ಬೆಳಗಾವಿ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ವಿಲಾಸ ಜೋಶಿ, ಉಪಾಧ್ಯಕ್ಷರಾಗಿ ಶ್ರೀಶೈಲ ಮಠದ, ಸಂಜಯ ಸೂರ್ಯವಂಶಿ ಆಯ್ಕೆ.
ಬೆಳಗಾವಿ :
ಬೆಳಗಾವಿ ಪತ್ರಕರ್ತರ ಸಂಘದ ( ಮುದ್ರಣ ಮಾಧ್ಯಮ) ಸಂಘದ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಸಂಘದ ಮಾಜಿ ಅದ್ಯಕ್ಷ ಮಹೇಶ ವಿಜಾಪುರೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ವಿಲಾಸ ಜೋಶಿ, ಉಪಾಧ್ಯಕ್ಷರಾಗಿ ಶ್ರೀಶೈಲ ಮಠದ, ಸಂಜಯ ಸೂರ್ಯವಂಶಿ, ಗೌರವಾಧ್ಯಕ್ಷರಾಗಿ ಹೃಷಿಕೇಶ್ ಬಹದ್ದೂರ್ ದೇಸಾಯಿ, ಗೌರವ ಸಲಹೆಗಾರರಾಗಿ ಕೇಶವ ಆದಿ, ಸುರೇಶ್ ಶ್ಯಾನಬಾಗ, ಮಹೇಶ್ ವಿಜಾಪುರ, ಕಾರ್ಯದರ್ಶಿಯಾಗಿ ನೌಷಾದ ಬಿಜಾಪುರ, ಸಹ ಕಾರ್ಯದರ್ಶಿಯಾಗಿ ಸುರೇಶ್ ನೇರ್ಲಿ, ಖಜಾಂಚಿಯಾಗಿ ರವಿ ಉಪ್ಪಾರ, ಅವರನ್ನು ಆಯ್ಕೆ ಮಾಡಲಾಯಿತು

ಕಾರ್ಯಕಾರ್ಯಣಿ ಸದಸ್ಯರಾಗಿ:
ರಾಜು ಗವಳಿ, ಮಲ್ಲಿಕಾರ್ಜುನ ಮುಗಳಿ, ಸಂತೋಷ ಚಿನಗುಡಿ, ಮುನ್ನಾ ಬಾಗವಾನ, ಕೀರ್ತಿ ಕಾಸರಗೋಡು,, ಮಂಜುನಾಥ ಕೋಳಿಗುಡ್ಡ, ಸುನಿಲ್ ಪಾಟೀಲ, ಜಗದೀಶ್ ವಿರಕ್ತಮಠ, ರಾಜಶೇಖರಯ್ಯ ಹಿರೇಮಠ, ವಿನಾಯಕ ಮಠಪತಿ, ರವಿ ಗೋಸಾಯಿ, ಅಶೋಕ ಮುದ್ದಣ್ಣವರ, ಅರುಣ ಯಳ್ಳೂರಕರ, ರಾಮಚಂದ್ರ ಸುಣಗಾರ, ರಜನಿಕಾಂತ್ ಯಾದವಾಡ. ಕುಂತಿನಾಥ ಕಲಮನಿ, ಭೈರವ ಕಾಂಬಳೆ, ಲೂಯಿಸ್ ರಾಡ್ರಿಕ್ಸ್, ಇಮಾಮ ಗೂಡನವರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಈ ಸಭೆಯಲ್ಲಿ ವೇಗವಾಗಿ ಮುಂದುವರೆಯುತ್ತಿರುವ ಹಾಗೂ ಬದಲಾವಣೆ ಆಗುತ್ತಿರುವ ಮಾಧ್ಯಮ ಕ್ಷೇತ್ರದಲ್ಲಿ ನಮ್ಮತನವನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಗಂಭೀರ ಚರ್ಚೆ ಚರ್ಚಿಸಲಾಯಿತು.
ಇದೇ ಸಮಯದಲ್ಲಿ ಅಭಿವೃದ್ಧಿ ಪತ್ರಿಕೋದ್ಯಮದ ವರದಿಗಾರಿಕೆ ಹಿನ್ನೆಲೆ ರಾಜ್ಯ ಸರ್ಕಾರದ ಪ್ರಶಸ್ತಿಗೆ ಭಾಜನರಾದ ಹಿರಿಯ ಪತ್ರಕರ್ತರ ನೌಷಾದ ಬಿಜಾಪುರ ಅವರನ್ನು ಗೌರವಿಸಲಾಯಿತು.
ಈ ಸಭೆಯಲ್ಲಿ ನೂತನ
ಪದಾಧಿಕಾರಿಗಳು, ನಾಗರಾಜ ಎಚ್.ವಿ. ಹಿರಾಮಣಿ ಸೇರಿದಂತೆ ಹಲವು ಭಾಗವಹಿಸಿದ್ದರು.