*ಆರಂಭ ಶೂರತ್ವವಾದ ಬಿಜೆಪಿ ಹೋರಾಟ .
ಕೊಟ್ಟ ಮಾತಿಗೆ ತಪ್ಪಿದ ಶಾಸಕ ಅರವಿಂದ ಬೆಲ್ಲದ.
ರುದ್ರೇಶ ಸಾವಿಗೆ ಸಿಗದ ನ್ಯಾಯ.
ಸುಳ್ಳು ಹೇಳಿದ ಬಿಜೆಪಿಗರು* .
ಬೆಳಗಾವಿ:
ಗಡಿನಾಡ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲ ಅಧಿವೇಶನ ಹೇಗೆ ನಡೆಯಿತು ಎನ್ನುವುದು ಗುಟ್ಟಿನ ವಿಷಯವೇನಲ್ಲ.
ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಬೇಕಿದ್ದ ಆಡಳಿತ ಮತ್ತು ವಿರೋಧ ಪಕ್ಷದವರು ತಮ್ಮ ಅಂತರಿಕ ಕಚ್ಚಾಟದಲ್ಲಿಯೇ ಕಾಲಹರಣ ಮಾಡಿದರು.
ಇದೆಲ್ಲದರ ನಡುವೆ ಬಿಜೆಪಿಗರು ಕೊಟ್ಟ ಮಾತಿಗೆ ತಪ್ಪಿದರು ಎನ್ನುವ ಅಸಮಾಧಾನವಿದೆ.
ಮಾತು ತಪ್ಪಿದ ಬಿಜೆಪಿ
ಗಡಿನಾಡ ಬೆಳಗಾವಿಯ ತಹಶೀಲ್ದಾರ ಕಚೇರಿಯ ದ್ವಿತೀಯ ದರ್ಜೆ ಗುಮಾಸ್ತ್ ರುದ್ರೇಶ ಯಡವಣ್ಣವರ ಆತ್ಮಹತ್ಯೆ ಪ್ರಕರಣ ಸದ್ದು ಮಾಡಿತ್ತು. ಈ ಪ್ರಕರಣದಲ್ಲಿ ಖುದ್ದು ಬೆಳಗಾವಿ ತಹಶೀಲ್ದಾರ ಸೇರಿದಂತೆ ಸಚಿವೆ ಹೆಬ್ಬಾಳಕರ ಆಪ್ತ ಸೋಮು ಮತ್ತು ಇನ್ನೊಬ್ಬರು ಶಾಮೀಲಾಗಿದ್ದರು. ಈ ಬಗ್ಗೆ ಕೇಸ್ ದಾಖಲಾಗಿ ಈಗ ಜಾಮೀನ ಮೇಲೆ ಹೊರಗಿದ್ದಾರೆ.

ಆದರೆ ಈ ಪ್ರಕರಣದಲ್ಲಿ ಖಾಕಿ ತನಿಖೆಯನ್ನು ಗಮನಿಸಿದರೆ ಅದು ಆರೋಪಿಗಳಿಗೆ ಸಹಾಯಮಾಡುವಂತಿತ್ತು ಎನ್ನುವ ದೂರುಗಳು ಕೇಳಿ ಬಂದವು.
ಅದೆಲ್ಲದರ ಜೊತೆ ಗೆ ಈ ಪ್ರಕರಣದಲ್ಲಿ ಕೊಟ್ಟ ಮಾತು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಎಡವಿತು ಎನ್ನುವುದರಲ್ಲಿ ಎರಡು ಮಾತಿಲ್ಲ.
ಆರಂಭದಲ್ಲಿ ಬಿಜೆಪಿ ಉಗ್ರ ಹೋರಾಟವನ್ನು ಗಮನಿಸಿದಾಗ ನೋಂದವರಿಗೆ ನ್ಯಾಯ ಸಿಗಬಹುದು ಅನಿಸಿತ್ತು. ಅಷ್ಟೆ ಅಲ್ಲ ಶಾಸಕ ಅರವಿಂದ ಬೆಲ್ಲದ ಅವರು ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸುವುದಾಗಿ ಹೇಳಿದ್ದರು.ಆದರೆ ಅವರಷ್ಟೇ ಅಲ್ಲ ಯಾವ ಬಿಜೆಪಿಗರು ರುದ್ರೇಶ ಸಾವಿಗೆ ನ್ಯಾಯ ಕೊಡಿಸುವ ಕೆಲಸ ಮಾಡಲಿಲ್ಲ. ಇದು ಈಗ ಚರ್ಚೆಯ ವಸ್ತುವಾಗಿದೆ.