‘
ಬೆಳಗಾವಿ:
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ರಾಜ್ಯದ ಮುಖ್ಯಮಂತ್ರಿ ಆಗಲಿ’ ಎಂದು ಅಭಿಮಾನಿಯೊಬ್ಬರು ಶಬರಿಮಲೈಯ ಅಯ್ಯಪ್ಪ ಸ್ವಾಮಿಗೆ ಹರಕೆ ಹೊತ್ತು ಎಲ್ಲರ ಗಮನ ಸೆಳೆದಿದ್ದಾರೆ.
ಹೌದು…. ಬೆಳಗಾವಿ ಜಿಲ್ಲಾಯ ಗೋಕಾಕ ಪಟ್ಟಣದ ಅಯ್ಯಪ್ಪ ಮಾಲಾಧಾರಿ ಸಂತೋಷ ಸಂಕಪಾಳೆ ಎಂಬುವರು ಅಯ್ಯಪ್ಪಸ್ವಾಮೀ ಮಾಲೆ ಧರಸಿ ಶಬರಿಮಲೈಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಎದುರು ನಿಂತು ಸಚಿವ ಸತೀಶ್ ಜಾರಕಿಹೊಳಿ ಅವರ ಭಾವಚಿತ್ರ ಹಿಡಿದು ಈ ವಿಶೇಷ ಹರಕೆ ಹೊತ್ತಿದ್ದಾರೆ. ಮಕರ ಸಂಕ್ರಾಂತಿಯ ಮುನ್ನ ಶಬರಿ ಮಲೆಯ ಸ್ವಾಮಿ ಅಯ್ಯಪ್ಪನ ವೃತ್ತ ವನ್ನು ಆಚರಿಸುವ ಶ್ರೀ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಈ ಬಾರಿ ಕರದಂಟು ನಾಡಿನ ಅವರ ಅಭಿಮಾನಿ ವಿಶೇಷವಾಗಿ ಹರಕೆಯನ್ನು ಹೊತ್ತಿದ್ದಾರೆ.

ಹಿಂದೆ ಸಚಿವ ಸತೀಶ್ ಜಾರಕಿಹೊಳಿ ಅವರ ಅಭಿಮಾನಿಗಳಿಂದ ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಅಭಿಯಾನ ಪ್ರಾರಂಭಿಸಲಾಗಿತ್ತು. ಇದು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಕೂಡಾ ಆಗಿತ್ತು. ಅಲ್ಲದೇ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಸ್ಥಾನ ಲಭಿಸಲಿ ಎಂದು ಪತ್ರಿಕೆಗೆ ಜಾಹೀರಾತುಗಳನ್ನ ನೀಡಿ ಅವರ ಅಭಿಮಾನಿಗಳು ಗಮನ ಸೆಳೆದಿದ್ದರು. ಆದರೆ ಈಗ ಅಯ್ಯಪ್ಪ ಸ್ವಾಮಿಯ ಮಾಲಾಧಾರಿ ಸಂತೋಷ ಅವರು ಶಬರಿಮಲೈಯ ಅಯ್ಯಪ್ಪಸ್ವಾಮೀ ದೇವರಿಗೆ ವಿನೂತನ ಹರಕೆ ಹೊತ್ತು ಎಲ್ಲರ ಗಮನ ಸೆಳೆದಿದ್ದಾರೆ.
