ಬೆಳಗಾವಿ
ಕರ್ತವ್ಯನಿರತ ಬೆಳಗಾವಿ ಮಹಾನಗರ ಪಾಲಿಕೆಯ ಕಂದಾಯ ಶಾಖೆಯ ಅಧಿಕಾರಿ ಮೇಲೆ ಕಾಂಗ್ರೆಸ್ ನಗರಸೇವಕರೊಬ್ಬರು ದರ್ಪ ಮೆರೆದ ಘಟನೆ ಇಂದು ನಡೆದಿದೆ.
ಅಶೋಕ ನಗರ ವಾರ್ಡನ ನಗರಸೇವಕ ರಿಯಾಜ ಕಿಲ್ಲೆದಾರ ಎಂಬಾತನೇ ಕರ್ತವ್ಯನಿರತ. ಕಂದಾಯ ಶಾಖೆ ಅಧಿಕಾರಿ ಆನಿಶೆಟ್ಟರ್ ಮೇಲೆ ದರ್ಪ, ಪುಂಡಾಟಿಕೆ ನಡೆಸಿದರು ಎಂದು ಹೇಳಲಾಗಿದೆ.

ಇಲ್ಲಿ ನಗರಸೇವಕರು ತಮಗೆ ಸಂಬಂಧಪಡದ ಜಮೀನು ವ್ಯವಹಾರಕ್ಕೆ ಸಂಬಂಧಿಸಿದಂತೆ PID. ಮಾಡಿಕೊಡುವಂತೆ ಕಂಸಾಯ ಶಾಖೆ ಅಧಿಕಾರಿಗೆ ಕಳೆದ ದಿನ ಸಂಜೆ ಹೇಳಿದ್ದರಂತೆ. ಆಗ ಅವರು ನಾಳೆ ದಾಖಲೆ ಗಮನಿಸುವುದಾಗಿ ತಿಳಿಸಿದ್ದರು.
ಆದರೆ ಇಂದು ಆನಿಶೆಟ್ಟರ್ ಅವರಿಗೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ಇ ಖಾತಾ ದ ನೋಡಲ್ ಅಧಿಕಾರಿಯಾಗಿದ್ದರಿಂದ ಅವರು ಪಾಲಿಕೆ ಮುಖ್ಯ ಕಚೇರಿಯ ಅನೆಕ್ಸ ಕಟ್ಟಡಕ್ಜೆ ಬಂದಿದ್ದರು.
ಈ ಸಂದರ್ಭದಲ್ಲಿ ಮತ್ತೇ ನಗರಸೇವಕ ರಿಯಾಜ ಕಿಲ್ಲೆದಾರ ಅವರು ಅಧಿಕಾರಿಗೆ ಕಾಲ್ ಮಾಡಿದ್ದರು. ಆಗ ಹತ್ತು ನಿಮಿಷ ಸಮಯ ಕೊಡಿ. ದಾಖಲೆ ಗಮನಿಸಿ ಹೇಳುವೆ ಅಂದರು.
ಅಷ್ಟೇ ತಡ ನಗರಸೇವಕಕಿಲ್ಲೆದಾರ ಮೈಮೇಲೆ ದೆವ್ವ ಹೊಕ್ಕಂತೆ ಪಾಲಿಕೆ ಕಚೇರಿಗೆ ಆಗಮಿಸಿ ಕರ್ತವ್ಯ ನಿರತ ಅಧಿಕಾರಿ ಮೇಲೆ ಏರಿ ಹೋಗಿದ್ದಲ್ಲದೇ ಸೊಂಟದ ಕೆಳಗಿನ ಮಾತುಗಳನ್ನು ಆಡುವ ಮೂಲಕ ದರ್ಪತನ ತೋರಿದರು ಎಂದು ಹೇಳಲಾಗಿದೆ.
ಈ ಏರಿದ ಧ್ವನಿಯ ಮಾತುಗಳನ್ನು ಕೇಳಿದ ಅಲ್ಲಿದ್ದ ನಗರಸೇವಕ ದಿನೇಶ ನಾಶಿಪುಡಿ ಸೇರಿದಂತೆ ಮತ್ತಿತರರು ಕಿಲ್ಲೆದಾರಗೆ ಬುದ್ದಿ ಮಾತು ಹೇಳಿದರು. ನಂತರು ಉಪ ಆಯುಕ್ತ ಉದಯಕುಮಾರ ಅವರು ಇಬ್ಬರನ್ನು ತಮ್ಮ ಕೊಠಡಿಗೆ ಕರೆದುಕೊಂಡು ಹೋಗಿ ಮಾತುಕತೆ ನಡೆಸಿದರು
ಗಡಿನಾಡ ಬೆಳಗಾವಿಯಲ್ಲಿ ಎಂಇಎಸ್ ಪುಂಡರು ಮರಾಠಿಯಲ್ಲಿ ದಾಖಲೆಬಕೊಡಿ ಎಂದು ಅಧಿಕಾರಿಗಳಿಗೆ ಬೆದರಿಕೆ ಹಾಕುವ ಕೆಲಸ ನಡೆಸಿದ್ದಾರೆ.ಅಂತಹುದರಲ್ಲಿ ಕಾಂಗ್ರೆಸ್ ನಗರಸೇವಕ ಸರ್ಕಾರಿ ಅಧಿಕಾರಿ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಲ್ಲದೇ ಕೆಟ್ಟ ಶಬ್ದಗಳಿಂದ ನಿಂದಿಸಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಈಗ ಬೆಳಗಾವಿಯಲ್ಲಿ ಅಧಿಕಾರಿಗಳಿಗೆ ಸುರಕ್ಷತೆ ಇಲ್ಲವೇ ಎನ್ನುವ ಬಹುದೊಡ್ಡ ಪ್ರಶ್ನೆ ಎದುರಾಗಿದೆ
.