ಕ್ರಿಕೆಟ್ ವಿಜಯೋತ್ಸವ: ಬೆಳಗಾವಿಯಲ್ಲಿ ಮುಗಿಲು ಮುಟ್ಟಿದ ಸಂಭ್ರಮ,

Oplus_131072

ಕ್ರಿಕೆಟ್ ವಿಜಯೋತ್ಸವ: ಬೆಳಗಾವಿಯಲ್ಲಿ ಮುಗಿಲು ಮುಟ್ಟಿದ ಸಂಭ್ರಮ,
ಬೆಳಗಾವಿ

Oplus_131072

ದುಬೈನಲ್ಲಿ ಭಾರತ ಕ್ರಿಕೆಟ್ ತಂಡದ ಭರ್ಜರಿ ಗೆಲುವು ಬೆಳಗಾವಿಯಲ್ಲಿ ಅದ್ದೂರಿ ವಿಜಯೋತ್ಸವಕ್ಕೆ ಕಾರಣವಾಯಿತು! ಭಾರತದ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಗೆಲುವು ಬೆಳಗಾವಿಯ ಜನರನ್ನು ಸಂಭ್ರಮದಲ್ಲಿ ತೇಲುವಂತೆ ‌ಮಾಡಿತು.

Oplus_131072

ಮುಗಿಲು‌ ಮುಟ್ಟಿದ ಹರ್ಷೋಲ್ಲಾಸ :
ಕಳೆದ ದಿನ ರಾತ್ರಿ‌ಚಾಂಪಿಯನ್ ಶಿಪ ಪಟ್ಟನ್ಬು ಮುಡಿಗೇರಿಸಿಕೊಳ್ಳುತ್ತಿದ್ದಂತೆಯೇ ಬೆಳಗಾವಿಯ ಎಲ್ಲಾ ಪ್ರಮುಖ ವೃತ್ತಗಳು, ಬೀದಿಗಳು ದೇಶಭಕ್ತಿಯ ನಿನಾದ ತಾರಕಕ್ಕೇರಿತು.. ಜಂಬೋ ಸ್ಕ್ರೀನ್‌ಗಳಲ್ಲಿ ಪಂದ್ಯವನ್ನು ವೀಕ್ಷಿಸಿದ್ದ ಕ್ರಿಕೆಟ್ ಅಭಿಮಾನಿಗಳು ಕೊನೆಯ ಓಟದ ಕ್ಷಣಗಳಲ್ಲಿ ಉಸಿರುಗಟ್ಟಿದಂತಾದರು. ಭಾರತದ ಗೆಲುವು ಖಚಿತವಾದ ತಕ್ಷಣವೇ ಪಟಾಕಿ ಸಿಡಿಸಿ “ಭಾರತ ಮಾತಾಕೀ ಜೈ ಎಂಬ ಘೋಷಣೆಗಳನ್ನು ಕೂಗಿದರು.

oplus_0

ವಿಜಯ ಮೆರವಣಿಗೆ:

ಭಾರತದ ತ್ರಿವರ್ಣ ಧ್ವಜವನ್ನು ಪ್ರದರ್ಶಿಸುತ್ತ, ಅಭಿಮಾನಿಗಳು ಬೈಕು ಮತ್ತು ಕಾರುಗಳ ಮೆರವಣಿಗೆಯಲ್ಲಿ ತೆರಳಿ ಸಂಭ್ರಮಿಸಿದರು. ಡಿಜೆ ಸಂಗೀತದೊಂದಿಗೆ ಜನರು ಕುಣಿದು ಕುಪ್ಪಳಿಸಿದರು.

Oplus_131072

*ವಿಶೇಷ ಪೂಜೆ

ಬೆಳಿಗ್ಗೆನೇ ಕರವೇ ಯವರು ಭಾರತ ಗೆಲುವಿಗಾಗಿ ಚನ್ನಮ್ಮ‌ವೃತ್ತದ ಗಣಪತಿ‌ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು.

ಹಲವರು ತಮ್ಮ ಮನೆಯಲ್ಲಿ “ಧೋನಿ-ಕೊಹ್ಲಿ-ರೋಹಿತ್” ತಂಡದ ಫೋಟೋಗಳೆಲ್ಲಾ ಬೆಳಗಿಸಿ ವಿಜಯೋತ್ಸವ ಆಚರಿಸಿದರು. ಯುವಕರು ತಮ್ಮ ತಲೆಗಳ ಮೇಲೆ ಭಾರತೀಯ ತ್ರಿವರ್ಣವನ್ನು ಬರೆಸಿಕೊಂಡು, ಕ್ರಿಕೆಟ್ ಗೆಲುವನ್ನು ಸ್ಮರಣೀಯ ಮಾಡಿದರು.

