ಬೆಳಗಾವಿ.
ಬೆಳಗಾವಿ ತಿನಿಸುಕಟ್ಟೆ ವಿವಾದಕ್ಕೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆಯ ಇಬ್ಬರು ಬಿಜೆಪಿ ನಗರಸೇವಕರ ಕುರಿತು ಪ್ರಾದೇಶಿಕ ಆಯುಕ್ತರ ಕಚೇರಿಯಿಂದ ಮಹತ್ವದ ಆದಶಶವೊಂದು ಹೊರಬಿದ್ದಿದೆ.
ಆದರೆ ಆ ಆದೇಶದಲ್ಲಿ ಏನಿದೆ? ಯಾವ ಯಾವ ಅಂಶಗಳನ್ನು ಉಲ್ಲೇಖಿಸಲಾಗಿದೆ ಎನ್ನುವ ಸಂಗತಿ ಮಾತ್ರ ಹೊರಬಿದ್ದಿಲ್ಲ.

ಇದು ಈಗ ಎಲ್ಲೆಡೆ ಚರ್ಚೆಯ ವಸ್ತುವಾಗಿದೆ. ಬಹುತೇಕ ಪತ್ರಕರ್ತರು ಮಹಾನಗರ ಪಾಲಿಕೆ, ಪ್ರಾದೇಶಿಕ ಆಯುಕ್ತರ ಕಚೇರಿಯನ್ನು ಸಂಪರ್ಕಿಸಿದರೂ ಆದೇಶ ಪ್ರತಿ ಮಾತ್ರ ಸಿಗುತ್ತಿಲ್ಲ.
ಆದರೆ ಆದೇಶ ಪ್ರತಿಯನ್ನು ಪಾಲಿಕೆಯವರೇ ಬಂದು ತೆಗೆದುಕೊಂಡು ಹೋಗಿದ್ದಾರೆ ಎನ್ನುವ ಸ್ಪಷ್ಟ ಮಾಹಿತಿ ಸಿಕ್ಕಿದೆ.
ಆದೇಶ ಪ್ರತಿ ಕೈಸೇರುವ ತನಕ ಎಲ್ಲವೂ ಅಂತೆ ಕಂತೆ ಮೇಲೆ ಸುದ್ದಿಗಳು ಹಬ್ಬುತ್ತಿವೆ