ಸಿ.ಟಿ. ರವಿ ಬೆಳಗಾವಿ ಪ್ರವೇಶ: ಹಿಂದಿನ ರಾಜಕೀಯ ಲೆಕ್ಕಾಚಾರ ಏನು?

ಹಿಂದುತ್ವ ಅಸ್ತ್ರ:- ಹೈಕಮಾಂಡ್ ತಂತ್ರ
ಕಳೆದ ಕೆಲವು ವರ್ಷಗಳಲ್ಲಿ, ಸಿ.ಟಿ. ರವಿ ಬಿಜೆಪಿಯ ಹಿಂದುತ್ವದ ಪ್ರಭಾವಿ ನಾಯಕರಾಗಿ ಬೆಳೆಯುತ್ತಿದ್ದಾರೆ, ಹೀಗಾಗಿ ಬೆಳಗಾವಿಯಲ್ಲಿ ಇನ್ನಷ್ಟು ಹಿಂದುತ್ವವನ್ನು ಹೆಚ್ಚಿಗೆ ಮಾಡಲು ಹೈಕಮಾಡ ರವಿ ಅವರಿಗೆ ಹೆಚ್ಚಿಗೆ ಪ್ರಾಮುಖ್ಯತೆ ಕೊಡುತ್ತಿದೆ ಎಂದು ಹೇಳಲಾಗುತ್ತಿದೆ.

ಇದರ ಜೊತೆಗೆ ಮಹಿಳಾ ಪ್ರಭಾವಿ ನಾಯಕಿ ಹೆಬ್ಬಾಳಕರಗೆ ಏಟಿಗೆ ಎದಿರೇಟು ನೀಡಲು ಹಿಂದುತ್ವ ರಾಜಕೀಯವನ್ನು ಮತ್ತಷ್ಟು ತೀವ್ರಗೊಳಿಸುವ ಆಲೋಚನೆ ಬಿಜೆಪಿಗೆ ಇದೆ ಎಂದು ಹೇಳಲಾಗುತ್ತಿದೆ. ಯಡಿಯೂರಪ್ಪ ನಂತರ ಬಿಜೆಪಿ ಉನ್ನತ ಹಂತದಲ್ಲಿ ಲಿಂಗಾಯತ-ಒಕ್ಕಲಿಗ ಸಮೀಕರಣದಲ್ಲಿ ಹೊಸ ನಾಯಕತ್ವ ಬೇಕಾಗಿದೆ. ಇದಕ್ಕೆ ಸಿ.ಟಿ. ರವಿ ಅವರನ್ನು ಆಯ್ಕೆ ಮಾಡುವ ಉದ್ದೇಶದಿಂದ ಈ ತಂತ್ರಗಾರಿಕೆ ನಡೆಸಿರಬಹುದು ಎನ್ನುವ ಮಾತುಗಳಿವೆ.

ಸಿ.ಟಿ. ರವಿ ಬೆಳಗಾವಿ ಪ್ರವೇಶ:
ಹಿಂದಿನ ರಾಜಕೀಯ ಲೆಕ್ಕಾಚಾರ ಏನು?