ಇದು ಕೇವಲ ಕ್ರಿಕೆಟ್ ಗೆಲುವಲ್ಲ, ದೇಶದ ಹೆಮ್ಮೆ ಎಂದು ಶಾಸಕ ಅಭಯ ಪಾಟೀಲ ಪ್ರತಿಕ್ರಿಯಿಸಿದರು.

ಇದು ಕೇವಲ ಒಂದು ಪಂದ್ಯ ಗೆಲುವಲ್ಲ, ಇದು ಭಾರತ ಕ್ರಿಕೆಟ್ ಪರಂಪರೆಯ ಮೇಲುಗೈ. ನಮ್ಮ ಆಟಗಾರರು ತೋರಿಸಿದ ಶ್ರಮ, ಶಿಸ್ತು ಮತ್ತು ತ್ಯಾಗ ಈ ಸಾಧನೆಗೆ ಕಾರಣ ಎಂದು ಅವರು ಹೇಳಿದರು.

ಭಾರತಕ್ಕೆ ಚಾಂಪಿಯನ್ ಟ್ರೋಫಿ – ಶಾಸಕ ಬಾಲಚಂದ್ರ ಜಾರಕಿಹೊಳಿ ಅಭಿನಂದನೆ

ದುಬೈನಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ವಿರುದ್ಧ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಅಭೂತಪೂರ್ವ ಗೆಲುವು ದಾಖಲಿಸಿ ಚಾಂಪಿಯನ್ ಕಿರೀಟ್ ಧರಿಸಿರುವುದಕ್ಕೆ ಅರಭಾವಿ ಶಾಸಕ ಮತ್ತು ಕಹಾಮ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಅವರು ಹರ್ಷ ವ್ಯಕ್ತಪಡಿಸಿ, ಟೀಂ ಇಂಡಿಯಾವನ್ನು ಅಭಿನಂದಿಸಿದ್ದಾರೆ.

ಈ ಮೂಲಕ ಒಟ್ಟು ಮೂರು ಬಾರಿ ಚಾಂಪಿಯನ್ ಟ್ರೋಫಿ ಪಡೆದಿರುವ ಭಾರತವು ವಿಶ್ವದ ಮೊದಲ ತಂಡವಾಗಿದೆ.
ಭಾನುವಾರದಂದು ದುಬೈ ಕ್ರೀಡಾಂಗಣದಲ್ಲಿ ಜರುಗಿದ ಕಿವಿಸ್ ಎದುರು ಫೈನಲ್ ಫೈಟ್ ನಲ್ಲಿ ಕೊನೆಗೂ ಕಿವೀಸ್ ವಿರುದ್ಧ ಗೆಲ್ಲುವ ಮೂಲಕ ಭಾರತ ಚಾಂಪಿಯನ್ ಪಟ್ಟಕ್ಕೇರಿತು. ಈ ಮೂಲಕ ಕಳೆದ ೨೫ ವರ್ಷಗಳ ಹಿಂದಿನ ಸೇಡು ತೀರಿಸಿಕೊಂಡಿದೆ.
ಅಲ್ಲದೇ ಈ ಚಾಂಪಿಯನ್ ಟ್ರೋಫಿ ಪಂದ್ಯಾವಳಿಯಲ್ಲಿ ಭಾರತವು ಒಂದೂ ಪಂದ್ಯವನ್ನು ಸೋಲದೇ ಅಜೇಯವಾಗಿ ಫೈನಲ್ ಪ್ರವೇಶ ಮಾಡಿ ಕಿವೀಸ್ ವಿರುದ್ಧ ೪ ವಿಕೆಟ್ ಗೆಲುವು ಪಡೆದುಕೊಂಡಿತು.
ಟೀಂ ಇಂಡಿಯಾ ಹೊಸ ಚಾಂಪಿಯನ್ ಆಗುತ್ತಿದ್ದಂತೆಯೇ ದೇಶಾದ್ಯಂತ ಸಂಭ್ರಮ ಮುಗಿಲು ಮುಟ್ಟಿದೆ.
ಪಟಾಕಿ ಸಿಡಿಸಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!