3 ವರ್ಷ..3 ಸುಫಾರಿ ಕೊಲೆ…!

ಎಸ್ಪಿ ಸಾರಥ್ಯದಲ್ಲಿ ಪ್ರಕರಣ ಬೇಧಿಸಿದ ಸಿಪಿಐ ಜಾವೇದ ಮುಷಾಪುರಿ.

2022 ರಿಂದ 2024 ರವರೆಗೆ ಮೂರು ಸುಫಾರಿ ಕೊಲೆಗಳು

ಪತಿಯ ಕೊಲೆಗೆ ಪತ್ನಿಯರದ್ದೇ ಸುಫಾರಿ.

70 ಸಾವಿರದಿಂದ 3 ಲಕ್ಷವರೆಗೆ ಸುಫಾರಿ.

ಬಂಗಾರ ಅಡವಿಟ್ಟು ಸುಫಾರಿ ಹಣ ನೀಡಿದ ಪತ್ನಿಯಂದಿರು.

ಬೆಳಗಾವಿ.

ಕೇವಲ ನಗರ ಪ್ರದೇಶಗಳಿಗೆ ಮಾತ್ರ ಸಿಮೀತವಾಗಿದ್ದ ಸುಫಾರಿ ಕೊಲೆ ಈಗ ಗ್ರಾಮೀಣ ಪ್ರದೇಶಕ್ಕೂ ವ್ಯಾಪಿಸಿದೆ.

ಆದರೆ ಸುದೈವವಶಾತ್ ಪೊಲೀಸರು ಮಾತ್ರ ಅಂತಹ ಸುಫಾರಿ ಹಂತಕರನ್ನು ಹೆಡಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಅದಕ್ಕೆ ಉತ್ತಮ‌ ಉದಾಹರಣೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಪೊಲೀಸ್ ಠಾಣೆ.!

ಇಲ್ಲಿನ ಸಿಪಿಐ ಜಾವೇದ್ ಮುಷಾಪುರೆ ಅವರು ಎಸ್ಪಿ ಭೀಮಾಶಂಕರ ಗುಳೇದ ಮಾರ್ಗದರ್ಶನದಲ್ಲಿ ಕಾರ್ನಿರ್ವಹಿಸದೇ ಹೋಗಿದ್ದರೆ ಇನ್ನೂ ಎಷ್ಟು ಕೊಲೆಗಳು ನಡೆಯುತ್ತಿದ್ದವು ಎನ್ನುವ ಆತಂಕ ಬಾರದೇ ಇರದು.

ಅಚ್ಚರಿ ಮತ್ತು ಆಘಾತಕಾರಿ ಸಂಗತಿ ಎಂದರೆ ಕೇವಲ 70 ಸಾವಿರದಿಂದ 3 ಲಕ್ಷ ರೂಗೆ ಬರೊಬ್ಬರಿ ಮೂರು ಸುಫಾರಿ ಕೊಲೆಗಳಾಗಿವೆ ಅದರಲ್ಲಿ ಎರಡು ಕೊಲೆಗಳಿಗೆ ಪತ್ನಿಯರೇ ಸುಫಾರಿ ನೀಡಿದ್ದರೆ ಮತ್ತೊಂದು ಕೇಸ್ ದಲ್ಲಿ ಸಹೋದರನೇ ದೊಡ್ಡಣ್ಣನ ಕೊಲೆಗೆ ಸುಫಾರಿ ಕೊಟ್ಟಿದ್ದನು.

ಇನ್ನೂ ಅಚ್ಚರಿಯ ಸಂಗತಿ ಎಂದರೆ, ಈ‌ ಕೊಲೆಗಳು ಇಂದು ನಿನ್ನೆ ನಡೆದಿಲ್ಲ. ಕಳೆದ 2022 ರಿಂದ 2024 ರ ಅವಧಿಯಲ್ಲಿ ನಡೆದಿವೆ‌ .ಆದರೆ ಚಾಣಾಕ್ಷ ಪೊಲೀಸ್ ಅಧಿಕಾರಿ ಮನಸ್ಸು ಮಾಡಿದರೆ ಎಂತಹುದೇ ಜಟಿಲ ಸಮಸ್ಯೆ ಯನ್ನು ಸುಲಭವಾಗಿ ಬಗೆಹರಿಸಬಹುದು ಎನ್ನುವುದಕ್ಕೆ ಈ ಮೂರು ಪ್ರಕರಣಗಳು ಉತ್ತಮ ಉದಾಹರಣೆ..

