ನಾನು ಎಂಪಿ ಎಲೆಕ್ಷನ್ ನಿಲ್ಲುವೆ: ಅನಿಲ ಬೆನಕೆ,
ಬಿಜೆಪಿಯಲ್ಲಿ ಕುತಂತ್ರಿಗಳು ಹೆಚ್ಚು,
ನಾನು ಶೆಟ್ಟರ್ ಸಂಪರ್ಕದಲ್ಲಿಲ್ಲ
ಬೆಳಗಾವಿ:
ಲೋಕಸಭಾ ಚುನಾವಣೆ ತಯಾರಿ ಮಾಡಿಕೊಳ್ಳುತ್ತೇವೆ. ಪಕ್ಷದ ನಾಯಕರು ಅವಕಾಶ ನೀಡಿದರೆ ಸ್ಪರ್ಧೆ ಮಾಡುವೆ. ಪಕ್ಷ ಬೇರೆಯವರಿಗೂ ಟಿಕೆಟ್ ನೀಡಿದರೂ ಬೆಂಬಲ ಕೊಟ್ಟು ಗೆಲ್ಲಿಸಲು ಶ್ರಮಿಸಲಾಗುವುದು ಎಂದು ಮಾಜಿ ಶಾಸಕ ಅನಿಲ ಬೆನಕೆ ಅವರು ತಿಳಿಸಿದ್ದಾರೆ.

ಇಂದು ಕನ್ನಡ ಸಾಹಿತ್ಯ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಳೆದ ಚುನಾವಣೆಯಲ್ಲಿ ೧.೩೦ ಲಕ್ಷ ಮತ ಪಡೆದಿರುವ ಕುರಿತು ಪಕ್ಷದಲ್ಲಿ ಚರ್ಚೆ ಆಗಬಹುದು. ವೈಯಕ್ತಿಕವಾಗಿ ನನ್ನ ಹೆಸರು ಹಾಳು ಮಾಡುವ ಉದ್ದೇಶದಿಂದ ಕುತಂತ್ರ ನಡೆದಿರಬಹುದು. ವಿರೋಧ ಪಕ್ಷಕ್ಕಿಂತ ನಮ್ಮ ಪಕ್ಷದಲ್ಲೇ ಕುತಂತ್ರಿಗಳು ಹೆಚ್ಚು ಇರುತ್ತಾರೆ ಎಂದು ಅಸಮಾಧಾನ ಹೊರ ಹಾಕಿದರು.
IPS ವರ್ಗಾವಣೆ..

https://ebelagavi.com/index.php/2023/09/04/hi-40/
ಅನಿಲ ಬೆನಕೆ ಕಾಂಗ್ರೆಸ್ ಸೇರ್ಪಡೆಯಾಗುವುದಾಗಿ ಮತ್ತು ಶೆಟ್ಟರ ಸಂಪರ್ಕದಲ್ಲಿದ್ದಾರೆ ಎಂದು ವದಂತಿ ಇದೆ.
ಕಳೆದ ಇಪ್ಪತ್ತೈದು ವರ್ಷದಿಂದ ಬಿಜೆಪಿ ಕಾರ್ಯಕರ್ತನಾಗಿ ಕೆಲಸ ಮಾಡಿರುವೆ.
ಮೂರನೇ ಬಾರಿ ಟಿಕೆಟ್ ಕೇಳಿದಾಗ ಪಕ್ಷ ಅವಕಾಶ ಕಲ್ಪಿಸಿದೆ. ಯಾವುದೇ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಮುಖಂಡರ ಸಂಪರ್ಕದಲ್ಲಿಲ್ಲ. ಕಳೆದ ಆರು ತಿಂಗಳದಿಂದ ಶೆಟ್ಟರ್ ಜತೆಗೆ ಸಂಪರ್ಕದಲ್ಲಿಲ್ಲ.ಟಿಕೆಟ್ ನೀಡಿಲ್ಲ ಎಂದು ಪಕ್ಷ ಸಂಘಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ತಿಳಿಸಿದ್ದಾರೆ.