Headlines

ಹೊಸ ವರ್ಷಕ್ಕೆ ಕ್ಷಣಗಣನೆ..!

ಬೆಳಗಾವಿ. 2024 ರ ಸ್ವಾಗತಕ್ಜೆ ಕುಂದಾನಗರಿ ಸಜ್ಜಾಗಿದೆ. 2023 ರಲ್ಲಿ ನಡೆದ ಕಹಿ ಮರೆತು ಮತ್ತು ಸಿಹಿ ನೆನಪಿಸಿಕೊಳ್ಳಲು ಪಾನೀಯ ವ್ಯವಸ್ಥೆ ಕೂಡ ರೆಡಿ ಆಗುತ್ತಿದೆ. ಬರ ಬರ ಎನ್ನುತ್ತಲೇ ಎಲ್ಲರೂ ಕೂಲ್ ಕೂಲ್ ಪಾನೀಯ ಗಂಟಲೊಳಗಿಳಿಸಲು ರೆಡಿ ಆಗುತ್ತಿದ್ದಾರೆ. ಬಹುಶಃ ಇಂದು ರಾತ್ರಿ 8 ರಿಂದ ಡಿಜೆ ಸಪ್ಪಳದೊಂದಿಗೆ ಗ್ಲಾಸುಗಳು ಸದ್ದು ಮಾಡಲು ಆರಂಭವಾಗಲಿವೆ. ಅಧಿಕಾರಿಗಳೇ ಉಸ್ತುವಾರಿ ಹೊತ್ತಿರುವ ಬೆಳಗಾವಿ ಕ್ಲಬದಲ್ಲಿ ಟಿಕೇಟ್ ಮಾರಾಟ ಭರ್ಜರಿ ಆಗಿ ನಡೆದಿದೆ. ಈ ಹಿಂದೇ ಇದೇ ಕ್ಲಬ್ ದಲ್ಲಿ…

Read More

ಬೆಳಗಾವಿಯಲ್ಲೇ ಕನ್ನಡ ಹರೋಹರ..!

ಗಡಿಯಲ್ಲಿ ಸರ್ಕಾರಿ ಅಧಿಕಾರಿಗಳಿಂದಲೇ ಆದೇಶ ಉಲ್ಲಂಘನೆ. ಐಜಿಪಿ, ಡಿಸಿ ಪದಾಧಿಕಾರಿಳಾಗಿರುವ ಬೆಳಗಾವಿ ಕ್ಲಬ್. ಈ ಕ್ಲಬ್ ಹೋಲ್ಡಿಂಗ್ ದಲ್ಲಿ ಕನ್ನಡ ಹರೋಹರ. ಬರೆಯೋಕು ಬಾರದ ದಡ್ಡರು. ಬೆಳಗಾವಿ. ಬೆಂಗಳೂರಿನಲ್ಲಿ ಕುಳಿತು ಮುಖ್ಯಮಂತ್ರಿ ಗಳೂ ಸೇರಿದಂತೆ ಇಡೀ ಮಂತ್ರಿ ಮಂಡಲ ಕನ್ನಡ ಕನ್ನಡ ಅಂತ ಬಾಯಿ ಬಾಯಿ ಬಡಕೊಂಡರೂ ಅದು ಗಡಿನಾಡ ಬೆಳಗಾವಿಯವರಿಗೆ ಏನೂ ಸಂಬಂಧವೇ ಬರಲ್ಲ.! ಕನ್ನಡ ಫಲಕಕ್ಕೆ ಸಂಬಂಧಿಸಿದಂತೆ ರಾಜ್ಯದ ಕನ್ನಡ ಪರ ಸಂಘಟನೆಗಳು ಒಂದಾಗಿ ಅಭಿಯಾನ ಆರಂಭಿಸಿವೆ. ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ಅಳವಡಿಸಿದ ಕ್ಲಬ್…

