ಶಿಷ್ಟಾಚಾರ ಉಲ್ಲಂಘನೆ ಹೆದರಿದ ಹೆಸ್ಕಾಂ
ಮೋದಿ ಪೊಟೊ ಪ್ರತ್ಯಕ್ಷ
ಶಾಸಕ ಅಭಯ ಪಾಟೀಲ ಕೊಟ್ಟ ನೋಟೀಸ್
ನೋಟೀಸ್ ಚರ್ಚೆಗೆ ಬರುವ ಮುನ್ನವೇ ಭಿತ್ತಿ ಪತ್ರದಲ್ಲಿ ಮೋದಿ ಪೊಟೊ ಪ್ರತ್ಯಕ್ಷ
ಬೆಳಗಾವಿ.
ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲರು ಕೊಟ್ಟ ಶಿಷ್ಟಾಚಾರ ಉಲ್ಲಂಘನೆ ನೋಟೀಸ್ ಹಿನ್ನೆಲೆಯಲ್ಲಿ ಸರ್ಕಾರದ ಭಿತ್ತಿ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಪ್ರತ್ಯಕ್ಷವಾಗಿದೆ.

ಪ್ರಧಾನಿ ಮೋದಿ ಪೊಟೊ ಇರದ ಭಿತ್ತಿಪತ್ರ
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯ ಭಿತ್ತಿ ಪತ್ರದಲ್ಲಿ ಪ್ರಧಾನ ಮಂತ್ರಿ ಪೊಟೊ ಬದಲು ಕೇವಲ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮತ್ತು ಇಂಧನ ಖಾತೆ ಮಂತ್ರಿ ಕೆ.ಜೆ. ಜಾರ್ಜ ಅವರ ಭಾವಚಿತ್ರವನ್ನು ಹಾಕಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಭಿತ್ತಿ ಪತ್ರವನ್ನು ಪ್ರಕಟಿಸಿತ್ತು,

ಇದನ್ನು ಗಂಭೀರವಾಗಿ ಪರಿಗಣಿಸಿದ ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲರು ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು ಇದರಲ್ಲಿ ಪ್ರಧಾನಿ ಅವರ ಭಾವಚಿತ್ರ ಇರಬೇಕಿತ್ತು ಎಂದು ಹೇಳಿ ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಹೇಳಿ ಕಳೆದ ದಿನ ಪತ್ರವನ್ನು ಕೊಟ್ಟಿದ್ದರು.

ಈ ಪತ್ರ ಸಂಬಂಧಿಸಿದವರ ಕೈ ಸೇರಿದ ತಕ್ಷಣ ಮತ್ತು ಅದರ ಬಗ್ಗೆ ಸದನದಲ್ಲಿ ಚರ್ಚೆಗೆ ಬರುವ ಮುನ್ನವೇ ಎಚ್ಚೆತ್ತುಕೊಂಡ ಸಂಬಂಧಿಸಿದವರು ಮುಖ್ಯಮಂತ್ರಿಗಳು ಅಷ್ಟೇ ಇದ್ದ ಭಿತ್ತಿಪತ್ರವನ್ನು ರದ್ದುಗೊಳಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ವಿರುವ ಮತ್ತೊಂದು ಭಿತ್ತಿ ಪತ್ರವನ್ನು ಮುದ್ರಿಸಿತು.