200 ಕಡತಗಳ ಸುತ್ತ ಅನುಮಾನದ ಹುತ್ತ

Oplus_131072

ಬೆಳಗಾವಿ.

ಮಹಾನಗರ ಪಾಲಿಕೆಯ ಆಯುಕ್ತರ ಟೇಬಲ್ ಮೇಲಿರುವ ಆ ಎರಡು ನೂರಕ್ಕೂ ಹೆಚ್ಚು ಕಡತಗಳಲ್ಲಿ ಅಂತಹುದ್ದೇನಿದೆ?

ಸಹಜವಾಗಿ ಅಂತಹುದ್ದೊಂದು ಪ್ರಶ್ನೆ ಕೇವಲ ಮಹಾನಗರ ಪಾಲಿಕೆ ಸಿಬ್ಬಂದಿಗಳಲ್ಲಿ ಅಷ್ಟೇ ಅಲ್ಲ ಇಡೀ ಬೆಳಗಾವಿ ಜನರನ್ನು ಕಾಡತೊಡಗಿದೆ.

ಆ ಕಡತಗಳಲ್ಲಿ ಅಂತಹುದ್ದೇನಿದೆ?
ಈಗ ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರ ಮುಂದಿರುವ ಆ ಎರಡು‌ನೂರಕ್ಕೂ ಅಧಿಕ ಕಡತಗಳೇ ಈಗ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡುತ್ತಿವೆ..
ಮೂಲಗಳ ಪ್ರಕಾರ ಬೆಳಗಾವಿ ಉತ್ತರ ಕ್ಷೇತ್ರದ ಕೆಲವಡೆ ಬಹುಮಹಡಿ ಕಟ್ಟಡಗಳಿಗೆ ಹೊಸ ಪಿಐಡಿ ಸೃಷ್ಟಿ ಮಾಡುವ ವಿಷಯದಲ್ಲಿ ದೊಡ್ಡ ಪ್ರಮಾಣದ ಲೋಪವಾಗಿದೆ ಎನ್ನುವ ಅಂಶ ವುಈ ಕಡತಗಳಲ್ಲಿದೆ ಎಂದು ಹೇಳಲಾಗುತ್ತಿದೆ,

ನಿಯಮಾನುಸಾರ ಯಾವುದೇ ಒಂದು ಪಿಐಡಿ ಸೃಷ್ಟಿ ಮಾಡಬೇಕಾದರೆ, ಬಿಲ್ ಕಲೆಕ್ಟರ್, ಕಂದಾಯ ನಿರೀಕ್ಷಕರು, ಎಆರ್ ಓ, ಕಂದಾಯ ಆದಿಕಾರಿ ಮೂಲಕ ಕಡತಗಳು ಕೊನೆಗೆ ಉಪ ಆಯುಕ್ತ ಕಂದಾಯ ಇವರಿಗೆ ಹೋಗಬೇಕು.

ಆಗ ಎಲ್ಲವೂ ಸರಿ ಇದ್ದರೆ ಮಾತ್ರ ಹೊಸ ಪಿಐಡಿ ಸೃಷ್ಟಿ ಮಾಡಬಹುದು,
ಆದರೆ ಇಲ್ಲಿ ಬಿಲ್ ಕಲೆಕ್ಟರ್ ಮೂಲಕ ನೇರವಾಗಿ ಉಪ ಆಯುಕ್ತರು ಕಂದಾಯ ಇವರಿಗೆ ಹೋಗಿವೆ, ಅಂತಹ ಲೋಪದೋಷವುಳ್ಳ ಕಡತಗಳ ರಾಶಿ ಈಗ ಪಾಲಿಕೆ ಆಯುಕ್ತರ ಮುಂದಿವೆ, ಮೇಲಾಗಿ ಮಧ್ಯದಲ್ಲಿ ಕೆಲವರನ್ನು ಬಾಯ್ ಪಾಸ್ ಮಾಡಿಕೊಂಡು PID ಸೃಷ್ಟಿ‌ಮಾಡಿಕೊಡುವ ಅಗತ್ಯವಾದರೂ ಏನಿತ್ತು ಎನ್ನುವ ಬಹುದೊಡ್ಡ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.

ಇದರ ಜೊತೆಗೆ ಇನ್ನೂ ಆಸ್ತಿ ತೆರಿಗೆ ನಿರ್ಧರಣೆಯಲ್ಲಾಗಿದೆ ಎನ್ನಲಾದ ಲೋಪದ ಕಡತಗಳು ಅದರಲ್ಲಿವೆ ಎಂದು ಗೊತ್ತಾಗಿದೆ.

ಲೋಕಾಯುಕ್ತರಿಗೆ ದೂರು..!


