ಇಲ್ಲಿ ಮರಾಠಿ ದಾಖಲೆ ಕೇಳೊರೆ ಗಪ್ ಚುಪ್.
ರಾಜ್ಯದ ಮಹಾನಗರ ಪಾಲಿಕೆಗಿಂತ ಬೆಳಗಾವಿಯಲ್ಲಿ ಮೊದಲ ಬಾರಿ ಪ್ರಯೋಗ ನಡೆಸಿದ ಆಯುಕ್ತೆ ಶುಭ.
ಮರಾಠಿ ದಾಖಲೆ ಕೊಡಿ ಅನ್ನುವವರ ಕೈಯ್ಯಲ್ಲಿ ಕನ್ನಡ ಧ್ವಜದ ದಾಖಲಾತಿಗಳು
ಗಡಿನಾಡಲ್ಲಿ ಹಬ್ಬಿದ ಭಾಷಾ ಕಿಚ್ಚಿನ ನಡುವೆ ಸದ್ದಿಲ್ಲದೇ ಹಬ್ಬುತ್ತಿದೆ ಕನ್ನಡ ಕನ್ನಡ..
ಆಯುಕ್ತರ ಕ್ರಮಕ್ಕೆ ಕನ್ನಡಿಗರು ಫಿದಾ…
ಬೆಳಗಾವಿ.
ಅಧಿಕಾರಿಗಳು ಸ್ವಲ್ಪ ಬುದ್ದಿ ಉಪಯೋಗಿಸಿದರೆ ಗಡಿನಾಡ ಬೆಳಗಾವಿಯಲ್ಲಿ ಕನ್ನಡವನ್ನು ಹೇಗೆ ಬೆಳೆಸಬಹುದು ಮತ್ತು ಅನ್ಯ ಭಾಷಿಕರೂ ಅದನ್ನು ಹೇಗೆ ಅಪ್ಪಿಕೊಳ್ಳಬಹುದು ಎನ್ನುವುದಕ್ಕೆ ಇಲ್ಲೊಂದು ಉತ್ತಮ ಉದಾಹರಣೆ.!

ಸಹಜವಾಗಿ ಗಡಿನಾಡು ಬೆಳಗಾವಿ ಮಹಾನಗರ ಪಾಲಿಕೆ ಎಂದಾಕ್ಷಣ ಎಲ್ಲರೂ ನೋಡುವ ದೃಷ್ಟಿಯೇ ಬೇರೆ,
ಇನ್ನು ಮಾತೆತ್ತಿದರೆ ಮರಾಠಿಯಲ್ಲಿ ದಾಖಲೆ ಕೊಡಿ ಎನ್ನುವ ಧ್ವನಿಗಳೇ ಅಲ್ಲಿ ಹೆಚ್ಚಿಗೆ ಸದ್ದು ಮಾಡುತ್ತಿರುತ್ತವೆ.

ಆದರೆ ಅಂತಹುದರಲ್ಲಿ ಪಾಲಿಕೆ ಆಯುಕ್ತೆ ಶುಭ ಬಿ. ಅವರು ಈ ಎಲ್ಲ ಗೌಜು ಗೊಂದಲದ ಮಧ್ಯೆ ಕನ್ನಡದ ಕಂಪನ್ನು ಪಸರಿಸುವ ಕೆಲಸ ಮಾಡುತ್ತಿರುವುದನ್ನು ಯಾರೂ ಗಮನಿಸಿಲ್ಲ.

ರಾಜ್ಯ ಸರ್ಕಾರದ ನಿರ್ದೇಶನದನ್ವಯ ಬೆಳಗಾವಿ ಪಾಲಿಕೆ ಬಳಿ ಇರುವ ಕುಮಾರ ಗಂಧರ್ವ ರಂಗಮಂದಿರದಲ್ಲಿ ಇ ಖಾತಾ ಅಂದೋಲನ ನಡೆದಿದೆ. ಕಳೆದ ದಿನವೇ ಈ ಅಂದೋಲನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಚಾಲನೆ ನೀಡಿದರು,

ಇಲ್ಲಿ ಇ ಆಸ್ತಿ' ತಂತ್ರಾಂಶದ ಮೂಲಕ
ಇ ಖಾತಾ’ ಪಡೆಯುವ ಕೆಲಸ ನಡೆಯುತ್ತಿದೆ,
ಇಲ್ಲಿ ಪಾಲಿಕೆ ಆಯುಕ್ತರು ಇ ಖಾತಾ ದಾಖಲೆಗಳನ್ನು ಬಿಳಿ ಹಾಳೆಯಲ್ಲಿ ತೆಗೆದುಕೊಟ್ಟಿದ್ದರೆ ಇದು ಅಂತಹ ದೊಡ್ಡ ಸುದ್ದಿ ಏನೂ ಆಗುತ್ತಿರಲಿಲ್ಲ.
ಆದರೆ ರಾಜ್ಯದ ಮಹಾನಗರ ಪಾಲಿಕೆಯಲ್ಲಿ ಮೊದಲ ಬಾರಿಗೆ ಕನ್ನಡ ಧ್ವಜದ ಬಣ್ಣದ ಹಾಳೆಯಲ್ಲಿ ದಾಖಲೆಕೊಡುವ ಕೆಲಸ ಮಾಡುತ್ತಿರುವುದು ಇದರ ವಿಶೇಷ ಎನ್ನಬಹುದು,
ಗಡಿನಾಡ ಬೆಳಗಾವಿಯಲ್ಲಿ ಮರಾಠಿ ದಾಖಲೆ ಎಂದು ನಡು ರಸ್ತೆಯಲ್ಲಿ ಹೊಯ್ದು ಕೊಳ್ಳುವವರೂ ಸಹ ಕುಮಾರ ಗಂಧರ್ವರಂಗ ಮಂದಿರಕ್ಕೆ ಬಂದು ಕನ್ನಡ ಧ್ವಜದ ಹಳದಿ, ಕೆಂಪು ಬಣ್ಣದ ಹಾಳೆಗಳಲ್ಲಿ ಕೊಡುವ ದಾಖಲೆಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ,
ಪಾಲಿಕೆ ಸಮೀಕ್ಷೆ ಪ್ರಕಾರ 30 ಸಾವಿರ ಖಾತಾ ಪಡೆಯುವುದು ಬಾಕಿಯಿದೆ. ಕನ್ನಡ ಕಂಪು ಹರಡಿಸುವ ನಿಟ್ಟಿನಲ್ಲಿ “ಎ” ಮತ್ತು “ಬಿ” ಖಾತಾ ಪ್ರತ್ರಿಗಳು ಹಳದಿ ಕೆಂಪು ಬಣ್ಣದಲ್ಲಿವೆ.