ಬೆಳಗಾವಿ. ರಾಜ್ಯದಲ್ಲಿ ಈಗಮತ್ತೇ 2 ಎ ಮೀಸಲಾತಿಗೆ ಪಂಚಮಸಾಲಿ ಹೋರಾಟ ಮುನ್ನಲೆಗೆ ಬರ್ತಿದೆ.
ಆದರೆ ಈ ಹಿಂದೆ ಹೋರಾಟದ ಮುಂಚೂಣಿಯಲ್ಲಿದ್ದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಗೈರು ಹಾಜರಿ ವಿಭಿನ್ನ ಚರ್ಚೆಗೆ ಕಾಣವಾಗಿತ್ತು.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಂಗಳೂರಿನಲ್ಲಿ ಕೊನೆಗೊಂಡ ಈ ಮೀಸಲಾತಿ ಹೋರಾಟ ಕಳೆದ ದಿನ ನಿಪ್ಪಾಣಿಯಲ್ಲಿ ಇಷ್ಟಲಿಂಗ ಪೂಜೆ ಮೂಲಕ ಆರಂಭಗೊಂಡಿತು.
ಈ ಸಂದರ್ಭದಲ್ಲಿ ಇವರಿಬ್ಬರ ಗೈರು ಎದ್ದು ಕಂಡಿತು. ಹಿಂದಿನ ಹೋರಾಟ ದಲ್ಲಿ ವೀರಾವೇಶದ ಮಾತುಗಳ ಮೂಲಕ ಇಡೀ ರಾಜ್ಯದ ಪಂಚಮಸಾಲಿಗಳು ಬಿಜೆಪಿ ವಿರುದ್ಧ ಮುನಿಸಿಕೊಳ್ಳುವಂತಾಗಿತ್ತು. ಹೀಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಇದೂ ಕೂಡ ಒಂದು ಕಾರಣ ಎನ್ನಬಹುದು.

ಆದರೆ ಈಗ ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಹೋರಾಟ ಮತ್ತೇ ಕಾವೇರತೊಡಗಿದೆ. ಇದೇ ವಿಷಯವನ್ಬು ಮತ್ತೇ ಕಾಂಗ್ರೆಸ್ ಅಸ್ತ್ರ ಮಾಡಿಕೊಳ್ಳಬಹುದು ಎನ್ನುವ ಮಾತುಗಳಿವೆ.
ಬೆಂಗಳೂರಿನಲ್ಲಿ ಕೊನೆ ಹಂತದ ಸಮಾವೇಶ ನಡೆದ ಸಂದರ್ಭದಲ್ಲಿ ಸ್ವಾಮಿಜಿಯವರು ಹೋರಾಟವನ್ನು ಅಂತ್ಯಗೊಳಿಸಿ ಮುಂದಕ್ಕೆ ಹಾಕಿದ್ದರು. ಆಗ ಕಾಶಪ್ಪನವರ ಸಿಡಿಮುಡಿಗೊಂಡು ಹೋರಾಟದ ನಾಯಕತ್ವಕ್ಜೆ ರಾಜೀನಾಮೆ ನೀಡಿದ್ದರು.ಯತ್ನಾಳರು ಕಾಶಪ್ಪನವರ ವಿರುದ್ಧ ಮುನಿಸಿಕೊಂಡಿದ್ದರು. ಹೀಗಾಗಿ ಅದೇ ಕಾರಣದಿಂದ ನಿಪ್ಪಾಣಿಗೆ ಈ ಇಬ್ಬರೂ ನಾಯಕರು ಬರಲಿಲ್ಲ ಎಂದು ಗೊತ್ತಾಗಿದೆ.