ಪಾಲಿಕೆ ದಿಕ್ಕದಿವಾಳಿ..! ಯಾರು ಹೊಣೆ?

Ebelagavi ವಿಶೇಷ

ಬೆಳಗಾವಿ ಗ್ರಾಮೀಣ ಪ್ರದೇಶದಲ್ಲಿ ಜನರು ಸಹಜವಾಗಿ ಆಡುವ ಮತ್ತು ಬಳಸುವ ಮಾತು ಎಂದರೆ ‘ದಿಕ್ಕ ದಿವಾಳಿ ‘

ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ಪರಿಸ್ಥಿತಿ ಕೂಡ ದಿಕ್ಕ ದಿವಾಳಿ.

ಬೆಳಗಾವಿ ಮಹಾನಗರ ಪಾಲಿಕೆಯ ಸಧ್ಯದ ಆಡಳಿತ ವ್ಯವಸ್ಥೆಯನ್ನು ಯಾವುದೇ ದಿಕ್ಕಿನತ್ತ ತಿರುಗಿಸಿ ನೋಡಿದರೂ ಕೂಡ ಅದು ಉದ್ಧಾರ ಆಗುವ ಲಕ್ಷಣಗಳು ಕಾಣಸಿಗುವುದಿಲ್ಲ.

ಇಲ್ಲಿ ಬೆಳಗಾವಿ ನಗರವನ್ನು ಉದ್ಧಾರ ಮಾಡುವುದು ಒತ್ತಟ್ಟಿಗಿರಲಿ ಖುದ್ದು ಪಾಲಿಕೆ ಸಹ ಉದ್ಧಾರ ಆಗದಷ್ಟು ಹದಗೆಟ್ಟು ಹೋಗಿದೆ ಇಲ್ಲಿ ಕಾಂಗ್ರೆಸ್ ,ಬಿಜೆಪಿ ರಾಜಕಾರಣ ಏನೇ ಇದ್ದರೂ ಕೂಡ ಅದನ್ನು ಬದಿಗೊತ್ತಿ ಬೆಳಗಾವಿ ಅಭಿವೃದ್ಧಿ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ ಎನ್ನುವ ಮಾತುಗಳು ಜನರ ಮನಸ್ಸಿನಲ್ಲಿ ಉಳಿದಿದೆ.

ರಾಜ್ಯ ಸರ್ಕಾರ ಗ್ಯಾರಂಟಿ ಬೆನ್ನು ಬಿದ್ದು ಬೆಳಗಾವಿ ಪಾಲಿಕೆ ಕೊಡುವ ಅನುದಾನ ದಲ್ಲಿ ಕತ್ತರಿ ಪ್ರಯೋಗ ನಡೆದಿದೆ. ಹೀಗಾಗಿ ವಾರ್ಡಗಳಲ್ಲಿ ಬಿದ್ದಿರುವ ರಸ್ತೆ ಮಧ್ಯದಲ್ಲಿ ತೆಗ್ಗುಗಳನ್ನು ಮುಚ್ಚಲು ಹಣ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ .

ಆದರೆ ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಪಾಲಿಕೆಯು ತನ್ನ ಸಂಪನ್ಮೂಲ ಕ್ರೋಢೀಕರಣವನ್ನು ಸರಿ ಮಾಡಿಕೊಳ್ಳಬೇಕಿತ್ತು. ಆದರೆ ಇಲ್ಲಿ ಆ ಕೆಲಸವೂ ಸರಿಯಾಗಿ ಆಗುತ್ತಿಲ್ಲ. ಪಾಲಿಕೆಗೆ ಬರಬೇಕಾದ ಸಂಪನ್ಮೂಲ ಬೇರೆಯವರ ಪಾಲಾಗುತ್ತಿರುವುದು ಈಗ ಚರ್ಚೆಯ ವಸ್ತುವಾಗಿದೆ.

ಬೆಳಗಾವಿ ಪಾಲಿಕೆ ತುಂಬ ಬರೀ ವಿವಾದಗಳೇ ಸದ್ದು ಮಾಡುತ್ತಿವೆ. ಎಲ್ಲೊ ಒಂದಡೆಗೆ ವ್ಯವಸ್ಥೆ ಸರಿಯಿಲ್ಲ ಅದನ್ನು ಹೇಗಾದರೂ ಮಾಡಿ ಸರಿ ಮಾಡಬಹುದು.‌ಆದರೆ ಇಡೀಯಾಗಿ ವ್ಯವಸ್ಥೆ ಕೆಟ್ಟ ಮೇಲೆ ಏನಂತ ಎಷ್ಟು ಅಂತ ಸುಧಾರಣೆ ಮಾಡಲು ಸಾಧ್ಯ.

ಈಗ ಹೇಗಾಗಿದೆ ಅಂದರೆ ಬೆಳಗಾವಿ ಪಾಲಿಕೆ ಆಡಖಿತ ಕೋಮಾ ಸ್ಟೇಜ್ಗೆ ಬಂದು ನಿಂತಿದೆ. ಎಲ್ಲವೂ ಸಲಾಯಿನ್ ಮೇಲೆ ನಡೆದಿದೆ.

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿರುವ ಕಂದಾಯ, ಆರೋಗ್ಯ, TPO ಶಾಖೆಯ ಒಳ ಹೊಕ್ಕು ಬಂದರೆ ಹೌಹಾರುವ ಸ್ಥಿತಿ. ಅಲ್ಲಿನ ಕೆಲವರ ಓಡಾಟ, ರಂಪಾಟದ ಜೊತೆಗೆ ಡಿಮ್ಯಾಂಡ್ ಕೇಳಿದ್ರೆ ಹೌಹಾರುವ ಸ್ಥಿತಿ.