Read More

2 ರಂದು ಬೆಳಗಾವಿಗೆ ಸಚಿವ ಭೈರತಿ ಸುರೇಶ

ಬೆಳಗಾವಿ. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ ಅವರು ಇದೇ ದಿ.‌2 ರಂದು ಬೆಳಗಾವಿಗೆ ಭೆಟ್ಟಿ ನೀಡಲಿದ್ದಾರೆ. 155 ಪೌರಕಾರ್ಮಿಕರಿಗೆ ನೇಮಕಾತಿ ಪತ್ರ, ಪ್ಲ್ಯಾಸ್ಟಿಕ್ ರಸ್ತೆ ನಿರ್ಮಾಣ, ಹೂವಿನಿಂದ ಅಗರಬತ್ತಿ ತಯಾರಿಕೆಗೆ ಅವರು ಚಾಲನೆ ನೀಡಲಿದ್ದಾರೆ. Youtube subscribe– e ಪ್ರಾಯೋಗಿಕವಾಗಿ ಬೆಳಗಾವಿ ಮಹಾನಗರ ಪಾಲಿಕೆಯ ಮುಂದಿರುವ ರಸ್ತೆಯನ್ನು ಪ್ಲ್ಯಾಸ್ಟಿಕ್ ರಸ್ತೆ ನಿರ್ಮಾಣ ಮಾಡಲು ಪಾಲಿಕೆಯ ನಗರ ಯೋಜನೆ‌ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು. ಶಾಸಕ ಅಭಯ ಪಾಟೀಲರ ಮಾರ್ಗದರ್ಶನ ದಲ್ಲಿ ಪಾಲಿಕೆ ಆಯುಕ್ತರು…

Read More

ಕುತೂಹಲ ಕೆರಳಿಸಿದ ಹೆಬ್ಬಾಳಕರ- ಬಿಎಸ್ ವೈ ಭೆಟ್ಟಿ?!

ಕುತೂಹಲ ಕೆರಳಿಸಿದ ಹೆಬ್ಬಾಳಕರ- ಬಿಎಸ್ ವೈ ಭೆಟ್ಟಿ?!ಬೆಂಗಳೂರು.ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ಪುತ್ರ ಮೃನಾಲ್ ಮತ್ತು ಬಿಜೆಪಿಯ ಹಿರಿಯ ನಾಯಕ ಯಡಿಯೂರಪ್ಪ ಭೆಟ್ಟಿ ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಇವರಿಬ್ಬರ ಭೆಟ್ಟಿಗೆ ರಾಜಕೀಯ ಕಾರಣ ಇತ್ತೊ ಇಲ್ಲವೊ ಎನ್ನುವುದು ಬೇರೆ ಮಾತು.ಆದರೆ ಸಾಮಾಜಿಕ‌ ಜಾಲತಾಣದಲ್ಲಿ ಹರಿದಾಡುತ್ತಿರುವ ಆ ಒಂದು ಪೊಟೊ ಬಿಜೆಪಿ ಮತ್ತು ಕಾಂಗ್ರೆಸ್ ಪಾಳಯದಲ್ಲಿ ಚರ್ಚೆಗೆ ಎಡೆ ಮಾಡಿಕೊಡುತ್ತಿದೆ. ಅಂದ ಹಾಗೆ ಇವರಿಬ್ಬರ ಭೆಟ್ಟಿ ಯಾವಾಗಿನದ್ದು ಎನ್ನುವುದು ಸ್ಪಷ್ಟವಾಗಿಲ್ಲ. ಬಹುಶಃ ದಾವಣಗೆರೆಯಲ್ಲಿ…

Read More

ಇದು ಕನ್ನಡ ಪ್ರೇಮ..!

ಪಾಲಿಕೆ ಆಯುಕ್ತರ ಕನ್ನಡ ಪ್ರೇಮಕ್ಕೊಂದು ಕನ್ನಡಿಗರ ಮೆಚ್ಚುಗೆ. ಕನ್ನಡಿಗರ ಭಾವನೆ ಅರಿತ ಆಯುಕ್ತ ದುಡಗುಂಟಿ. ಪಾಲಿಕೆಯಲ್ಲೂ ಕನ್ನಡತನ ಎತ್ತಿಹಿಡಿದಿದ್ದ ಆಯುಕ್ತರು. ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ಅಧಿಕಾರಿಗಳದ್ದು ತಂತಿ ಮೇಲೆ ನಡಿಗೆ. ಎಲ್ಲೂ ಹೆಚ್ಚು ವಾಲಿ ಕೆಲಸ ಮಾಡೋಕೆ ಆಗಲ್ಲ. ಎಲ್ಲೊ ಒಂದು ಕಡೆ ಸರಿಯಿದ್ದರೂ ಕೂಡ ಅದೇ ರೀತಿ ಮಾಡ ಹೊರಟರೆ ಹೆಸರಿಡುವವರೇ ಹೆಚ್ಚು. ಹೀಗಾಗಿ ಅಧಿಕಾರಿಗಳು ಎಲ್ಲಿಯೂ ಹೆಚ್ಚು ಎಂದು ತೋರಿಸಿಕೊಳ್ಳದೇ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ. ಕಳೆದ ಕೆಲ ದಿನಗಳ ಹಿಂದೆ ಪಾಲಿಕೆ ಸಾಮಾನ್ಯ…

Read More

ಭೇಷ್ ಪೊಲೀಸ್..!