ಮತ್ತೊಂದು ಬೆಳವಣಿಗೆಗಳ ಬಗ್ಗೆ ಪಾಲಿಕೆಯ ಟಿಪಿಓ ವಿಭಾಗಕ್ಕೆ ಸಂಬಂಧಿಸಿದಂತೆ ಬಹುಮಹಡಿ ಕಟ್ಟಡಗಳ ಕುರಿತು ಕೆಲವರು ಲೋಕಾಯಕ್ತ ಕಚೇರಿ ಮಟ್ಟಿಲು ಹತ್ತಿದ್ದಾರೆ,
ನಿಯಮ ಉಲ್ಲಂಘಿಸಿದ ಕಟ್ಟಡಗಳ ಬಗ್ಗೆ ಪಾಲಿಕೆಯ ಟಿಪಿಓ ವಿಭಾಗಕ್ಕೆ ದೂರು ಕೊಟ್ಟರೂ ಯಾವುದೇ ಪ್ರಯೋಜನ ಆಗುತ್ತಿಲ್ಲ ಎನ್ನುವ ಕಾರಣದಿಂದ ನೋಂದ ಜನ ಲೋಕಾಯುಕ್ತರಲ್ಲಿ ದೂರು ದಾಖಲು ಮಾಡಿದ್ದಾರೆ.

ಇನ್ನೂ ಅಚ್ಚರಿ ಸಂಗತಿ ಎಂದರೆ, ಲೋಕಾಯುಕ್ತರಿಗೆ ದೂರು ಹೋದ ನಂತರವೂ ಕೂಡ ಆ ವಿಭಾಗದ ಇಂಜನೀಯರಗಳು ಆ ಕಟ್ಟಡಗಳ ವಿರುದ್ಧ ಯಾವುದೇ ರೀತಿಯ ಕ್ರಮಕ್ಕೆ ಮುಂದಾಗದೇ ಇರುವುದು ಹತ್ತು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.

ಸತೀಶ್ ಜಾರಕಿಹೊಳಿ

ಸಚಿವರ ಮುಂದೆ
ದೂರಿನ ಮಹಾಪೂರ…!

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಿತ್ಯ ನಡೆಯುತ್ತಿರುವ ರಗಳೆಗಳ ಬಗ್ಗೆ ಅಲ್ಲಿನ ಸಿಬ್ಬಂದಿಗಳೇ ಇಂದು ಜಿಲ್ಲಾ ಮಂತ್ರಿ ಸತೀಶ್ ಜಾರಕಿಹೊಳಿ ಮುಂದೆ ಬಿಚ್ಚಿಟ್ಟರು.
ಅಷ್ಟೇ ಅಲ್ಲ ಕೆಲವೇ ದಿನಗಳಲ್ಲಿ ಬರೊಬ್ಬರಿ ನಾಲ್ವತ್ತಕ್ಕೂ ಹೆಚ್ಚು ಜನರನ್ನು ದುರುದ್ದೇಶಪೂರ್ವಕವಾಗಿ ವಗರ್ಾವಣೆ ಮಾಡಲಾಗಿದೆ ಎನ್ನುವಬಹುದೊಡ್ಡ ಆರೋಪವನ್ನು ಈ ಸಂದರ್ಭದಲ್ಲಿ ಮಾಡಿದರು ಎಂದು ಹೇಳಲಾಗಿದೆ
.

ಇದೆಲ್ಲವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಮಂತ್ರಿಗಳು ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ಆಯುಕ್ತರೊಂದಿಗೆ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾಗಿ ಅವರು ತಿಳಿಸಿದರು,

ತೊಂದರೆ ಏನಾಗಿದೆ ಹೇಳಿ?
ಇತ್ತ ಜಿಲ್ಲಾ ಮಂತ್ರಿಗಳ ಬಳಿ ದೂರು ಹೋಗುತ್ತಿದ್ದಂತೆಯೇ ಎಚ್ಚೆತ್ತ ಆಯುಕ್ತರು ಆಯಾ ವಿಭಾಗದ ಮುಖ್ಯಸ್ಥರನ್ನು ಕರೆದು ನನ್ನಿಂದ ಎಲ್ಲಿ ತೊಂದರೆಯಾಗಿದೆ ಎನ್ನುವ ಸ್ಪಷ್ಟೀಕರಣ ಕೇಳುವ ಕೆಲಸ ಮಾಡಿದರು.
ಆದರೆ ಆಯುಕ್ತರ ಸಮ್ಮುಖದಲ್ಲಿ ಕೆಲವರು ಕೆಲವೊಂದು ವಿಷಯ ಪ್ರಸ್ತಾಪ ಮಾಡಿದರೆ ಇನ್ನೂ ಕೆಲವರು ಮೌನಕ್ಕೆ ಶರಣಾದರು ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *

error: Content is protected !!