Headlines

ಪ್ರದೀಪ ಶೆಟ್ಟಿ ಇನ್ನು ನೆನಪು ಮಾತ್ರ..!

ಬೆಳಗಾವಿ.‌

ಅಕ್ಕಾರೀ, ವೈನೀರಿ, ಅಣ್ಣಾರ….ಎಂದು ಕೂಗಿ ಕರೆಯುವ ಧ್ವನಿ ಈಗ ಇಲ್ಲದಾಗಿದೆ.

ಆ ಧ್ವನಿ ಮತ್ಯಾರದ್ದೂ ಅಲ್ಲ .‌

ಅದು ಪ್ರದೀಪ ಶೆಟ್ಟಿ ಅವರದ್ದು.!

ಪಕ್ಕಾ ನಿಷ್ಠಾವಂತ ಬಿಜೆಪಿ ಕಾರ್ಯಕರ್ತ ಮತ್ತು‌ ಅದರಲ್ಲೂ ವಿಶೇಷವಾಗಿ ಶಾಸಕ ಅಭಯ ಪಾಟೀಲರ ಕುಟುಂಬ‌ ಸದಸ್ಯರಲ್ಲಿ ಒಬ್ಬರು ಎಂದು ಗುರುತಿಸಿಕೊಂಡವರಲ್ಲಿ ಪ್ರದೀಪ ಶೆಟ್ಡಿ ಒಬ್ಬರು. ಬೆಳಗಾವಿಯ ಅಭಯ ಪಾಟೀಲರ ಕಚೇರಿಗೆ ಹೋದರೆ ಪ್ರದೀಪಣ್ಣಾ ಎಂದು ಪ್ರೀತಿಯಿಂದ ಕರೆಯಿಸಿಕೊಳ್ಳುವ ಅವರು‌ ಬಹಳ‌ ಅವಸರ ಮಾಡಿ ಬಿಟ್ಟು ವಾಪಸ್ಸು ಬರಲಾರದ ಜಾಗಕ್ಕೆ ಹೋಗಿ ಬಿಟ್ಟಿದ್ದಾರೆ.

ನಿಜವಾಗಿ ಈಗಲೂ ಕೂಡ ಪ್ರದೀಪ ಶೆಟ್ಟಿ ‘ಇಲ್ಲ’ ಅಂತ ಯಾರಾದರೂ ಹೇಳಿದರೆ ನಂಬಲು ಆಗುವುದೇ ಇಲ್ಲ. ಆದರೆ ವಿಧಿಯಾಟ ಬೇರೆನೇ ಆಗಿತ್ತು.ಅದರ ಮುಂದೆ ಯಾರ ಆಟವೂ ನಡೆಯಲ್ಲ.

ಸದಾ ದಿನದ 24 ತಾಸುಗಳ ಕಾಲ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರ ಜೊತೆಗಿದ್ದು ಕುಟುಂಬದ ಸದಸ್ಯರಲ್ಲಿ ಒಬ್ವರಾಗಿದ್ದವರು.

ಯಾವಾಗಲಾದರೂ ಅಭಯ ಪಾಟೀಲರಿಗೆ ದೂರವಾಣಿ ಕರೆ ಮಾಡಿದಾಗ ಮೊದಲು ಅದನ್ನು ರಿಸೀವ್ ಮಾಡುವುದೇ ಪ್ರದೀಪ ಶೆಟ್ಟಿ.

ಆಗ ಮೊದಲು ಬರುವ ಮಾತು ಹೇಳ್ರಿ ಅಣ್ಣಾ..ಸಾಹೇಬ್ರು ಮಿಟಿಂಗದಾಗ ಅದಾರು..ಭಾಷಣ ಮಾಡತಾರು. ಅರ್ಜಂಟ್ ಇದ್ದರೆ ಕೊಡ್ತೆನಿ..ಎನ್ನುವ ಮಾತನ್ನು ಹೇಳುತ್ತಿದ್ದರು.‌ ಈಗ ಅಂತಹ ಪ್ರೀತಿಯ ಮಾತುಗಳಯ ಕಿವಿಗಪ್ಪಳಿಸಲ್ಲ.

ನಿಷ್ಠಾವಂತ,…!

ಪ್ರದೀಪ‌ ಶೆಟ್ಟಿ ಬಿಜೆಪಿಯ‌ ನಿಷ್ಠಾವಂತ ಎನ್ನುವ ಮಾತಿಲ್ಲ. ಅದರಲ್ಲೂ ಅಭಯ ಪಾಟೀಲರನ್ನು ಅತೀಯಾಗಿ ಹಚ್ವಿಕೊಂಡಿದ್ದ.