ಬೆಳಗಾವಿ.
ರಾಜಕೀಯದಲ್ಲಿ ಕೆಲವೊಂದು ಪ್ರವೇಶಗಳು ಸಾಮಾನ್ಯ ಪ್ರವೇಶವಾಗುವುದಿಲ್ಲ. ಒಂದು ನಿರ್ದಿಷ್ಟ ಸಮಯದಲ್ಲಿ, ನಿರ್ದಿಷ್ಟ ಪ್ರದೇಶಕ್ಕೆ ರಾಜಕೀಯ ನಾಯಕರ ಭೇಟಿ ಸಾಂದರ್ಭಿಕ ಅಲ್ಲ; ಅದಕ್ಕೆ ಒಳಗೊಂದು ಲೆಕ್ಕಾಚಾರ ಇದ್ದೇ ಇರುತ್ತದೆ.
ಬೆಳಗಾವಿಯ ರಾಜಕೀಯ ಪರಿಕಲ್ಪನೆಯಲ್ಲಿ ಸಿ.ಟಿ. ರವಿ ಅವರ ಪ್ರವೇಶವೂ ಇದೇ ರೀತಿಯ ಹೊಸ ತಂತ್ರದ ಭಾಗ ಎನ್ನುವ ಮಾತು ಕೇಳಿ ಬರುತ್ತಿದೆ.
ಕಳೆದ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ನಡುವೆ ಜಟಾಪಟಿ ನಂತರ ಮೊದಲ ಬಾರಿಗೆ ರವಿ ಬೆಳಗಾವಿ ಪ್ರವೇಶ ಒಂದು ರೀತಿಯ ರಾಜಕೀಯ ಲೆಕ್ಕಾಚಾರದ ಮಾತುಗಳು ಕೇಳಿ ಬರುತ್ತಿವೆ.
ಗಮನಿಸಬೇಕಾದ ಸಂಗತಿ ಎಂದರೆ, ಸಿ.ಟಿ.ರವಿ ಅವರು ಬೆಳಗಾವಿ ಪ್ರವೇಶದ ಸಂದರ್ಭದಲ್ಲಿ ಪತ್ರಕರ್ತರು ಪದೇ ಪದೇ ಅದೇ ಹಳೆಯ ಗಲಾಟೆ ಬಗ್ಗೆ ಕೇಳಿದರೂ ಕೂಡ ಹೆಚ್ಚಿಗೆ ಮಾತನಾಡುವ ಗೋಜಿಗೆ ಹೋಗಲಿಲ್ಲ.

ಬದಲಾಗಿ ವಿಷಯ ಈಗ ಕೋರ್ಟನಲ್ಲಿದೆ. ಮೇಲಾಗಿ ಸಬಾಪತಿ ಬಸವರಾಜ ಹೊರಟ್ಟಿ ಅವರ ಮುಂದಿದೆ. ಹೀಗಾಗಿ ನಾನು ಅದರ ಬಗ್ಗೆ ಮಾತನಾಡಲ್ಲ ಎನ್ನುತ್ತಲೇ ಪರೋಕ್ಷವಾಗಿ ಸಚಿವೆ ಹೆಬ್ಬಾಳಕರಗೆ ಟಾಂಗ್ ಸಹ ಕೊಡುವ ಕೆಲಸ ಮಾಡಿದರು,
ಇಲ್ಲಿ ಬಿಜೆಪಿಯ ಪ್ರಭಾವಿ ಹಿಂದುತ್ವ ಮುಖಂಡ ಎಂದು ಹೆಸರಾದ ಸಿ.ಟಿ. ರವಿ, ಅವರದ್ದು ಇದು ಕೇವಲ ಭೆಟ್ಟಿಯಲ್ಲ. ಅದರ ಹಿಂದೆ ರಾಜಕೀಯ ಮೌನವನ್ನು ಮುರಿಯುವ ನಿಧರ್ಾರ ಇರಬಹುದು ಎನ್ನುವ ಲೆಕ್ಕಾಚಾರದ ಮಾತುಗಳು ಕೇಳಿ ಬರುತ್ತಿವೆ,

ಸಹಜವಾಗಿ ಈಗಲೂಕೂಡ ಯುವ ಮತದಾರರಲ್ಲಿ ಸಿ.ಟಿ.ರವಿಯವರ ಬಗ್ಗೆ ಒಂದು ಒಲವಿದೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಅಲ್ಪಸಂಖ್ಯಾತರ ಓಲೈಕೆ ಬಜೆಟ್ ಮಂಡಿಸಿದ್ದನ್ನು ಉಪಯೋಗಿಸಿಕೊಂಡು ಹಿಂದುತ್ವದ ಮೂಲಕ ಎಲ್ಲ ಮತದಾರರನ್ನು ಸೆಳೆಯುವ ತಂತ್ರ ಇದರ ಹಿಂದಿದೆ ಎಂದು ಹೇಳಲಾಗುತ್ತಿದೆ,
ಸಿಟಿ ರವಿಯವರ ಈ ಭೇಟಿಯು ತಾತ್ಕಾಲಿಕ ಮಾತುಗಾರಿಕೆ ಮತ್ತು ದೇವಸ್ಥಾನದ ಭೆಟ್ಟಿಗಷ್ಟೇ ಸಿಮೀತವಾಗಿಲ್ಲ. ಇದು ರಾಜ್ಯ ರಾಜಕಾರಣದಲ್ಲಿ ಮುಂದಿನ ದಿನಗಳಲ್ಲಿ ಹೊಸ ಬೆಳವಣಿಗೆಗಳಿಗೆ ನಾಂದಿ ಹಾಡಬಹುದು ಎನ್ನಲಾಗುತ್ತಿದೆ,