ಬೆಳಗಾವಿ ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತೆ ಮಾಡಿದ ಮತ್ತು ಅಧಿವೇಶನದಲ್ಲಿ ಕಳವಳಕ್ಕೊಳಗಾದ ಹೊಸ ವಂಟಮೂರಿ ಗ್ರಾಮದಲ್ಲಾದ ಮಹಿಳೆ ವಿವಸ್ತ್ರ ಪ್ರಕರಣದಲ್ಲಿ ಇದ್ದುದರಲ್ಲಿಯೇ ಉತ್ತಮ ಕೆಲಸ ಮಾಡಿದ ಪೊಲೀಸ್ ಸಿಬ್ಬಙದಿಗಳನ್ನು ಗೌರವಿಸುವ ಕೆಲಸ ಇಂದು ನಡೆಯಿತು. ಸಂತ್ರಸ್ತ ಮಹಿಳೆಯನ್ನು ರಕ್ಷಿಸಿಸಿದ ಅಲ್ಲಿನ ನಾಗರೀಕರು ಹಾಗೂ ಪೊಲೀಸರಿಗೆ ಪೊಲೀಸ ಆಯುಕ್ತ.ಸಿದ್ದರಾಮಪ್ಪ, ಇಂದು ಕವಾಯತು ಮೈದಾನದಲ್ಲಿ ನಡೆದ ಪರೇಡ್ ನಲ್ಲಿ ಸನ್ಮಾನಿಸಿದರು. ಈ ಘಟನೆ ನಡೆದಾಗ . ವಾಸಿಮ ಮಕಾನದಾರ ಹಾಗೂ . ಸಿದ್ದಪ್ಪ ಹೊಳೆಕರ್ ಅಧ್ಯಕ್ಷರು ಗ್ರಾಮ ಪಂಚಾಯತ್ ಹೊಸವಂಟಮುರಿ…

Read More

ಅರಣ್ಯದಲ್ಲಿ ನಾಪತ್ತೆಯಾದ ಕಾಲೇಜು ವಿದ್ಯಾರ್ಥಿಗಳ ರಕ್ಷಣೆ

ಕಣಕುಂಬಿ ಅರಣ್ಯದಲ್ಲಿ ಚಾರಣಕ್ಕೆ ತೆರಳಿದ್ದ ವಿದ್ಯಾರ್ಥಿಗಳ ರಕ್ಷಣೆ ಬೆಳಗಾವಿ. ಖಾನಾಪುರ ತಾಲುಕಿನ ಅರಣ್ಯ ಪ್ರದೇಶದಲ್ಲಿ ನಾಪತ್ತೆಯಾಗಿದ್ದ ಬೆಳಗಾವಿಯ ಜಿಎಸ್ಎಸ್ ಕಾಲೇಜಿನ 9 ಜನ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡುವಲ್ಲಿ ಅರಣ್ಯ ಇಲಾಖೆ ಸಿಬ್ವಂದಿ ಯಶಸ್ವಿಯಾಗಿದ್ದಾರೆ. ಆದರೆ ಅಕ್ರಮವಾಗಿ ಅರಣ್ಯ ಪ್ರವೇಶ ಮಾಡಿದ ಕಾರಣದಿಂದ ಈ ವಿದ್ಯಾರ್ಥಿಗಳ ವಿರುದ್ಧ ಗೋವಾ ಮತ್ತು ಕರ್ನಾಟ ಕರ್ನಾಟಕ ಅರಣ್ಯ ಇಲಾಖೆಯವರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಖಾನಾಪುರ: ಕಣಕುಂಬಿ ಅರಣ್ಯದಲ್ಲಿ ಚಾರಣಕ್ಕೆ ತೆರಳಿ ಹಾದಿ ತಪ್ಪಿಸಿಕೊಂಡ ಇವರನ್ನು ಸತತ ೮ ಗಂಟೆಗಳ ಕಾಲ ಕಾರ್ಯಾಚರಣೆ…

Read More

ಬೈಕ್ ಕಳ್ಳನ ಬಂಧನ

ಬೆಳಗಾವಿ.ಇಲ್ಲಿನ ಜಿಲ್ಲಾ ಆಸ್ಪತ್ರೆ ಮುಂದೆ ನಿಲ್ಲಿಸಿದ್ದ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಖತರನಾಕ್ ಕಳ್ಳನನ್ನು ಎಪಿಎಂಸಿ ಪೊಲೀಸರು ಬಂಧಿಸಿದ್ದಾರೆ. ಬೈಲಹೊಂಗಲ ತಾಲೂಕಿನ ಸಿಗೇಹಳ್ಳಿಯ ವಿಠ್ಠಲ ಆರೇರ ಎಂಬುವನೇ ಬಂಧಿತ ಆರೋಪಿ. ಬಂಧಿತ ವ್ಯಕ್ತಿಯಿಂದ ಸುಮಾರು ಮೂರು ಲಕ್ಷ ಮೂವತ್ತೈದು ಸಾವಿರ ರೂ ಮೌಲ್ಯದ13 ವಾಹನಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ ಪೊಲೀಸ್ ಆಯುಕ್ತರು, ಡಿಸಿಪಿ ಇವರ ಮಾರ್ಗದರ್ಶನ ದಲ್ಲಿ ಮಾರ್ಕೆಟ್ ಎಸಿಪಿ ಕಟ್ಟಿಮನಿ ನೇತೃತ್ವದಲ್ಲಿ ಸಿಪಿಐ ವಿಶ್ವನಾಥ ಕಬ್ಬೂರ ಮತ್ತು ಸಿಬ್ಬಂದಿಗಳು ಆರೋಪಿಯನ್ನು ಬಂಧಿಸಿದ್ದಾರೆ