ನಡೆದಿದ್ದು ಏನು?
ಕಳೆದ ದಿನ 10 ರಂದು ಹುಕ್ಕೇರಿ ತಾಲೂಕಿನ ಹಳ್ಳದಕೇರಿ ಗ್ರಾಮದ ಕಲ್ಲಪ್ಪ ಭೀಮಪ್ಪಾ ಸುಟಗನ್ನವರ ಎಂಬುವರು ನೀಡಿದ ದೂರಿನ ಜಾಡು ಹಿಡಿದ ಹೊರಟಾಗ ಈ ಸುಫಾರಿ ಕೊಲೆಗಳ ರಹಸ್ಯ ಬೆಳಕಿಗೆ ಬಂದಿತು.
ಕಳೆದ 2024 ರ ಎಪ್ರಿಲ್ ತಿಂಗಳಲ್ಲಿ ಹಟ್ಟಿಆಲೂರಿನಲ್ಲಿ ನಡೆದ ಮಹಾಂತೇಶ ಸುಟಗನ್ನವರ ಎಂಬುವರ ಕೊಲೆ ಪ್ರಕರಣದಲ್ಲಿ ಸಂಶಯ ವ್ಯಕ್ತಪಡಿಸಿ ಕಲ್ಲಪ್ಪ ದೂರು ನೀಡಿದ್ದರು,

ಸುಫಾರಿ ಕೊಟ್ಟ ಪತ್ನಿಯರು…


ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಸಿಪಿಐ ಜಾವೇದ್ ಮುಶಾಪುರೆ ಅವರು ಎಸ್ಪಿಯವರ ಮಾರ್ಗದರ್ಶನದಲ್ಲಿ ವಿಚಾರಣೆ ನಡೆಸಿದಾಗ ಇದು ಸುಪಾರಿ ಕೊಲೆ ಎನ್ನುವ ರಹಸ್ಯ ಬೆಳಕಿಗೆ ಬಂದಿತು,
ಇಲ್ಲಿ ಮೃತನ ಪತ್ನಿ ಮಾಲಾ ಅವಳನ್ನು ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆಗೆ 70 ಸಾವಿರ ರೂ ಸುಪಾರಿ ನೀಡಿದ್ದನ್ನು ಒಪ್ಪಿಕೊಂಡಳು ಎಂದು ಎಸ್ಪಿ ವಿವರಿಸಿದರು,


