
ಬೆಳಗಾವಿ:
ಇಲ್ಲಿನ ಮಾಳಮಾರುತಿ ಬಡಾವಣೆಯಲ್ಲಿ ಶ್ರೀ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರಿಂದ ಪ್ರತಿಷ್ಠಾಪಿಸಲ್ಪಟ್ಟ ಶ್ರೀ
ರಾಘವೇಂದ್ರ ಸ್ವಾಮಿಗಳ ಶ್ರೀಮದ್ ಟೀಕಾಕೃತ್ಪಾದರ ಮತ್ತು ಶ್ರೀ ರಾಮಾಂಜನೇಯರ
ಸನ್ನಿಧಾನದ ೧೧ನೇ ವರ್ಧಂತಿ ಮಹೋತ್ಸವ ಹಾಗೂ ಜ್ಞಾನಸತ್ರ ಕಾರ್ಯಕ್ರಮಗಳು ನಡೆದವು.

ಮುಂಜಾನೆ ೭.೩೦ರಿಂದ ೮.೩೦ರ ತನಕ ಶ್ರೀಪಾದಂಗಳವರ ಪಾದಪೂಜೆ,೯ರಿಂದ ೧೦.೩೦ರ ವರೆಗೆ ತಪ್ತ ಮುದ್ರಾಧಾರಣೆ ನಂತರ ಶ್ರೀಗಳಿಂದ ಅನುಗ್ರಹ ಸಂದೇಶ ನಡೆಯಿತು.


ಸಂಸ್ಥಾನ ಪೂಜೆ, ಮಧ್ಯಾಹ್ನ ೧.೩೦ಕ್ಕೆ ತೀರ್ಥ ಪ್ರಸಾದ ಮತ್ತು ಫಲ ಮಂತ್ರಾಕ್ಷತೆ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಅಧಿಕಾರಿ ವಿ.ಎನ್.ಪಾಟೀಲ, ಉದ್ಯಮಿ ರಾಜೇಂದ್ರ ಪಾಟೀಲ ಸೇರಿದಂತೆ ಮತ್ತಿತರರು ಹಾಜರಿದ್ದರು..