ವಿಜಯಪುರ:
ಮಹತ್ವದ ಬೆಳವಣಿಗೆಯಲ್ಲಿ, ವಿಜಯಪುರ ಮಹಾನಗರ ಪಾಲಿಕೆಯ ಎಲ್ಲಾ 35 ಸದಸ್ಯರು ಅಮಾನತ್ ಆಗಿದ್ದಾರೆ..
ಬೆಳಗಾವಿ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟೆಣ್ಣನವರ್ ಅವರ ಆದೇಶದ ಮೇರೆಗೆ ಸೋಮವಾರ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಮಾನತ್ ಆದವರಲ್ಲಿ 17 ಬಿಜೆಪಿ, 10 ಕಾಂಗ್ರೆಸ್, 1 ಜೆಡಿಎಸ್, 2 ಎಐಎಂಐಎಂ, ಮತ್ತು 5 ಸ್ವತಂತ್ರ ಸದಸ್ಯರು ಸೇರಿದ್ದಾರೆ. ಈ ಸದಸ್ಯರನ್ನು 2022ರ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು.

ಕಳೆದ ಜನವರಿ 9, / 2024 ರಂದು ನಡೆದ ಮೇಯರ್ ಹಾಗೂ ಉಪಮೇಯರ್ ಚುನಾವಣೆಯ ನಂತರ ಮಹಾನಗರ ಪಾಲಿಕೆಯ ಆಸ್ತಿ ಘೋಷಣಾ ಪತ್ರ ಸಲ್ಲಿಸಲಾಗದ ಹಿನ್ನೆಲೆಯಲ್ಲಿಯೇಈ ಕ್ರಮ ತೆಗೆದುಕೊಳ್ಳಲಾಗಿದೆ..

ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ಸದಸ್ಯೆ ಮೆಹೆಜಾಬೀನ್ ಹೋಟ್ರಿ ಮತ್ತು ಉಪಮೇಯರ್ ಸ್ಥಾನಕ್ಕೆ ದಿನೇಶ್ ಹಳ್ಳಿ ಆಯ್ಕೆಯಾಗಿದ್ದರು.
ಆಸ್ತಿ ಘೋಷಣಾ ಪತ್ರ ಸಲ್ಲಿಸದ ಬಗ್ಗೆ ಮಾಜಿ ಸದಸ್ಯ ಪ್ರಕಾಶ್ ಮಿರಜಿ ಮತ್ತು ಮೈನುದ್ದೀನ್ ಬಿಲಗಿ ಕಲಬುರ್ಗಿ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಸರ್ಕಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಿತ್ತು. .
.