ಬೆಳಗಾವಿ ಪಾಲಿಕೆ ಇಬ್ಬರು ಬಿಜೆಪಿ ಸದಸ್ಯರ ಅನರ್ಹ ಪ್ರಕರಣ. ಇಂದೇ ಮಧ್ಯಾಹ್ನ 3 ಕ್ಕೆ ವಿಚಾರಣೆ ಸಾಧ್ಯತೆ. ರಿಜಲ್ಟ್ ಕೂಡ ಇಂದೇ..!
ಬೆಳಗಾವಿ.
ಮಾರ್ಚ 15 ಕ್ಕೆ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಚುನಾವಣೆ ನಿಗದಿ ಯಾದರೂ ಎಲ್ಲರ ಚಿತ್ತ ಇಂದು ಮಧ್ಯಾಹ್ನ 3 ರವೆರೆಗೆ ಇದೆ.
ಬೆಳಗಾವಿ ಪ್ರಾದೇಶಿಕ ಆಯುಕ್ತರು ಅನರ್ಹಗೊಳಿಸಿದ ಇಬ್ಬರು ಬಿಜೆಪಿ ನಗರಸೇವಕರ ಅನರ್ಹತೆ ಪ್ರಕರಣ ಇಂದು ಮಧ್ಯಾಹ್ನ ಯುಡಿ ಸೆಕ್ರೆಟರಿ ಕೋರ್ಟ ನಲ್ಲಿ ವಿಚಾರಣೆಗೆ ಬರಲಿದೆ.

ಈ ಹಿನ್ನೆಲೆಯಲ್ಲಿ ಕೋರ್ಟ ಆದೇಶ ಏನಾಗಲಿದೆ ಎನ್ನುವ ಕುತೂಹಲ ಎಲ್ಲರಲ್ಲಿದೆ.
ಇವತ್ತು ಮೇಯರ್ ಮತ್ತು ಉಪಮೇಯರ್ ಚುನಾವಣೆಗೆ ಸಂಬಂಧಿಸಿದಂತೆ ಆಕಾಂಕ್ಷಿಗಳ ಅಭಿಪ್ರಾಯ ಸಂಗ್ರಹಿಸಲು ಬಿಜೆಪಿ ಹಿರಿಯ ನಾಯಕ ಎನ್. ರವಿಕುಮಾರ ಆಗಮಿಸಿದ್ದರು.
ಇಲ್ಲಿ ಮೇಯರ್ ಆಕಾಂಕ್ಷಿಗಳಾಗಿ ಮೂವರು ಮತ್ತು ಉಪಮೇಯರ ಆಕಾಂಕ್ಷಿಗಳಾಗಿ 5 ಜನ ಹೆಸರು ನೋಂದಾಯಿಸಿದ್ದಾರೆ.
ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಅನಿಲ ಬೆನಕೆ, ಗೀತಾ ಸುತಾರ , ಮೇಯರ್ ಮತ್ತು ಉಪಮೇಯರ ಹಾಜರಿದ್ದರು.