ಬೆಳಗಾವಿ. ಗುತ್ತಿಗೆದಾರನ ಕಿರುಕುಳಕ್ಕೆ ಬೆಳಗಾವಿ ಮಹಾನಗರ ಪಾಲಿಕೆಯ ಪೌರಕಾರ್ಮಿಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಗಣೇಶಪುರದಲ್ಲಿ ನಡೆದಿದೆ.
ಕಾರ್ಮಿಕ ಶಶಿಕಾಂತ ಸುಭಾಷ್ ಢವಳೆ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡವ ಎಂದು ಗೊತ್ತಾಗಿದೆ.

ದಲಿತ ಸಂಘಟನೆಗಳಿಂದ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ
ಸಂಬಳ ನೀಡದ್ದೂ ಸೇರಿದಂತೆ ಬಡ್ಡಿಗೆ ಹಣ ಕೊಟ್ಟರು ಒಂದು ರೀತಿಯ ಮಾನಸಿಕ ಕಿರಿಕಿರಿ ನೀಡುತ್ತಿದ್ದನು ಎನ್ನಲಾಗಿದೆ

ಶಶಿಕಾಂತ ಢವಳೆ ಅವರು ಕಳೆದ ಹನ್ನೆರಡು ವರ್ಷಗಳಿಂದ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಎನ್. ಡಿ. ಪಾಟೀಲ್ ಸ್ವಚ್ಛತಾ ಗುತ್ತಿಗೆದಾರರೊಬ್ಬರ ಬಳಿ ಕೂಲಿ ಕೆಲಸ ಮಾಡುತ್ತಿದ್ದರಂತೆ. .ಆರ್ಥಿಕ ತೊಂದರೆಯಿಂದ ಗುತ್ತಿಗೆದಾರ ಪಾಟೀಲ ಎಂಬುವರಿಂದ ಬಡ್ಡಿಗೆ 80 ಸಾವಿರ ರೂ. ಸಾಲ ಪಡೆದು ಅದಕ್ಕೆ ಬಡ್ಡಿ ಸಮೇತ ವಾಪಸ್ ಕೊ ಟ್ಟಿದ್ದರಂತೆ. ಆದರೆ, ಗುತ್ತಿಗೆದಾರ ಎನ್. ಡಿ. ಪಾಟೀಲ ಮತ್ತು ಅವರ ಮೇಲ್ವಿಚಾರಕ ಶಂಕರ ಅಷ್ಟೇಕರ ಅವರು ಇನ್ನೂ ಹೆಚ್ಚಿನ ಹಣ ನೀಡುವಂತೆ ಕಿರುಕಳ ನೀಡುತ್ತಿದ್ದರು ಎನ್ನಲಾಗಿದೆ. .
ಮಹಾರಾಷ್ಟ್ರದವರಿಗೆ ಕೆಲಸ- ವಿಚಾರಣೆಗೆ ಆದೇಶ

https://ebelagavi.com/index.php/2023/08/29/hey-5/
ಪ್ರತಿ ತಿಂಗಳು ಗುತ್ತಿಗೆದಾರರು ಸಾಲ ಮತ್ತು ಬಡ್ಡಿಯಾಗಿ ಶಶಿಕಾಂತ್ ಅವರಿಂದ ಸಂಬಳ ಪಡೆಯುತ್ತಿದ್ದರು

ಎಂದು ಶಶಿಕಾಂತ್ ಪತ್ನಿ ಪ್ರಿಯಾಂಕಾ ಹೇಳಿದ್ದಾರೆ. ಹೆಚ್ಚಿನ ಹಣ ನೀಡಬೇಕೆಂದು ಗುತ್ತಿಗೆದಾರ ಪಾಟೀಲ ಹಾಗೂ ಮೇಲ್ವಿಚಾರಕ ಶಂಕರ ಅಷ್ಟೇಕರ ಅವರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದರು. ಇದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಶಶಿಕಾಂತ್ ನಿನ್ನೆ ರಾತ್ರಿ ಮನೆಯಲ್ಲಿ ಎಲ್ಲರೂ ಮಲಗಿದ್ದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದರು..
ACP ಎತ್ತಂಗಡಿಗೆ CPI ಸ್ಕೆಚ್

https://ebelagavi.com/index.php/2023/08/31/hey-6/
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಹುತೇಕ ಗುತ್ತಿಗೆದಾರರು ಪೌರಕಾರ್ಮಿಕರಿಗೆ ಒಂದಿಲ್ಲೊಂದು ರೀತಿಯಲ್ಲಿ ತೊಂದರೆ ಕೊಡುತ್ತಿದ್ದಾರೆ ಎನ್ನುವ ದೂರುಗಳಿವೆ
ಈ ಹಿಂದೆ ಪೌರಕಾರ್ಮಿಕರಿಗೆ ಆಗುತ್ತಿರುವ ತೊಂದರೆ ಕುರಿತು ಕೆಲವರು ಲೋಕಾಯುಕ್ತ ಮತ್ತು ಎಸಿಬಿಯವರಿಗೆ ದೂರು ಸಹ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು. ಈಗಲೂ ಪೌರಕಾರ್ಮಿಕರಿಗೆ ತಿಂಗಳು ಸರಿಯಾಗಿ ಸಂಬಳ ಸಿಗುತ್ತಿಲ್ಲ ಎನ್ನುವ ದೂರಿದೆ.
3 ಲಕ್ಷ ಪರಿಹಾರ

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ದಲಿತ ಮುಖಂಡ ಮಲ್ಲೇಶ ಚೌಗಲೆ ಅವರು ಮೃತ ಕುಟುಂಬಕ್ಕೆ ಐದು ಲಕ್ಷ ರೂ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.
ಪೌರ ಕಾರ್ಮಿಕರಿಗೆ ಕಿರುಕುಳ ನೀಡುವ ಗುತ್ತಿಗೆದಾರನನ್ನು ಬದಲಾಯಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಗುತ್ತಿಗೆದಾರರು ಮೃತ ಕುಟುಂಬಕ್ಕೆ ಮೂರು ಲಕ್ಷ ಪರಿಹಾರ ನೀಡಿದ್ದಾರೆಂದು ಮಲ್ಲೇಶ ಚೌಗಲೆ ತಿಳಿಸಿದ್ದಾರೆ.