ಹಿಂದೆ ಲೋಕಾಯುಕ್ತರು ಪಾಲಿಕೆಗೆ ಎರಡು ಬಾರಿ‌ ಭೆಟ್ಟಿ ನೀಡಿ ಹಾಗೇ ಎಲ್ಲ ಸೆಕ್ಷನ್ ಗಳಿಗೆ ಹೋಗಿ ರೌಂಡ್ ಹಾಕಿ ಬಂದಿದ್ದರು. ಆದರೂ ಡೋಂಟಕೇರ್ ಎನ್ನುವ ರೀತಿಯಲ್ಲಿ ಸಿಬ್ಬಂದಿಗಳ ವರ್ತನೆ‌‌ ಮುಂದುವರೆದಿದೆ.

ಕಂದಾಯ ಶಾಖೆ ಬಿಡಿ. ಅಲ್ಲಿ ದುಡ್ಡೇ ದೊಡ್ಡಪ್ಪ. ಅವರು ಯಾರ ಮಾತು ಕೇಳೊದಿಲ್ಲಪ್ಪ ಎನ್ನುವ ಹಾಗಾಗಿದೆ.

ಇನ್ನು TPO ವಿಭಾಗಕ್ಕೆ ಬಂದರೆ ಅಬ್ಬಬ್ಬಾ ಅಲ್ಲಿನ‌ ವಸೂಲಿ ಕಥಾನಕ ಭಯಂಕರ. ಬೆಳಗಾವಿ ನಗರದಲ್ಲಿ ಬಡಪಾಯಿಯೊಬ್ಬ ಸಣ್ಣ ಮನೆ ಕಟ್ಟಿಕೊಂಡರೆ ಅದಕ್ಕೆ ಅನುಮತಿ ಕೊಡುವ ಸಂದರ್ಭದಲ್ಲಿ ಅವರನ್ನ ಹಿಂಡಿ ಹಿಪ್ಪಿ ಮಾಡುತ್ತಾರೆ. ಇನ್ನುಳಿದಂತೆ ಬಹುಮಹಡಿ ಅಂದರೆ ಅಪಾರ್ಟಮೆಂಟ್ ದವರು ಬಂದರೆ ಅವರಿಗೆ ರೆಡ್ ಕಾರ್ಪೆಟ್ ವ್ಯವಸ್ಥೆ. ಏಕೆಂದರೆ ಅವರು ಎಷ್ಟೇ ವೈಲೆಷನ್ ಮಾಡಿದರೂ ಕೂಡ ಮೌನ ಸಮ್ಮತಿ.ಅಂದರೆ ಇಷ್ಟು ವೈಲೇಷನ್ ಮಾಡಿದರೆ ಅದರ ಮೇಲೆ ತಮ್ಮ ತೆರಿಗೆ ಫಿಜ್ಸ್ ಮಾಡಿಕೊಳ್ಳುತ್ತಾರಂತೆ.

ಇನ್ನೂ ನೇರವಾಗಿ ಹೇಳಬೇಕೆಂದರೆ, ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಈ ಟಿಪಿಓ ಸೆಕ್ಷನ್ ದವರು ಕೊಟ್ಟ ಅಪಾರ್ಟಮೆಂಟ್ ಗಳ ಬಗ್ಗೆ ಲೋಕಾಯುಕ್ತರಿಂದ ತನಿಖೆ ಮಾಡಿಸಲಿ ಎಂದು ಪ್ರಜ್ಞಾವಂತರು ಸವಾಲಿನ‌ ಧಾಟಿಯಲ್ಲಿ ಮಾತನಾಡುತ್ತಿದ್ದಾರೆ. ಇದರ ಜೊತೆಗೆ ಕಳೆದ ಹಲವು ವರ್ಷಗಳಿಂದ ಇದೇ ವಿಭಾಗದಲ್ಲಿ ಕೆಕಸ ಮಾಡುತ್ತಿರುವ ಇಂಜನೀಯರ ಸೇರಿದಂತೆ ಪ್ರಮುಖರು ತಮ್ಮ ಮತ್ತು ಬೇರೆಯವರ ಹೆಸರಿನಲ್ಲಿ ಮಾಡಿದ ಆಸ್ತಿ ಪಾಸ್ತಿ ಜಾಲಾಡಿದರೆ ಅಸಲಿ ಬಣ್ಣ ಬಯಲಾಗುತ್ತದೆ.

ಇನ್ನು ಆರೋಗ್ಯ ಶಾಖೆ ಪಾಲಿಕೆಯದ್ದು ಅಷ್ಟೇ ಅಲ್ಲ ಇಡೀ ಬೆಳಗಾವಿ ಆರೋಗ್ಯ ಕೆಡಿಸಿದೆ. ಅಲ್ಲಿ ಕಸದಲ್ಲಿ ರಸ ಹೀರುವ ಕಥೆ ಬಿಡಿ.ಬರೀ 138 ಪಿಕೆಗಳ ನೇಮಕ‌ ವಿಷಯ ಜಾಲಾಡಿದರೆ ಅಸಲಿ ಆಟ ಬೆಳಕಿಗೆ ಬರುತ್ತೆ. ಈವರೆಗೂ 138 ಪಿಕೆಗಳ ಬಗ್ಗೆ ಸರ್ಕಾರ ಏನು ಆದೇಶ ಹೊರಡಿಸಿದೆ ಎನ್ನುವುದೇ ಚಿದಂಬರ ರಹಸ್ಯ..

Leave a Reply

Your email address will not be published. Required fields are marked *

error: Content is protected !!