RC ಆದೇಶಕ್ಜೆ ತಡೆ. ಕೋರ್ಟ ಮೂಲಕ ನ್ಯಾಯ ಪಡೆದ ಬಿಜೆಪಿ ಸದಸ್ಯರು. ಗೆಲುವಿನ ನಗೆ ಬೀರಿದ ಶಾಸಕ ಅಭಯ.
ಬೆಂಗಳೂರು.
ತಿನಿಸುಕಟ್ಟೆ ಪ್ರಕರಣದಲ್ಲಿ ಬಿಜೆಪಿಯ ಇಬ್ಬರು ನಗರಸೇವಕರ ಸದಸ್ಯತ್ವ ರದ್ದತಿ ಪ್ರಕರಣದಲ್ಲಿ ಪ್ರಾದೇಶಿಕ ಆಯುಕ್ತರ ಆದೇಶಕ್ಕೆ ಹೈಕೋರ್ಟ ತೆಯಾಜ್ಞೆ ನೀಡಿದೆ.
ಅನರ್ಹಗೊಂಡ ಜಯಂತ ಜಾಧವ ಮತ್ತು ಮಂಗೇಶ ಪವಾರ ಅವರು ಚುನಾವಣೆಗೆ ಸ್ಪರ್ಧೆ ಮಾಡಬಹುದು ಎಂದು ಹೈಕೋರ್ಟ್ ಆದೇಶ ನೀಡಿದೆ.

ಕಳೆದ ದಿನವಷ್ಟೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ನಡೆಸಿದ ಮೆಲ್ಮನವಿ ಪ್ರಾಧಿಕಾರ ವು ಈ ಇಬ್ವರೂ ಸದಸ್ಯರ ಮನವಿಯನ್ನು ತಿರಸ್ಕರಿಸಿತ್ತು.





ಅದನ್ನು ಪ್ರಶ್ನಿಸಿ ಅವರು ಹೈಕೋರ್ಟ ಮೆಟ್ಟಿಲು ಹತ್ತಿದ್ದನ್ನು ಇಲ್ಲಿ ಸ್ಮರಿಸಬಹುದು.
ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರು ಪ್ರಾದೇಶಿಕ ಆಯುಕ್ತರ ಆದೇಶದ ಬಗ್ಗೆ ವ್ಯಾಪಕ ಅಸಮಾಧಾನ ವ್ಯಕ್ತಪಡಿಸಿದ್ದರು. ಅಷ್ಟೆ ಅಲ್ಲ ರಾಜ್ಯಪಾಲರಿಗೂ ದೂರು ಸಲ್ಲಿಸಿದ್ದರು.
ನಗರಸೇವಕರ ಪರ ಪೂನಂ ಪಾಟೀಲ ವಕಾಲತ್ತು ವಹಿಸಿದ್ದರು.