ಬಿಜೆಪಿ ಹಾಗೂ ರವಿ ಅವರ ಪಕ್ಷದ ಒಳಗಿನ ಪ್ರಭಾವ ಮತ್ತಷ್ಟು ಬಲಪಡಿಸುವ ಸಾಧ್ಯತೆಯಿದೆ. ಬೆಳಗಾವಿಯಲ್ಲಿ ಈ ಹಿಂದೆ ದೇವೇಂದ್ರ ಫಡ್ನವೀಸ್ ಮತ್ತು ಅನಂತಕುಮಾರ ಹೆಗಡೆ ಅವರ ರಾಜಕೀಯ ಆಕ್ರಮಣಗಳು ಹೇಗೋ, ಅದೇ ರೀತಿಯಲ್ಲಿ ರವಿ ಅವರ ಭೇಟಿ ಹೊಸ ರಾಜಕೀಯ ಲೆಕ್ಕಾಚಾರ ಹುಟ್ಟುಹಾಕಬಹುದು ಎನ್ನಲಾಗುತ್ತಿದೆ.

2028ರ ಟಾರ್ಗೆಟ್‌?
ಸಧ್ಯ ಬಂದಿರುವ ಮಾಹಿತಿ ಪ್ರಕಾರ 2028 ರ ವಿಧಾನಸಭೆ ಚುನಾವಣೆ ಲೆಕ್ಕಾಚಾರ ವಿಟ್ಟುಕೊಂಡು ಬಿಜೆಪಿ ರಾಜಕೀಯ ಲೆಕ್ಕಾಚಾರ ನಡೆಸಿದೆ.
ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಿಂದ ಸುಮಾರು 50 ಸಾವಿರಕ್ಕು ಹೆಚ್ಚು ಮತಗಳಿಂದ ಗೆಲುವು ಸಾಧಿಸಿದ್ದರು, ಹೀಗಾಗಿ ಗ್ರಾಮೀಣದಲ್ಲಿ ಹೆಬ್ಬಾಳಕರ ಬಿಟ್ಟರೆ ಪರ್ಯಾಯವಿಲ್ಲ ಎನ್ನುವ ಮಾತುಗಳಿದ್ದವು.
ಅದೇ ಕಾರಣದಿಂದ ಕಳೆದ ಲೋಕಸಭೆ ಚುನಾವಣೆಯಲ್ಲಿ ಹೈಕಮಾಂಡ ಬಿಜೆಪಿ ಜಗದೀಶ ಶೆಟ್ಟರ್ ವಿರುದ್ಧ ಸಚಿವೆಯ ಪುತ್ರ ಮೃನಾಲ್ನನ್ನು ಕಣಕ್ಕಿಳಿಸಿತ್ತು,

ಆದರೆ ಸವದತ್ತಿ ಮತ್ತು ಬೈಲಹೊಂಗಲ ಹೊರತುಪಡಿಸಿ ಉಳಿದ ಕ್ಷೇತ್ರದಲ್ಲಿ ಕಾಂಗ್ತೆಸ್ ಭಾರೀ ಹಿನ್ನೆಡೆ ಅನುಭವಿಸಿತ್ತು, ಅದನ್ನು ಬಿಡಿ, ಖುದ್ದು ಸಚಿವೆಯ ತವರು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿಯೇ 50 ಸಾವಿರಕ್ಕೂ ಹೆಚ್ಚು ಮತಗಳನ್ನು ಬಿಜೆಪಿ ಪಡೆದುಕೊಂಡಿತು, ಇದು ಒಂದು ರೀತಿ ಬಿಜೆಪಿಗೆ ಬೂಸ್ಟ ಸಿಕ್ಕಂತಾಯಿತು. ಅಂದರೆ ಇಲ್ಲಿ ಮರಾಠಿ ಭಾಷಿಕರು ಅಷ್ಟೆ ಅಲ್ಲ ಖುದ್ದ ಲಿಂಗಾಯತರೂ ಕಾಂಗ್ರೆಸ್ ಗೆ ಕೈ ಕೊಟ್ಟರು ಎಂದು ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ಅದಕ್ಕೆ ಕಾರಣ ನೂರಾರು.

