“ನನ್ನನ್ನು ಒಟ್ಟು 4 ಜಿಲ್ಲೆ, 11 ಗಂಟೆಗೂ ಹೆಚ್ಚಿನ ಕಾಲ ಅಲೆದಾಡಿಸಿದ್ದಾರೆ. ಮಾನಸಿಕವಾಗಿ ಕುಗ್ಗಿಸುವ ಕೆಲಸ ಮಾಡಿದ್ದಾರೆ. ದೈಹಿಕವಾಗಿ ಹಲ್ಲೆ ಮಾಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಪೊಲೀಸ್ ಪವರ್ ಮೂಲಕ ಮಾಡಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಿಸಿದ್ದಾರೆ. ಬಿ.ವೈ.ವಿಜಯೇಂದ್ರ, ಆರ್.ಆಶೋಕ್, ನಾರಾಯಣಸ್ವಾಮಿ ಎಲ್ಲರೂ ಸಂಕಷ್ಟದ ಸಮಯದಲ್ಲಿ ನನಗೆ ಅತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು” ಎಂದರು.
ಹೈಕೋರ್ಟ್ ಆದೇಶದ ಬಗ್ಗೆ ಸತ್ಯಮೇವ ಜಯತೇ ಎಂದು ಒಂದೇ ಮಾತು ಹೇಳುವೆ. ಸತ್ಯಕ್ಕೆ ಜಯ ಸಿಗುತ್ತೆ ಎಂದು ಹೇಳಿದ್ದೆ. ಸತ್ಯಕ್ಕೆ ಜಯ ಸಿಕ್ಕಿದೆ. ಕಾಂಗ್ರೆಸ್ ಪಕ್ಷ ಪೊಲೀಸ್ ಪವರ್ ಮೂಲಕ ನನ್ನನ್ನು ಕುಗ್ಗಿಸುವ ಕೆಲಸ ಮಾಡಿದರೆ ನಾನು ಕುಗ್ಗುವುದಿಲ್ಲ. ಇಂತಹ ಸಂಕಷ್ಟಗಳನ್ನು 35 ವರ್ಷಗಳಿಂದ ನೋಡಿಕೊಂಡು ಬಂದಿದ್ದೇನೆ ಎಂದರು