ಬೆಳಗಾವಿಗೆ ಬರಲಿವೆ ಮತ್ತೆರಡು ಸಂಚಾರಿ ಠಾಣೆಗಳು.
ಸುಗಮ ಸಂಚಾರಕ್ಕೆ ಅಧಿಕಾರಿಗಳ ಹರಸಾಹಸ.
ಫುಟ್ ಪಾತ ಅತಿಕ್ರಮಣ ತೆರವು.
ಸಂಚಾರ ದಟ್ಟಣೆ ಹೋಗಲಾಡಿಸಲು ಕ್ರಮ.
ಬೆಳಗಾವಿ.
ಗಡಿನಾಡ ಬೆಳಗಾವಿಯಲ್ಲಿ ಒಂದು ಮಾತಿದೆ. ಮಾರ್ಕೆಟ್ ಶಾಂತ ಇದ್ದರೆ ಇಡೀ ಊರು ಶಾಂತ ಅಂತ.ಅದೇ ಕಾರಣದಿಂದ ಮಾರ್ಕೆಟ್ ಠಾಣೆಗೆ ಬಹುತೇಕ ಎಲ್ಲ ದೃಷ್ಟಿಯಿಂದ ಸಮರ್ಥರನ್ನೇ ನೇಮಿಸಲಾಗುತ್ತದೆ.
ಅದು ಬೇರೆ ಮಾತು.
ಈಗ ನಾವು ಈಗ ಹೇಳುತ್ತಿರುವುದು ಬೆಳಗಾವಿ ಸಂಚಾರ ವ್ಯವಸ್ಥೆಯ ಬಗ್ಗೆ. ಇಲ್ಲಿ ಸಂಚಾರ ವ್ಯವಸ್ಥೆ ಸರಿಯಾಗಿದ್ದರೆ ಬೆಳಗಾವಿ ಜನ ಪೊಲೀಸ್ ಇಲಾಖೆ ಕಾರ್ಯವನ್ನು ಬಾಯಿತುಂಬ ಹೊಗಳುತ್ತಾರೆ.
ಅದೇ ನಡೆದಾಡಲು ಸಹ ಆಗದ ರೀತಿಯಲ್ಲಿ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸಿದ್ದರೆ ಅಥವಾ ಅಂಗಡಿಕಾರರು ತಮ್ಮ ಬೋರ್ಡಗಳನ್ನು ಫುಟಪಾತ್ ಮೇಲೆ ಇಟ್ಟಿದ್ದರೆ. ಸಾರ್ವಜನಿಕರ ಎಲ್ಲಾಸಿಟ್ಟು ಅಂಗಡಿಕಾರರ ಬದಲು ಸಂಚಾರಿ ಪೊಲೀಸರ ಮೇಲೆ ತಿರುಗುತ್ತದೆ. ಅದು ಸಹಜ ಮತ್ತು ಸ್ವಾಭಾವಿಕ.

ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ , ಸಂಚಾರ ದಟ್ಟನೆ ಕ್ಲೀಯರ್ ಮಾಡಲು ಪೊಲೀಸರು ಬೇಕೆ ಬೇಕು. ಆದರೆ ಅದರಲ್ಲೂ ಬಿಳಿಬಟ್ಟೆ ತೊಟ್ಟ ಸಂಚಾರಿ ಪೊಲೀಸರೇ ಇರಬೇಕು. ಆಗ ಸಂಚಾರ ನಿಯಮ ಉಲ್ಲಂಘಿಸುವವರು ಭಯ ಬೀಳುತ್ತಾರೆ ಎನ್ನುವದರಲ್ಲಿ ಎರಡು ಮಾತಿಲ್ಲ.

ಬೆಳಗಾವಿ ನಗರದಲ್ಲಿ ಈಗ ಸಂಚಾರಿ ದಕ್ಷಿಣ ಮತ್ತು ಉತ್ತರ ಎಂದು ಎರಡು ಪೊಲೀಸ್ ಠಾಣೆಗಳಿವೆ. ಅವರು ಸಂಚಾರ ದಟ್ಟಣೆ ಕ್ಲಿಯರ್ ಮಾಡಲು ದಿನವೀಡಿ ಹರಸಾಹಸ ಮಾಡುತ್ತಿರುತ್ತಾರೆ.

ಬೆಳಗಾವಿ ದಕ್ಷಿಣದಲ್ಲಿ ಸಿಪಿಐ ವಿನಾಯಕ ಬಡಿಗೇರ್ ಮತ್ತು ಉತ್ತರದಲ್ಲಿ ಶ್ರೀಶೈಲ ಗಾಬಿ ಕಾರ್ಯನಿರ್ವಹಿಸುತ್ತಿದ್ದಾರೆ..
ಹುಷಾರು..ಇವರು ನಿಮ್ಮ.ಠಾಣೆಗೂ ಬರ್ತಾರೆ..!

https://ebelagavi.com/index.php/2023/09/03/hi-35/
ಈ ಸಂಚಾರ ವಿಷಯದಲ್ಲಿ ಪೊಲೀಸರು ಎಷ್ಟೇ ಕೆಲಸ ಮಾಡಿದರೂ ಕೆಇಮೆಯೇ. ಒಂದು ಕಡೆಯಿಂದ ಫುಟಪಾತ್ ಅತಿಕ್ರಮಣ ತೆಗೆಸುತ್ತ ಮುಂದೆ ಹೋದರೆ ಮತ್ತೇ ಅಂಗಡಿಕಾರರು ಮತ್ತೆ ಅದೇ ರಾಗ ಅದೇ ಹಾಡು ಎನ್ನುವಂತೆ ಮಾಡುತ್ತಾರೆ.

ಗಮನಿಸಬೇಕಾದ ಸಂಗತಿ ಎಂದರೆ ಸಂಚಾರ ಸಿಪಿಐ ವಿನಾಯಕ ಬಡಿಗೇರ್ ಮತ್ತು ಶ್ರೀಶೈಲ್ ಗಾಬಿ ಅವರು ಫುಟ್ ಪಾತ್ ಅತಿಕ್ರಮಣ ತೆರವು ಮತ್ತು ಪಾರ್ಕಿಂಗ್ ಸುಧಾರಣೆ ನಿಟ್ಟಿನಲ್ಲಿ ಕ್ರಮ ತೆಗೆದುಕೊಂಡಿದ್ದಾರೆ.
ಮತ್ತೆರಡು ಸಂಚಾರಿ ಠಾಣೆ.
ಬೆಳಗಾವಿಗೆ ಮತ್ತೆರಡು ಸಂಚಾರಿ ಠಾಣೆಗಳ ಅವಶ್ಯಕತೆ ಇದೆ ಎನ್ನುವ ಪ್ರಸ್ತಾವನೆಯನ್ನು ಪೊಲೀಸ್ ಆಯುಕ್ತ ಸಿದ್ರಾಮಪ್ಪ ಅವರು ಸರ್ಕಾರಕ್ಕೆ ಕಳಿಸಿದ್ದಾರೆ.
ಈಗ ಉತ್ತರ ದಕ್ಷಿಣ ಠಾಣೆಗಳಿವೆ. ಹೀಗಾಗಿ ಫೂರ್ವ ಮತ್ತು ಪಶ್ಚಿಮಠಾಣೆಗಳ ಅವಶ್ಯಕತೆ ಇದೆ ಎಂದು ಸರ್ಕಾರಕ್ಕೆ ಪ್ರಸ್ತಾವನೆ ಹೋಗಿದೆ.