ಇಲ್ಲಿ ಪತಿಯ ಕಿರುಕುಳಕ್ಕೆ ಬೇಸತ್ತು ಮಾಲಾ ಹಟ್ಟಿಆಲೂರಿನ ಆಕಾಶ ಬಸಲಿಂಗಪ್ಪ ದೇಸಾಯಿ ಇವನಿಗೆ ಸುಫಾರಿ ಕೊಟ್ಟಿದ್ದರ ಬಗ್ಗೆ ಪೊಲೀಸರು ನಡೆಸಿದ ತನಿಖೆಯಲ್ಲಿ ಗೊತ್ತಾಗಿದೆ,
ಆದರೆ ಇಲ್ಲಿ ಮಹಾಂತೇಶನುಅತೀಯಾಗಿ ಮದ್ಯಸೇವನೆ ಮಾಡಿ ಮೃತಪಟ್ಟಿದ್ದಾನೆ ಎಂದು ಬಿಂಬಿಸುವ ಕೆಲಸವನ್ನು ಪತ್ನಿ ಮಾಲಾ ಮಾಡಿದ್ದಳು,
ಇಲ್ಲಿ ಆಕಾಶನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸಂದರ್ಭದಲ್ಲಿ ರಮೇಶ ಲಗಮಪ್ಪಾ ಮಾಳಗಿ (ಹಟ್ಟಿಆಲೂರ) ಮತ್ತು ಅಪ್ಪಣ್ಣಾ ಮುಶಪ್ಪಾ ನಾಯಿಕ (ಪಾಶ್ಚಾಪೂರ) ಎಂಬುವರು ಭಾಗಿಯಾಗಿದ್ದರ ಬಗ್ಗೆ ಬೆಳಕಿಗೆ ಬಂದಿತು,
ಅಷ್ಟೇ ಅಲ್ಲ ಈ ಹಂತಕರು ಹಣದ ಆಸೆಗಾಗಿ 2022 ರಲ್ಲಿ ಹಟ್ಟಿಆಲೂರದ ನಾಗಪ್ಪಾ ವಿಠಲ ಮರೆಪ್ಪಗೋಳ ಎಂಬುವರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದರು ಎನ್ನುವುದು ಪೊಲೀಸರಿಗೆ ಗೊತ್ತಾಯಿತು,
ಇಲ್ಲಿ ನಾಗಪ್ಪನ ಪತ್ನಿ ಯಲ್ಲವ್ವಳು ಮತ್ತೊಬ್ಬನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು, ಈ ಹಿನ್ನೆಲೆಯಲ್ಲಿ ಗಂಡ-ಹೆಂಡತಿ ನಡುವೆ ನಿತ್ಯ ಜಗಳ ನಡೆಯುತ್ತಿತ್ತು,
ಇಲ್ಲಿ ಯಲ್ಲವ್ವ ಕೂಡ ತನ್ನ ಪತಿಯ ಕೊಲೆಗೆ ಮೂರು ಲಕ್ಷ ಹಣಕ್ಕೆ ಇದೇ ಹಂತಕರಿಗೆ ಸುಪಫಾರಿ ಕೊಟ್ಟಿದ್ದರು ಎನ್ನುವ ಸಂಗತಿ ಕೂಡ ಬೆಳಕಿಗೆ ಬಂದಿತು,

ಅಷ್ಟೇ ಅಲ್ಲ ಸುಫಾರಿ ಹಂತಕರು ನಾಗಪ್ಪನಿಗೆ ಸಾವಳಗಿ ಜಾತ್ರೆಯ ದಿನ ಪಾಟರ್ಿಗೆ ಕರೆದುಕೊಂಡು ಹೋಗಿ ಸಾರಾಯಿ ಕುಡಿಸಿ ಹಗ್ಗದಿಂದ ಬಿಗಿದು ಕೊಲೆಮಾಡಿದ್ದಲ್ಲದೇ ಶವವನ್ನು ಪರಕನಟ್ಟಿ ಸಮೀಪ ರೇಲ್ವೆ ಹಳಿಯ ಮೇಲೆ ಆತ್ಮಹತ್ಯೆ ಕಥೆ ಕಟ್ಟಿದ್ದರು.

ಸಹೋದರನ ಕೊಲೆ..
ಸಾರಾಯಿ ಚಟಕ್ಕೆ ಬಿದ್ದು 23 ಲಕ್ಷ ಸಾಲ ಮಾಡಿದ ಸಹೋದರನನ್ನು ಸುಫಾರಿ ಕೊಟ್ಟು ಕೊಲೆ ಮಾಡಿಸಿದ ಪ್ರಕರಣವನ್ನು ಈ ಪೊಲೀಸರು ಬೇಧಿಸಿದ್ದಾರೆ,
ಕಳೆದ 2023ರಲ್ಲಿ ಆರೋಪಿ ರಮೇಶ ಲಗಮಪ್ಪಾ ಮಾಳಗಿ ಇವನ ಹಿರಿಯ ಸಹೋದರ ವಿಠಲ ಮಾಳಗಿ ಸಾರಾಯಿ ಕುಡಿಯುವ ಚಟಕ್ಕೆ ಅಂಟಿಕೊಂಡು ತನ್ನ ಜಮೀನನ್ನು 22 ಲಕ್ಷ ರೂಪಾಯಿಗೆ ಅಡವಿಟ್ಟಿದ್ದು ಈ ಕೊಲೆಗೆ ಕಾರಣ.
ಇಲ್ಲಿ ಕೂಡ ಆಕಾಶ ಬಸಲಿಂಗಪ್ಪಾ ಗೋಕಾವಿ ಮತ್ತು ಅಪ್ಪಣ್ಣಾ ಕೂಡಿ ಕೊಲೆ ಮಾಡುವ ಬಗ್ಗೆ ಸಂಚು ನಡೆಸಿದ್ದರು.

