38 ವರ್ಷಗಳ ಸಾರ್ಥಕ ಸೇವೆ..!

ಬೆಳಗಾವಿ. ಸತತ 38 ವರ್ಷಗಳ ಕಾಲ ಯಾವುದೇ ಕಪ್ಪು ಚುಕ್ಕೆಯಿಲ್ಲದೇ ನಿರಂತರ ಸರ್ಕಾರಿ‌ಸೇವೆಯನ್ನು‌ ಸಲ್ಲಿಸಿ ನಗುನಗುತ ನೀವೃತ್ತಿಯಾಗುವುದು‌ ಅಷ್ಟು ಸುಲಭದ ಮಾತಲ್ಲ. ಅಂತಹ ಸಾರ್ಥಕ ಸೇವೆ ಸಲ್ಲಿಸಿ ನಾಳೆ ದಿ. 31 ರಂದು ನಿವೃತ್ತಿಯಾಗುತ್ತಿರುವವರಲ್ಲಿ ಬೂಡಾ ಅಭಿಯಂತ ಎಂ.ವಿ ಹಿರೇಮಠ ಒಬ್ಬರು. ಬೆಳಗಾವಿ ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಖಾನಾಪುರ ಜಿಲ್ಲಾ ಪಂಚಾಯತಿಯಲ್ಲಿ ಇವರು ಸೇವೆ ಸಲ್ಲಿಸಿದ್ದಾರೆ. ಈಗ ಬೆಳಗಾವಿ‌ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಭಿಯಂತರಾಗಿ ಸೇವೆ ಸಲ್ಲಿಸಿ ನಾಳೆ ನಿವೃತ್ತಿ ಹೊಂದಲಿದ್ದಾರೆ. ಹಾಗೇ ನೋಡಿದರೆ ಹಿರೇಮಠರಿಗೆ…

Read More

ಬೀದಿನಾಯಿ ಕಡಿದು ಸಾವು

ಬೆಳಗಾವಿ. ಬೀದಿನಾಯಿಗಳ ಹಾವಳಿಗೆ ಬೆಳಗಾವಿ ಯುವಕನೊಬ್ಬ ಬಲಿಯಾಗಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ ಇಲ್ಲಿನ‌ ವಡಗಾವಿ ತೆಗ್ಗಿನ‌‌ ಗಲ್ಲಿ‌ ನಿವಾಸಿ‌ ಜಗದೀಶ ಚುನಮರಿ‌ ಮೃತ ವ್ಯಕ್ತಿ ಎಂದು ಗೊತ್ತಾಗಿದೆ. ಕಳೆದ ಒಂದುವರೆ ತಿಂಗಳ‌ ಹಿಂದೆಯಷ್ಟೆ ಬೆಂಗಳೂರಿನಲ್ಲಿ ಈತನ‌ ಮೇಲೆ ಬೀದಿನಾಯಿಗಳು ದಾಳಿ ಮಾಡಿದ್ದವು. ಆದರೆ ಕಳೆದ ದಿನ‌ ರಾತ್ರಿ ಆರೋಗ್ಯದಲ್ಲಿ ಏರುಪೇರಾಗಿದೆ. ಹೀಗಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟನು ಎಂದು ಹೇಳಲಾಗಿದೆ.

Read More

ಸಬ್ ರಿಜಿಸ್ಟ್ರಾರ್ ಕಚೇರಿಗೆ ಲೋಕಾಯುಕ್ತ ಭೆಟ್ಟಿ.

ಬೆಳಗಾವಿ. ಇಲ್ಲಿನ‌ ಸಬ್ ರಿಜಿಸ್ಟ್ರಾರ್ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ಹಠಾತ್ ಭೆಟ್ಟಿ ನೀಡಿ ದಾಖಲೆ ಪರಿಶೀಲಿಸಿದರು. ಬೆಳಗಾವಿ ಲೋಕಾಯುಕ್ತ ಎಸ್ಪಿ ಹನುಮಂತರಾಯಪ್ಪ ಅವರು ದಾಖಲೆ ಪರಿಶೀಲನೆ ನಡೆಸಿದರು. ಉಪನೋಂದಣಾಧಿಕಾರಿಗಳಿಗೆ ದಾಖಲಾತಿ ಪರಿಶೀಲನೆ ಮಾಡಿ ನೈಜತೆ ತಿಳಿದುಕೊಳ್ಳುವ ಅಧಿಕಾರ ಇರಲಿಲ್ಲ. ಈಗ ಸರಕಾರ ದಾಖಲಾತಿ ಪರಿಶೀಲನೆ ಮಾಡಿ ಪಕ್ಷಗಾರರ ನೈಜತೆ ತಿಳಿದುಕೊಂಡ ಬಳಿಕವೇ ಆಸ್ತಿಗಳ ಖರೀದಿ, ನೋಂದಣಿ ಪ್ರಕ್ರಿಯೆ ನಡೆಯಲಿದೆ. ಈ ವೇಳೆ ಅಕ್ರಮ ಕಂಡು ಬಂದರೆ ಉಪನೊಂದಣಾಧಿಕಾರಿಗಳೇ ಅಂತವರ ವಿರುದ್ಧ ನೇರವಾಗಿ ಕ್ರಿಮಿನಲ್ ಪ್ರಕರಣ ದಾಖಲಿಸಲಿದ್ದಾರೆ. ….

Read More
error: Content is protected !!