ಈ ಹಿನ್ನೆಲೆಯಲ್ಲಿ ಬೆಳಗಾವಿ ಗ್ರಾಮೀಣದಲ್ಲಿ ಬಿಜೆಪಿ ಸಂಘಟನೆಯನ್ನು ಈಗಿನಿಂದಲೇ ಚುರುಕುಗೊಳಿಸಿದೆ,. ಅಲ್ಲಿಯೇ ಮರಾಠಾ ಮತ್ತು ಲಿಂಗಾಯತರು ಅಷ್ಟೇ ಅಲ್ಲ ಪ್ರಖರ ಹಿಂದುತ್ವದ ಮೂಲಕ ಗ್ರಾಮೀಣ ಗೆಲ್ಲಬೇಕು ಎನ್ನುವ ರಣತಂತ್ರ ರವಿ ಭೆಟ್ಟಿಯ ಹಿಂದಿದೆ ಎಂದು ಹೇಳಲಾಗುತ್ತಿದೆ.

ಹಿಂದುತ್ವ ಅಸ್ತ್ರ:- ಹೈಕಮಾಂಡ್ ತಂತ್ರ
ಕಳೆದ ಕೆಲವು ವರ್ಷಗಳಲ್ಲಿ, ಸಿ.ಟಿ. ರವಿ ಬಿಜೆಪಿಯ ಹಿಂದುತ್ವದ ಪ್ರಭಾವಿ ನಾಯಕರಾಗಿ ಬೆಳೆಯುತ್ತಿದ್ದಾರೆ, ಹೀಗಾಗಿ ಬೆಳಗಾವಿಯಲ್ಲಿ ಇನ್ನಷ್ಟು ಹಿಂದುತ್ವವನ್ನು ಹೆಚ್ಚಿಗೆ ಮಾಡಲು ಹೈಕಮಾಡ ರವಿ ಅವರಿಗೆ ಹೆಚ್ಚಿಗೆ ಪ್ರಾಮುಖ್ಯತೆ ಕೊಡುತ್ತಿದೆ ಎಂದು ಹೇಳಲಾಗುತ್ತಿದೆ.
ಇದರ ಜೊತೆಗೆ ಮಹಿಳಾ ಪ್ರಭಾವಿ ನಾಯಕಿ ಹೆಬ್ಬಾಳಕರಗೆ ಏಟಿಗೆ ಎದಿರೇಟು ನೀಡಲು ಹಿಂದುತ್ವ ರಾಜಕೀಯವನ್ನು ಮತ್ತಷ್ಟು ತೀವ್ರಗೊಳಿಸುವ ಆಲೋಚನೆ ಬಿಜೆಪಿಗೆ ಇದೆ ಎಂದು ಹೇಳಲಾಗುತ್ತಿದೆ. ಯಡಿಯೂರಪ್ಪ ನಂತರ ಬಿಜೆಪಿ ಉನ್ನತ ಹಂತದಲ್ಲಿ ಲಿಂಗಾಯತ-ಒಕ್ಕಲಿಗ ಸಮೀಕರಣದಲ್ಲಿ ಹೊಸ ನಾಯಕತ್ವ ಬೇಕಾಗಿದೆ. ಇದಕ್ಕೆ ಸಿ.ಟಿ. ರವಿ ಅವರನ್ನು ಆಯ್ಕೆ ಮಾಡುವ ಉದ್ದೇಶದಿಂದ ಈ ತಂತ್ರಗಾರಿಕೆ ನಡೆಸಿರಬಹುದು ಎನ್ನುವ ಮಾತುಗಳಿವೆ.

Leave a Reply

Your email address will not be published. Required fields are marked *

error: Content is protected !!