ಬೆಳಗಾವಿ.
ಮಹಾನಗರ ಪಾಲಿಕೆ ವಾರ್ಡ 43 ರಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಕೊಡಲಾಗಿದೆ.
ಅನಗೋಳ ಸ್ಮಶಾನ ಸೇರಿದಂತೆ ಟಿಳಕವಾಡಿ ಎರಡನೇ ಗೇಟ್ ಬಳಿಯಿರುವ ಹೆರವಾಡ್ಕರ ಶಾಲೆ ರಸ್ತೆ ಬದಿಗೆ ಬೀದಿ ದೀಪ ಅಳವಡಿಸುವ ಕೆಲಸ ಚಾಲ್ತಿಯಲ್ಲಿದೆ

ಶಾಸಕ ಅಭಯ ಪಾಟೀಲರ ಮಾರ್ಗದರ್ಶನದಲ್ಲಿ ನಗರಸೇವಕಿ ವಾಣಿ ಜೋಶಿ ಅವರ ನೇತೃತ್ವದ ಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ.
ಅನಗೋಳ ಸ್ಮಶಾನದ ಸಮಗ್ರ ಅಭಿವೃದ್ಧಿ ಗಾಗಿ ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಅದರ ಜಿತೆಗೆ ಈಗ ತುರ್ತಾಗಿ ಆಗಬೇಕಾದ ಕಾಮಗಾರಿಗಳು ನಡೆದಿವೆ

ಇನ್ನು ಬೆಳಗಾವಿ ಟಿಳಕವಾಡಿ ಹೆರವಾಡ್ಕರ ಶಾಲೆಯಿಂದ ಗಣಪತಿ ದೇವಸ್ಥಾನವರೆಗೆ ವಿದ್ಯುತ್ ದೀಪ ಅಳವಡಿಸುವ ಕಾಮಗಾರಿಗೆ ಶಾಸಕರ ಸಹೋದರ ಭರತ ಪಾಟೀಲ ಚಾಲನೆ ನೀಡಿದರು. ನಗರಸೇವಕಿ ವಾಣಿ ಜೋಶಿ, ಉಪಮೇಯರ್ ಆನಂದ ಚವ್ಹಾಣ ಹಾಜರಿದ್ದರು.