ಇಲ್ಲಿ ಮೃತ ವಿಠ್ಠಲನನ್ನು ಸರಾಯಿ ಕುಡಿಸಲು ಪಾಶ್ಚಾಪೂರ ಹತ್ತಿರದ ಕುಂದರಗಿ ಗುಡ್ಡಕ್ಕೆ ರಾತ್ರಿ ಕರೆದುಕೊಂಡು ಹೋಗಿದ್ದರು. ಅಲ್ಲಿ ಈ ಮೂವರು ಸೇರಿ ಹಗ್ಗದಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದರು. ಅಷ್ಟೇ ಅಲ್ಲ ಕೊನೆಗೆ ಶವವನ್ನು ದ್ವಿಚಕ್ರ ವಾಹನದಲ್ಲಿ ತೆಗೆದುಕೊಂಡು ಬಂದು ಅವನ ಮನೆಯ ಮುಂದೆ ಬೀಳಿಸಿ ಅಪಘಾತ ಎಂದು ತೋರಿಸುವ ಪ್ರಯತ್ನ ನಡೆಸಿದ್ದರು, ಕೊನೆಗೆ ಪ್ರಕರಣವನ್ನೂ ದಾಖಲು ಮಾಡದೇ ತಮ್ಮದೇ ಜಮೀನಿನಲ್ಲಿ ಸುಟ್ಟು ಅಂತ್ಯಕ್ರಿಯೆ ಮಾಡಿ ಸಾಕ್ಷಿ ನಾಶ ಮಾಡಿದ್ದರು. ಇದೆಲ್ಲವನ್ನು ಆರೋಪಿಗಳು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾರೆಂದು ಎಸ್ಪಿ ಗುಳೇದ ವಿವರಿಸಿದರು,

ಬೆಳಕಿಗೆ ಬಂದಿದ್ದು ಹೇಗೆ?
ಇಲ್ಲಿ ಒಟ್ಟಾರೆ ಈ ಮೂರು ಸುಫಾರಿ ಕೊಲೆಗಳು ಬೆಳಕಿಗೆ ಬಂದಿದ್ದೇ ಒಂದು ರೋಚಕ ಕಹಾನಿ ಇದೆ,.
ಜಾವೇದ್ ಮುಷಾಪುರಿ ಅವರು ಯಮಕನಮರಡಿ ಅವರು ಸಿಪಿಐ ಆಗಿ ಅಧಿಕಾರವಹಿಸಿಕೊಂಡ ನಂತರ ಗ್ರಾಮದಲ್ಲಿ ಕಾಲ್ನಡಿಗೆಯಲ್ಲಿ ಗಸ್ತು ತಿರುಗುವ ಕೆಲಸ ನಡೆಸಿದರು,
ಈ ಸಂದರ್ಭದಲ್ಲಿ ಕೆಲವರು ಸಧ್ಯ ಬಂಧಿತ ಮೂವರ ಚಲನ ವಲನ ಬಗ್ಗೆ ಮಾಹಿತಿ ನೀಡಿದ್ದರು, ಇದನ್ನೇ ಗಂಭೀರವಾಗಿ ಪರಿಗಣಿಸಿದ ಅವರು ಎಸ್ಪಿಯವರ ಮಾರ್ಗದರ್ಶನದಲ್ಲಿ ವಿಚಾರಣೆ ನಡೆಸಿದಾಗ ಈ ಎಲ್ಲ ಸಂಗತಿಗಳು ಬೆಳಕಿಗೆ ಬಂದವು,
ಹೆಚ್ಚುವರಿ ಎಸ್ಪಿ ಬಸ್ಸರಗಿ , ಡಿಎಸ್ಪಿ ಡಿ.ಎಚ್.ಮುಲ್ಲಾ ಮಾರ್ಗದರ್ಶನದಲ್ಲಿ ಈ ತನಿಖೆ ನಡೆಯಿತು
,

Leave a Reply

Your email address will not be published. Required fields are marked *

error: Content is protected !!