ಅಭಯ ಪಾಟೀಲ ಕಾರು ಎಲ್ಲೆ ಹೋದರೂ ಪ್ರದೀಪ ಶೆಟ್ಟಿ ಇರಲೇಬೇಕು. ಹೀಗಾಗಿ ಪ್ರದೀಪನನ್ನು ಅಭಯ ಪರಿವಾರ ಬಹಳ ಹಚ್ವಿಕೊಂಡಿತ್ತು.

ಇಲ್ಲಿ ಮುಖ್ಯವಾಗಿ ಹೇಳಲೇಬೇಕೆಂದರೆ, ಪ್ರದೀಪ ಶೆಟ್ಟಿ ಕಳೆದ ಒಂದು ವಾರದಿಂದ‌ ಅನಾರೋಗ್ಯಕ್ಕೆ ಒಳಗಾಗಿದ್ದನು. ಮತ್ತೊಂದು ಕಡೆಗೆ ಅಭಯ ಪಾಟೀಲ ಪಕ್ಷದ ಸೂಚನೆಯಂತೆ ಛತ್ತೀಸಗಡಕ್ಕೆ ಹೋಗಿದ್ದರು.

ಆದರೆ ಅಭಯ ಪಾಟೀಲರ ಸಹೋದರರಾದ ಭರತ ಮತ್ತು ಸಂತೋಷ‌ ಅಷ್ಟೇ ಅಲ್ಲ ಇಡೀ ಬಿಜೆಪಿ ಪರಿವಾರ ಪ್ರದೀಪನ‌ ಚಿಕಿತ್ಸೆಯ ಬಗ್ಗೆ ಕಾಳಜಿ ವಹಿಸಿತ್ತು. ಕಳೆಚ ನಾಲ್ಕು ದಿನಗಳ ಹಿಂದೆ ಆರೋಗ್ಯದಲ್ಲಿ‌ ಹೆಚ್ಚುಕಡಿಮೆ‌ ಆದ ಸುದ್ದಿ ತಿಳಿದ ತಕ್ಷಣ ಅಭಯ ಪಾಟೀಲರ ಸಹೋದರರು ಆಸ್ಪತ್ರೆಗೆ ದಾಖಲಿಸುವುದು ಎಲ್ಲವನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ಅಷ್ಟೇ‌ ಅಲ್ಲ‌ ಸಂಬಂಧಿಸಿದ ವೈದ್ಯರಿಗೆ, ಯಾವುದೇ ಪರಿಣಿತ ವೈದ್ಯರನ್ನು ಕರೆಯಿಸಿ ಚಿಕಿತ್ಸೆ ಕೊಡಿಸಿ. ಎಲ್ಲದಕ್ಕೂ ನಾವಿದ್ದೇವೆ ಎಂದು ಹೇಳಿದ್ದು ಆ ಕುಟುಂಬದವರ ಮಾತು ಅವರ ದೊಡ್ಡತನಕ್ಕೆ ಸಾಕ್ಷಿಯಾಗಿತ್ತು.

ಇಲ್ಲಿ‌ ಅಂದರೆ ಬಿಜೆಪಿಯಲ್ಲಿ‌ ನಿಷ್ಟಾವಂತ ಕಾರ್ಯಕರ್ತರು ಸಂಕಷ್ಟದಲ್ಲಿದ್ದಾರೆ ಎಂದಾಗ ಇಡೀ ಪರಿವಾರ ಸಹಾಯಕ್ಕೆ ಬರುತ್ತದೆ ಎನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ.

ಅಭಯ ಕಣ್ಣೀರು..!

ಪ್ರದೀಪ ಶೆಟ್ಟಿ ನಿಧನದಿಂದ ಬಿಜೆಪಿ ಒಬ್ಬ ನಿಷ್ಠಾವಂತ ಕಾರ್ಯಕರ್ತನನ್ನು ಕಳೆದುಕೊಂಡಿದೆ. ದೇವರು ಅವರ ಕುಟುಂಬಕ್ಕೆ ಆದ ನೋವು ತಡೆದುಕೊಳ್ಳುವ ಶಕ್ತಿ ದಯಪಾಲಿಸಲಿ.

ಅಭಯ ಪಾಟೀಲ. ಶಾಸಕರು. ಬೆಳಗಾವಿ ದಕ್ಷಿಣ

Leave a Reply

Your email address will not be published. Required fields are marked *

error: Content is protected !!