ಬೆಳಗಾವಿ.
ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ಅದರಲ್ಲೂ ಕಂದಾಯ ಶಾಖೆಯನ್ನು ಸರಿದಾರಿಗೆ ತರುವ ಎಲ್ಲ ಕಸರತ್ತನ್ನು ಎಲ್ಲರೂ ಮಾಡಿ ಮುಗಿಸಿದ್ದಾರೆ.
ಆದರೆ ಅದು ಈವರೆಗೂ ಸುಧಾರಿಸುವ ಲಕ್ಷಣಗಳು ಕಾಣಸಿಗುತ್ತಿಲ್ಲ.

ಬಹಳ ಹಿಂದಿನ ಕಥೆ ಬಿಡಿ. ಖಾಸಗಿ ಶಿಕ್ಷಣ ಸಂಸ್ಥೆಗೆ ಚಲನ್ ನೀಡುವ ಸಂಬಂಧ ಕಂದಾಯ ಶಾಖೆಯವರು ಏನೆಲ್ಲ ಮಾಡಿದರು ಎನ್ನುವುದನ್ನು ಬಿಡಿಸಿ ಮತ್ತೊಮ್ಮೆ ಹೇಳಬೇಕಿಲ್ಲ..
ಅದಕ್ಕೆ ಸಂಬಂಧಿಸಿದಂತೆ ಆಯುಕ್ತರು ಒಂದಲ್ಲ ಎರಡೆರಡು ನೋಟೀಸ್ ನ್ನು ಭರ್ತಿ ನಾಲ್ಕು ಜನರಿಗೆ ಕೊಟ್ಟರು. ಆದರೂ ಅಲ್ಲಿ ಕಾಂಚಾಣ ಇಲ್ಲದೇ ಯಾವುದೇ ಕೆಲಸ ಆಗುತ್ತಿಲ್ಲ ಎನ್ನುವ ದೂರುಗಳು ಕೇಳಿ ಬರುತ್ತಿವೆ.
ಅದು ಬಿಡಿ ಈಗ ಸಾರ್ವಜನಿಕರಿಂದ ಬಂದಿರುವ ಮತ್ತೊಂದು ದೂರು ಅಂದರೆ, ಕಂದಾಯ ಶಾಖೆಯ ARO ಒಬ್ಬರು ಎಷ್ಟೆ ತಿಳುವಳಿಕೆ ಹೇಳಿದರೂ ಝಣ ಝಣ ಸಪ್ಪಳವಿಲ್ಲದೇ ಕಡತಗಳನ್ನು ಮುಂದಕ್ಕೆ ಕಳಿಸುತ್ತಿಲ್ಲ ಎನ್ನುವ ಮಾತುಗಳಿವೆ.
ಸಿಂಪಲ್ ಆಗಿ ARO ASLAM ಎಂಬುವರ ಬಗ್ಗೆ ಸಾರ್ವಜನಿಕರ ದೂರುಗಳು ಪಾಲಿಕೆ ಆಯುಕ್ತರ ಕಚೇರಿ ಮೆಟ್ಟಿಲು ತುಳಿದಿವೆ.
ಈ ನಿಟ್ಟಿನಲ್ಲಿ ಇವರ ವ್ಯಾಪ್ತಿಯಲ್ಕಿ ನಡೆದಿದೆ ಎನ್ನಲಾದ ಪಿಐಡಿ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಸಮಗ್ರ ತನಿಖೆ ಮಾಡಬೇಕಾದ ಅವಶ್ಯಕತೆ ಆಯುಕ್ತರ ಮೇಲಿದೆ.
ಆದರೆ ಅವರು ಏನು ಮಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಈ ಹಿಂದೆ ಕೂಡ ಸುಮಾರು 219 ಕ್ಕೂ ಹೆಚ್ಚು ಕಡತಗಳು ನಿಯಮ ಉಲ್ಲಂಘಿಸಿ ಆಗಿದ್ದರ ಬಗ್ಗೆ ದೂರುಗಳಿದ್ದವು.ಈ ಬಗ್ಗೆ ಆಯುಕ್ತರು ಯಾವ ವಿಚಾರಣೆ ಮಾಡಿದರು ಎನ್ನುವುದು ಗೊತ್ತಾಗಬೇಕಿದೆ.