IPS ವರ್ಗಾವಣೆ. ಸಂಜೀವಕುಮಾರ ಬೆಂಗಳೂರಿಗೆ

ಬೆಂಗಳೂರು.

ರಾಜ್ಯದ ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರಿಗಳ ವರ್ಗಾವಣೆ ಸುಗ್ಗಿ ಸಧ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣಸಿಗುತ್ತಿಲ್ಲ.

ಕಳೆದ ಎರಡು ದಿನಗಳ ಹಿಂದೆಯಷ್ಟೆ ಐಪಿಎಸ್ ಅಧಿಕಾರಿಗಳನ್ಬು ವರ್ಗಾವಣೆ ಮಾಡಲಾಗಿತ್ತು.‌ಈಗ‌ ಮತ್ತೊಂದು ಪಟ್ಟಿ ಕಳೆದ ದಿನ ಹೊರಬಿದ್ದಿದೆ. ಈ ಬಗ್ಗೆ ಮುಂಚಿತವಾಗಿ ಇ ಬೆಳಗಾವಿ ಡಾಟ್ ಕಾಮ್ ವರದಿ‌ಮಾಡಿತ್ತು.

ಎರಡನೇ ಪಟ್ಟಿಯಲ್ಲಿ ಬೆಳಗಾವಿ ಜಿಲ್ಲೆಯ ಮತ್ತು‌ವಿಶೇಷವಾಗಿ ಮಾಧ್ಯಮಗಳ ಪ್ರೀತಿಯ ಎಸ್ಪಿ ಎಂದೇ ಹೆಸರಾಗಿರುವ ಸಂಜೀವಕುಮಾರ ಪಾಟೀಲರ ವರ್ಗಾವಣೆಯಾಗಿದೆ. ಅವರನ್ನು ಬೆಂಗಳೂರು‌ ವೈಟ್ ಫೀಲ್ಡ್ ಡಿಸಿಪಿ ಆಗಿ ನೇಮಕ ಮಾಡಲಾಗಿದೆ ಭೀಮಾಶಂಕರ ಗುಳೇದ ಅವರನ್ಬು ಬೆಳಗಾವಿ ಎಸ್ಪಿ ಯನ್ನಾಗಿ ನೇಮಕ‌ ಮಾಡಲಾಗಿದೆ.

ಅದೇ ರೀತಿ ಕಲಬುರ್ಗಿಯಲ್ಲಿರುವ‌ IPS ಅಮರನಾಥ ರೆಡ್ಡಿ ಅವರನ್ನು ಬಾಗಲಕೋಟ ಎಸ್ಪಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.

.

ಬೆಂಗಳೂರಿನ ಕಮಾಂಡ್ ಸೆಂಟರನ ಡಿಸಿಪಿ ಆಗಿದ್ದ ರವೀಂದ್ರ ಗಡಾದಿ ಅವರನ್ನು ಗುಪ್ತಚರ ಇಲಾಖೆಯ ಎಸ್ಪಿಯನ್ನಾಗಿ ನೇಮಕ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!