ಸರ್ಕಾರದ ವಿರುದ್ಧ ಗೆದ್ದು ಬೀಗಿದ ಅಭಯ..!

ಸರ್ಕಾರದ ವಿರುದ್ಧ ಗೆದ್ದು ಬೀಗಿದ ಅಭಯ..,!

ಆದೇಶ ಮಾಡಿದ ಅಧಿಕಾರಿ ವಿರುದ್ಧ ಹೈಕೋರ್ಟ್ ಅಸಮಾಧಾನ..ನುಡಿದಂತೆ

ಒತ್ತಡಕ್ಕೆ ಒಳಗಾಗಿ ಆದೇಶ ಮಾಡಿದ್ರಾ RC?


ಬೆಳಗಾವಿ.
ರಾಜ್ಯದ ಕಾಂಗ್ರೆಸ್ ವ ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಅಭಯ ಪಾಟೀಲ ಗೆದ್ದು ಬೀಗಿದ್ದಾರೆ..

ಬೆಳಗಾವಿ ಮಹಾನಗರ ಪಾಲಿಕೆಯ ಇಬ್ಬರು ಬಿಜೆಪಿ ಸದಸ್ಯರ ಅನರ್ಹ ಪ್ರಕರಣದಲ್ಲಿ ಆಡಿದ ಮಾತನ್ನು ಉಳಿಸಿಕೊಂಡಿದ್ದಾರೆ.

ತಿನಿಸು ಕಟ್ಟೆ ಪ್ರಕರಣದಲ್ಲಿ ಬಿಜೆಪಿಯ ಇಬ್ಬರು ಜಯಂತ ಜಾಧವ ಮತ್ತು ಮಂಗೇಶ್ ಪವಾರ ಅವರ ಸದಸ್ಯತ್ವ ವನ್ನು ರದ್ದುಗೊಳಿಸಿ ಮಾಡಿದ್ದರು.

ಈ ಆದೇಶ ಹೊರಬೀಳುತ್ತಿದ್ದಂತೆಯೇ ಶಾಸಕ ಅಭಯ ಪಾಟೀಲರು ಪ್ರಾದೇಶಿಕ ಆಯುಕ್ತರ ವಿರುದ್ಧ ಕೆಂಡಾಮಂಡಲವಾದರು‌. ಆಗ ಇವರ ಕಟ್ಡರ್ ವಿರೋಧಿಗಳು ಶಾಸಕರ ವಿರುದ್ಧವೇ ಆರೋಪ ಮಾಡಿ ಸರ್ಕಾರಕ್ಕೆ ಪತ್ರ ಬರೆದರು.
ಅದೆಲ್ಲಾ ಒಂದು ಕಡೆಯಾಗುತ್ತಿದ್ದಂತೆಯೇ ಮತ್ತೊಂದು ಕಡೆಗೆ ಕಾನೂನು ಸಮರ ಶುರುವಿಟ್ಟುಕೊಂಡರು.
ಆರಂಭದಲ್ಲಿ ಹೈಕೋರ್ಟ್ ಗೆ ಅರ್ಜಿ ಹಾಕಿದಾಗ ,ಮೊದಲು ಸರ್ಕಾರಕ್ಕೆ ಮನವಿ ಮಾಡಿಕೊಳ್ಳಬೇಕು ಎಂದು ಆದೇಶ ಮಾಡಿತು.
ಇದೆಲ್ಲದರ ನಡುವೆ ಶಾಸಕ ಅಭಯ ಪಾಟೀಲರು ನೇರವಾಗಿ ಪ್ರಾದೇಶಿಕ ಆಯುಕ್ತರ ವಿರುದ್ಧವೇ ಗೌರ್ನರ್ ಗೆ ದೂರು ನೀಡಿದರು.


ಏತನ್ಮಧ್ಯೆ ಕೋರ್ಟದಿಂದ ಈ ಅನರ್ಹ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ಕೊಡಬೇಕು ಎಂದು ಆದೇಶ ಮಾಡಿತ್ತು.
ಈ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಯವರ ಮೇಲ್ಮನವಿ ಪ್ರಾಧಿಕಾರದಲ್ಲಿ ಇಬ್ಬರು ಸದಸ್ಯರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಯಿತು.
ಆದರೆ ಅಲ್ಲಿ ನಿರೀಕ್ಷಿಸಿದಂತೆ ಬಿಜೆಪಿ ನಗರಸೇವಕರ ಮನವಿಯನ್ನುಚತಳ್ಳಿ ಹಾಕಲಾಯಿತು.


