ಬೆಂಗಳೂರು.

ಬೆಳಗಾವಿ ಮಹಾನಗರ ಪಾಲಿಕೆಯ ಇಬ್ಬರು ನಗರಸೇವಕರ ಸದಸ್ಯತ್ವ ರದ್ದತಿ ವಿಷಯಕ್ಕೆ ಸಂಬಂಧಿಸಿದಂತೆ ನಿರ್ಣಯ ಕೈಗೊಂಡ ಪ್ರಾದೇಶಿಕ ಆಯುಕ್ತರ ಕ್ರಮದ ಬಗ್ಗೆ ರಾಜ್ಯಪಾಲರು ಅಸಮಾಧಾನ ಹೊರಹಾಕಿದರು ಎಂದು ಗೊತ್ರಾಗಿದೆ.

ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರು ಪ್ರಾದೇಶಿಕ ಆಯುಕ್ತರು ಕೈಗೊಂಡ ನಿರ್ಞಯದ ವಿರುದ್ಧ ಗೌರ್ನರ್ ಗೆ ದಾಖಲೆ ಸಮೇತ ದೂರು ನೀಡಿದರು.

ಈ ದೂರನ್ನು ಗಂಭೀರವಾಗಿ ಆಲಿಸಿದ ಗೌರ್ನರ ಅವರು ತಕ್ಷಣ ತಮ್ಮ ಅಧಿಕಾರಿಗಳನ್ನು ಕರೆಯಿಸಿ ಚರ್ಚೆ ನಡೆಸಿದರು ಎನ್ನಲಾಗಿದೆ.
ಈ ಸಂದರ್ಭದಲ್ಲಿ ಪ್ರಾದೇಶಿಕ ಆಯುಕ್ತರು ಹೊರಡಿಸಿದ ಆದೇಶದ ಕುರಿತು ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವುಸಾಗಿ ತಿಳಿಸಿದರು ಎಂದು ಮೂಲಗಳು ತಿಳಿಸಿವೆ.

ಆದರೆ ಶಾಸಕರು ಲಿಖಿತವಾಗಿ ಸಲ್ಲಿಸಿದ ದೂರಿನಲ್ಲಿಕಸ ಯಾವ ಯಾವ ಅಂಶಗಳನ್ನು ಉಲ್ಲೇಖ ಮಾಡಿದ್ದರು ಎನ್ನುವುದು ಸ್ಪಷ್ಟವಾಗಿ ಗೊತ್ತಾಗಿಲ್ಲ.