ಪಾಲಿಕೆ BJP ನಗರಸೇವಕರಿಬ್ಬರ ಸದಸ್ಯತ್ವ ರದ್ದು..!

ಬೆಳಗಾವಿ.
ಅಧಿಕಾರ ದುರುಪಯೋಗ ಪಡಿಸಿಕೊಂಡು ಬೆಳಗಾವಿ ತಿನಿಸು ಕಟ್ಟೆಯಲ್ಲಿ ಸಂಬಂಧಿಕರ ಹೆಸರಿನಲ್ಲಿ ಮಳಿಗೆಗಳನ್ನು ಪಡೆದ ಆರೋಪದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯ ಬಿಜಿಪಿ ನಗರಸೇವಕರಿಬ್ಬರ ಸದಸ್ಯತ್ವವನ್ನು ರದ್ದುಗೊಳಿಸಿ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ,


ವಾರ್ಡ ನಂಬರ 23ರ ನಗರಸೇವಕ ಜಯಂತ ಜಾಧವ ಮತ್ತು ವಾರ್ಡ ನಂಬರ 41 ರ ನಗರಸೇವಕ ಮಂಗೇಶ ಪವಾರ ಅವರ ಸದಸ್ಯತ್ವ ರದ್ದುಗೊಂಡಿದೆ.
ಈ ಹಿನ್ನೆಲೆಯಲ್ಲಿ ಇವರು ಕೋರ್ಟಮೆಟ್ಟಿಲು ಹತ್ತುವುದಾಗಿ ಸ್ಪಷ್ಟಪಡಿಸಿದ್ದಾರೆ,
ಸಾಮಾಜಿಕ ಕಾರ್ಯಕರ್ತ ಸುಜಿತ್ ಮುಳಗುಂದ್ ಅವರು ಈ ಬಗ್ಗೆ ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿದ್ದರು, ಈ ಬಗ್ಗೆ ಹಲವು ವರ್ಷಗಳಿಂದ ಪ್ರಾದೇಶಿಕ ಆಯುಕ್ತರ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿತ್ತು, ಇಂದು ಆ ಆದೇಶ ಹೊರಬಿದ್ದಿದೆ.


ಇವರು ಸಕರ್ಾರದ ಇಲಾಖೆಯಿಂದ ನಿಮರ್ಿಸಲಾದ ಈ ತಿನಿಸು ಕಟ್ಟೆಯಲ್ಲಿ ಶ್ರೀಮತಿ ಸೋನಾಲಿ ಜಯಂತ ಜಾಧವ ಮತ್ತು ಶ್ರೀಮತಿ ನೀತಾ ಮಂಗೇಶ ಪವಾರ್ ಹೆಸರಿನಲ್ಲಿ ಪಡೆದುಕೊಂಡಿದ್ದರು.
ಈ ಇಬ್ಬರೂ ನಗರಸೇವಕರಾಗುವುದಕ್ಕಿಂತ ಮುಂಚೆಯೇ ಹರಾಜು ಪ್ರಕ್ರಿಯೆಯಲ್ಲಿ ಮಳಿಗೆಗಳನ್ನು ಪಡೆದುಕೊಂಡಿದ್ದರು. ಆದರೆ ನಗರಸೇವಕರಾದ ನಂತರ ಈ ಮಳಿಗೆಗಳನ್ನು ಬಿಟ್ಟುಕೊಡಬೇಕಿತ್ತು,

ಆದರೆ ಅವರು ಹಾಗೆ ಮಾಡದೇ ತಮ್ಮ ಕುಟುಂಬದ ಸದಸ್ಯರ ಹೆಸರಿನಲ್ಲಿಯೇ ಉಳಿಸಿಕೊಂಡಿದ್ದರು, ಇದರಿಂದ ಇಬ್ಬರೂ ನಗರಸೇವಕರು ಪರೋಕ್ಷವಾಗಿ ಮಹಾನಗರ ಪಾಲಿಕೆಯಿಂದ ಲಾಭ ಪಡೆಯುತ್ತಿದ್ದಾರೆ, ಇದು ಕನರ್ಾಟಕ ಮುನ್ಸಿಪಲ್ ಕಾಪರ್ೋರೇಶನ್ ಕಾಯ್ದೆ 1976 ಕಲಂ 26 ಮತ್ತು ಅದರ ಉಪಕಲಂ ಪ್ರಕಾರ ಅಪರಾಧ ಎಂದು ಪ್ರಾದೇಶಿಕ ಆಯುಕ್ತರು ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಕನರ್ಾಟಕ ಮುನ್ಸಿಪಲ್ ಕಾಪರ್ೋರೇಶನ್ ಕಾಯ್ದೆ 1976 ಕಲಂ 26 ರ ಉಪಕಲಂ 1 ಕೆ ರಂತೆ ಇಬ್ಬರ ಸದಸ್ಯತ್ವದಿಂದ ಅನರ್ಹಗೊಳಿಸಿ ಪ್ರಾದೇಶಿಕ ಆಯುಕ್ತ ಎಸ್.ಬಿ. ಶೆಟ್ಟಣ್ಣವರ ಆದೇಶದಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!