ಗಮನಿಸಬೇಕಾದ ಸಂಗತಿ ಎಂದರೆ, ಸರ್ಕಾರದ ಈ ನಿರ್ಧಾರದ ವಿರುದ್ಧ ಬೆಂಗೂರು ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು.
ನಗರಸೇವಕರ ಪರ ವಕೀಲರ ಸಮರ್ಥ ವಾದವನ್ನು ಆಲಿಸಿದ ನ್ಯಾಯಾಲಯ ಆರ್ ಸಿಯವರ ಆದೇಶಕ್ಕೆ ತಡೆಯಾಜ್ಞೆ ನೀಡಿತು. ಮತ್ತೊಂದು ಮುಖ್ಯ ಸಂಗತಿ ಎಂದರೆ, ಈ ಇಬ್ಬರೂ ಸದಸ್ಯರು ಚುನಾವಣೆಗೂ ನಿಲ್ಲಬಹುದು ಮತ್ತು ಅಭ್ಯರ್ಥಿ ಗಳೂ ಆಗಬಹುದು ಎಂದು ಆದೇಶದಲ್ಲಿ ತಿಳಿಸಿದೆ.

ಹೀಗಾಗಿ ಇದು ಸರ್ಕಾರದ ವಿರುದ್ಧ ಶೆಡ್ಡು ಹೊಡೆದು ಗೆದ್ದ ಬಿಜೆಪಿ ಶಾಸಕ ಎನ್ನುವ ಹೆಗ್ಗಳಿಕೆಗೆ ಅಭಯ ಪಾಟೀಲ ಪಾತ್ರರಾದರು ಎಂದು ಹೇಳಬಹುದು.

ಕೊಟ್ಟ ಮಾತು ಉಳಿಸಿಕೊಂಡ ಅಭಯ..!
ಎಲ್ಲಕ್ಕಿಂತ ಮುಖ್ಯವಾಗಿ ಅಭಯ ಪಾಟೀಲರನ್ನು ಬಹುತೇಕರುವಹುಂಬ ಗೌಡ ಎಂದು ಪ್ರೀತಿಯಿಂದ ಕರೆಯುತ್ತಾರೆ.
ಬೆಳಗಾವಿ ಪಾಲಿಕೆ ವಿಷಯದಲ್ಲಿ ಕಿಂಗ್ ಮೇಕರ್ ಎಂದು ಹೆಸರಾದ ಅಭಯ ಪಾಟೀಲರುಬಿದುವರೆಗೂ ಕೊಟ್ಟ ಮಾತು ಮತ್ತು ಇಟ್ಟ ಹೆಜ್ಜೆಯಿಂದ ಹಿಂದೆ ಸರಿದ ಉದಾಹರಣೆಯಿಲ್ಲ.ಬಿಜೆಪಿ ಮೇಯರ್ ಅಧಿಕಾರವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಸುಖಾ ಸುಮ್ಮನೆ ಬೆಳಗಾವಿ ಪಾಲಿಕೆಗೆ ಸೂಪರ್ ಸೀಡ್ ನೋಟೀಸ್ ಕೊಟ್ಟಿತ್ತು. ಆಗಲೂ ಕೂಡ ಅಭಯ ಪಾಟೀಲರು ಏಕಾಂಗಿ ಹೋರಾಟ ನಡೆಸಿ ಗೆಲುವಿನ ನಗೆ ಬೀರಿದ್ದರು.

ಈಗ ಈ ಇಬ್ಬರು ನಗರಸೇವಕರ ಸದಸ್ಯತ್ವ ರದ್ದತಿ ಪ್ರಕರಣದಲ್ಲಿ ಅಭಯ ಪಾಟೀಲರು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ
ಬಿಜೆಪಿಯ ಎಲ್ಲ ನಗರಸೇವಕರ ಸಭೆಯನ್ನು ಖಾಸಗಿ ಹೊಟೇಲ್ ನಲ್ಲಿ ಶಾಸಕ ಅಭಯ ಪಾಟೀಲ ಕರೆದಿದ್ದರು.

ಮೂಲಗಳ ಪ್ರಕಾರ , ಆ ಸಭೆಯಲ್ಲಿ ಅಭಯ ಪಾಟೀಲ ರು ಇಬ್ಬರೂ ನಗರಸೇವಕರು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ ಎಂದು ಹೇಳಿದ್ದರು. ಈಗ ಅವರು ಹೇಳಿದಂತೆಯೇ ಆಗಿದೆ.

ಹೈ ಗರಂ..!
ಮೂಲಗಳ ಪ್ರಕಾರ ಹೈಕೋರ್ಟ್ ಪ್ರಾದೇಶಿಕ ಆಯುಕ್ತರ ಮತ್ತು ಸರ್ಕಾರದ ಆದೇಶದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಈ ರೀತಿ ಒತ್ತಡಕ್ಕೆ ಒಳಗಾಗಿ ಮಾಡಿದ IAS ಅಧಿಕಾರಿ ಯಾರು? ಅವರಿಗೆ ತರಬೇತಿ ನಾವೇ ಕೊಡ್ತೆವಿ ಎನ್ನುವ ಮಾತುಗಳ ಮೂಲಕ ಚಾಟಿ ಬೀಸಿದೆ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *

error: Content is protected !!