Read More

ಬೆಳಗಾವಿಯಲ್ಲಿ ಗುಂಡಾಗಿರಿ..!

ಬೆಳಗಾವಿಯ ಕೊಲ್ಲಾಪುರ ಕ್ರಾಸ್ ಬಳಿ ನಡೆದ ಘಟನೆ. ನಾಲ್ವರಿಂದ ಹಲ್ಲೆ. ನಡು ರಸ್ತೆಯಲ್ಲಿ ಅಡ್ಡಡ್ಡ ಬೀಳಿಸಿ ಬೂಟುಗಾಲಿನಿಂದ ಒದ್ದು ಹಲ್ಲೆ. ರಕ್ತ ಸೋರಿದರೂ ಬಿಡದ ಹಲ್ಲೆಕೋರರು. ಬೆಳಗಾವಿ. ಕ್ಷುಲ್ಲಕ ಕಾರಣಕ್ಕಾಗಿ ಹೊಟೇಲನಲ್ಲಿ ಕುಳಿತಿದ್ದ ವ್ಯಕ್ತಿಯನ್ಬು ನಾಲ್ವರ ಗುಂಪು ‌ಮನಸೋ ಇಚ್ಛೆ ಥಳಿಸಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ. ನಗರದ ಕೊಲ್ಲಾಪುರ ವೃತ್ತದ ಬಳಿಯಿರುವ ಹೊಟೇಲ್ ನಲ್ಲಿ ಒಬ್ಬರು ಕುಳಿತಿದ್ದರು. ಈ ಸಂದರ್ಭದಲ್ಲಿ ಬಙದ ನಾಲ್ವರು ಅವನನ್ನು ಥಳಿಸಲು ಆರಂಭಿಸಿದರು. ಇದರಿಂದ ಗಲಿಬಿಲಿಗೊಂಡ ಹೊಟೇಲ್ ಸಿಬ್ಬಂದಿ ಗಲಾಟೆ ಮಾಡುವವರನ್ನು…

Read More

ಕನ್ನಡಿಗರಿಗೆ ಜೈಲು ‘ಭಾಗ್ಯ’ ಕರುಣಿಸಿದ ಕಾಂಗ್ರೆಸ್ ಸರ್ಕಾರ..!

ಬೆಂಗಳೂರು. ಕನ್ನಡ ಕನ್ನಡ ಎಂದು ಬೀದಿಗಿಖಿದ ಕನ್ನಡ ಹೋರಾಟಗಾರರನ್ಬು ಜೈಲಿಗಟ್ಟುವ ಕೆಲಸವನ್ನು ರಾಜ್ಯದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾಡಿದೆ. ವಾಣಿಜ್ಯ ಮಳಿಗೆಗಳ ಮುಂದೆ ಕನ್ನಡ ಫಲಕ ಬೇಕು ಎನ್ನುವ ಅಭಿಯಾನ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಆಂಗ್ಲ ಫಲಕವನ್ನು ಕಿತ್ತೊಗೆಯುವ ಕೆಲಸವನ್ನು ಕನ್ನಡ ಕಲಿಗಳು ಮಾಡಿದ್ದರು. ಆ ಹೋರಾಟಕ್ಕೆ ಮುಂದಾಗಿದ್ದ ಕರವೇ ಅಧ್ಯಕ್ಷ ಟಿ.ಎ.‌ನಾರಾಯಣಗೌಡ ಸೇರಿದಂತೆ 6 ಕ್ಕೂ ಹೆಚ್ಚು ಜನ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಪರಪ್ಪನ ಅಗ್ರಹಾರಕ್ಜೆ ಕಳಿಸಿದ್ದಾರೆ. ಕನ್ನಡ ನಾಮಫಲಕವನ್ನು ಕಡ್ಡಾಯವಾಗಿ ಹಾಕುವಂತೆ ಒತ್ತಾಯಿಸಿ…

Read More
error: Content is protected !!