ಶಾಸಕ ಅಭಯ ಸೈಕಲ್ ಫೇರಿ

oplus_0

ಶಾಸಕರ ಸೈಕಲ್ ಫೇರಿ ಆರಂಭ.

ವಾರ್ಡ 29,43 ರಲ್ಲಿ ಸೈಕಲ್ ಮೇಲೆ ಸಂಚರಿಸಿದ ಶಾಸಕ.

ಜನರ ಸಮಸ್ಯೆಗೆ ಸ್ಪಂದನೆ.

ಶಾಸಕರ ಮುಂದೆ ಸಮಸ್ಯೆಗಳ ಸರಮಾಲೆ.

ಕಸ, ಸಂಚಾರ ದಟ್ಟಣೆಯದ್ದೆ ಸಮಸ್ಯೆ.

ಬೆಳಗಾವಿ.
ರಾಜ್ಯದಲ್ಲಿ ತಮ್ಮದೇ ಆದ ವಿನೂತನ ಕಾರ್ಯದಿಂದ‌ ಹೆಸರು ಮಾಡಿರುವ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ ಈಗ‌ ಮತ್ತೇ ಅಂತಹುದೇ ಕಾರ್ಯದ ಮೂಲಕ ಸದ್ದು ಮಾಡುತ್ತಿದ್ದಾರೆ.
ದಕ್ಷಿಣ ಕ್ಷೇತ್ರದ ವಾರ್ಡಗಳಲ್ಲಿ ಸೈಕಲ್ ಫೇರಿ ಮೂಲಕ ಸಂಚರಿಸಿ ಸಮಸ್ಯೆಗಳನ್ನು ಆಲಿಸುವ ಕೆಲಸ ಮಾಡಿದರು.

ಸಮಸ್ಯೆ ಆಲಿಸುತ್ತಿರುವ ಶಾಸಕ ಅಭಯ ಪಾಟೀಲ.

ಇಲ್ಲಿ ಸಂಬಂಧಿಸಿದ ಅಣದಿಕಾರಿಗಳು ಜನರ ಮನೆ ಬಾಗಿಲಿಗೆ ಸಮಸ್ಯೆಗಳನ್ನು ಆಲಿಸುತ್ತಾರೋ ಇಲ್ಲವೋ ದೇವರೇ ಬಲ್ಲ.
ಆದರೆ ಶಾಸಕ ಅಭಯ ಪಾಟೀಲರು ಮಾತ್ರ ಆಯಾ ವಾರ್ಡಿನ‌‌ ನಗರಸೇವಕರ ಜೊತೆ ‌ ಮನೆ ಬಾಗಿಲಿಗೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದಾರೆ.

ಇಂದು ಬೆಳ್ಳಂ ಬೆಳಿಗ್ಗೆ ಸೈಕಲ್ ಹತ್ತಿದ ಶಾಸಕ ಅಭಯ ಪಾಟೀಲರು ವಾರ್ಡ ನಂಬರ 43 ರಲ್ಲಿ ಬರುವ ಟಿಳಕವಾಡಿ ಪ್ರದೇಶಕ್ಕೆ ಭೆಟ್ಟಿ ನೀಡಿದರು.
ಬಹುತೇಕ ಕಡೆಗೆ ಜನರು ಸಂಚಾರ ದಟ್ಟಣೆ ಜೊತೆಗೆ ಕಸವಿಲೇವಾರಿ ಬಗ್ಗೆ ದೂರು ಹೇಳಿದರು.
ಅದರ ಬಗ್ಗೆ ತಕ್ಷಣ ಸ್ಪಂದನೆ ನೀಡಿದ ಅವರು ಶೀಘ್ರದಲ್ಲಿಯೇ ಮತ್ತೊಂದು ಸಭೆ ನಡೆಸುವ ಭರವಸೆ ನೀಡಿದರು.
ಟಿಳಕವಾಡಿ ಯಲ್ಲಿ ಕಸವಿಲೇವಾರಿ ಬಗ್ಗೆ ಹೆಚ್ಚು ದೂರುಗಳು ಬಂದವು.
ನಗರಸೇವಕಿ ವಾಣಿ ವಿಲಾಸ ಜೋಶಿ ಮುಂತಾದವರುಬಹಾಜರಿದ್ದರು.
ಇದರ ಜೊತೆಗೆ ವಾರ್ಡ ನಂಬರ 29 ರಲ್ಲಿಯೂ ಶಾಸಕರು ಸಂಚಾರ ಮಾಡಿ ಸಮಸ್ಯೆಗಳನ್ನು ಆಲಿಸಿದರು.ನಿತಿನ್ ಜಾಧವ, ಜಯಂತ ಜಾಧವ ಸೇರಿದಂತೆ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!