ ಆಡಳಿತ ಪಕ್ಷದ ಸಭಾ ನಾಯಕ ರಾಜಶೇಖರ ಡೋಣಿ ಮಾತನಾಡಿ, ಎಂ.ವಿ.ಹಿರೇಮಠ ಅವರು ವೃತ್ತಿ ಜೀವನದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಅವರು ನಾಳೆ ನಿವೃತ್ತರಾಗುತ್ತಿದ್ದು, ಅವರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು
ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ್ ಚಂದರಗಿ ಮಾತನಾಡಿ, ಎಂ. ವಿ. ಹಿರೇಮಠ ಜನಪ್ರಿಯ ಅಧಿಕಾರಿ. ನಿವೃತ್ತಿಯ ನಂತರ ಸಮಾಜ ಸೇವೆ ಮಾಡುವ ಅವಕಾಶ ದೇವರು
ಕೊಟ್ಟಿದ್ದಾನೆ. ಅವರಿಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ಹಾರೈಸಿದರು ನಗರಸೇವಕ ಹನುಮಂತ ಕೊಂಗಾಲಿ ಮಸತನಾಡಿದರು.

Leave a Reply

Your email address will not be published. Required fields are marked *

error: Content is protected !!