ಇದು ಡಿಸಿಸಿ ADJUSTMENT..!
ಬೆಳಗಾವಿ. ಗಡಿನಾಡ ಬೆಳಗಾವಿ ಜಿಲ್ಲೆ ರಾಜಕಾರಣವೇ ವಿಚಿತ್ರ. ಇಲ್ಲಿ ಯಾರೂ ಶತ್ರುನೂ ಅಲ್ಲ, ಮಿತ್ರನೂ ಅಲ್ಲ. ಅಂದರೆ ಒಂದು ರೀತಿಯ ಹೊಂದಾಣಿಕೆ ರಾಜಕಾರಣ;,! ಹೀಗಾಗಿ ಈ ಜಿಲ್ಲೆಯ ರಾಜಕಾರಣದ ಒಳಸುಳಿವು ಯಾರಿಗೂ ಬೇಗ ಅರ್ಥ ಆಗೋದೇ ಇಲ್ಲ. ಈ ಹಿಂದಿನ ರಾಜಕಾರಣವನ್ನು ಗಮನಿಸಿದರೆ, ಕತ್ತಿ, ಸವದಿ, ಕೋರೆಯವರದ್ದು ಒಂದು ಗುಂಪಾಗಿದ್ದರೆ, ಜಾರಕಿಹೊಳಿ ಸಹೋದರರದ್ದು ಒಂದು ಗುಂಪು. ಆದರೂ ಎರಡೂ ಗುಂಪುಗಳು ಜಿಲ್ಲೆಯ ರಾಜಕಾರಣದಲ್ಲಿ ತಮ್ಮ ಬಲವಾದ ಹಿಡಿತ ಬಿಟ್ಟುಕೊಟ್ಟಿರಲಿಲ್ಲ. ಈ ಹಿಂದೆ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಯಾವಾಗಲೂ…