ಬೆಳಗಾವಿ.ಮಹಾನಗರ ಪಾಲಿಕೆ ಮೇಯರ್ ಸವಿತಾ ಕಾಂಬಳೆ ಮತ್ತು ಉಪಮೇಯರ್ ಆನಂದ ಚವ್ಹಾಣ ಅಧಿಕಾರವಧಿ ದಿ.14 ಕ್ಕೆ ಕೊನೆಗೊಂಡಿದೆ.

ಮುಂದಿನ ಮೇಯರ್, ಉಪಮೇಯರ್ ಗೆ ಚುನಾವಣೆ ದಿನಾಂಕವನ್ನು ಪ್ರಾದೇಶಿಕ ಆಯುಕ್ತರು ನಿಗದಿ ಮಾಡಬೇಕು. ಕಳೆದ ದಿನವಷ್ಟೆ.ಮಹಾನಗರ ಪಾಲಿಕೆಯವರು ಸದಸ್ಯತ್ವ ರದ್ದತಿಗೊಂಡ ಇಬ್ಬರ ಹೆಸರನ್ನು ಕಡಿಮೆ ಮಾಡಿ ಮತದಾರರ ಪಟ್ಟಿಯನ್ನು ಪ್ರಾದೇಶಿಕ ಆಯುಕ್ತರಿಗೆ ಕಳಿಸಿದ್ದಾರೆಂದು ಗೊತ್ತಾಗಿದೆ.ಹೀಗಾಗಿ ಒಂದೆರಡು ದಿನಗಳಲ್ಲಿ ಚುನಾವಣೆ ದಿನಾಂಕ ನಿಗದಿ ಮಾಡುವ ಸಾಧ್ಯತೆಗಳಿವೆ.