ಬೆಳಗಾವಿ. ಇಲ್ಲಿನ ಸಬ್ ರಿಜಿಸ್ಟ್ರಾರ್ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ಹಠಾತ್ ಭೆಟ್ಟಿ ನೀಡಿ ದಾಖಲೆ ಪರಿಶೀಲಿಸಿದರು.

ಬೆಳಗಾವಿ ಲೋಕಾಯುಕ್ತ ಎಸ್ಪಿ ಹನುಮಂತರಾಯಪ್ಪ ಅವರು ದಾಖಲೆ ಪರಿಶೀಲನೆ ನಡೆಸಿದರು.
ಉಪನೋಂದಣಾಧಿಕಾರಿಗಳಿಗೆ ದಾಖಲಾತಿ ಪರಿಶೀಲನೆ ಮಾಡಿ ನೈಜತೆ ತಿಳಿದುಕೊಳ್ಳುವ ಅಧಿಕಾರ ಇರಲಿಲ್ಲ. ಈಗ ಸರಕಾರ ದಾಖಲಾತಿ ಪರಿಶೀಲನೆ ಮಾಡಿ ಪಕ್ಷಗಾರರ ನೈಜತೆ ತಿಳಿದುಕೊಂಡ ಬಳಿಕವೇ ಆಸ್ತಿಗಳ ಖರೀದಿ, ನೋಂದಣಿ ಪ್ರಕ್ರಿಯೆ ನಡೆಯಲಿದೆ. ಈ ವೇಳೆ ಅಕ್ರಮ ಕಂಡು ಬಂದರೆ ಉಪನೊಂದಣಾಧಿಕಾರಿಗಳೇ ಅಂತವರ ವಿರುದ್ಧ ನೇರವಾಗಿ ಕ್ರಿಮಿನಲ್ ಪ್ರಕರಣ ದಾಖಲಿಸಲಿದ್ದಾರೆ.

. ಈ ಮೊದಲು ಆಸ್ತಿಗಳ ನೋಂದಣಿ ವೇಳೆ ಅನೇಕ ಅಕ್ರಮಗಳು ನಡೆಯುತ್ತಿದ್ದವು. ಯಾರೋ ಯಾರದೋ ಹೆಸರಲ್ಲಿ ನೋಂದಣಿ ಮಾಡುತ್ತಿರುವ ಪ್ರಕರಣಗಳು ಪತ್ತೆಯಾಗಿದ್ದವು. ಈವನಿಟ್ಟಿನಲ್ಲಿ ಕಚೇರಿಗೆ ಭೆಟ್ಟಿ ನೀಡಿದ ಎಸ್ಪಿ ದಾಖಲೆ ಪರಿಶೀಲಿಸಿದರು.