ಪಿಕೆಗಳ ಕಣ್ಣೀರ ಕಥೆ ಕೇಳೊರ್ಯಾರು?


ಬೆೆಳಗಾವಿ.
ಸಧ್ಯದ ಪರಿಸ್ಥಿತಿಯಲ್ಲಿ ಬೆಳಗಾವಿ ಪಾಲಿಕೆಯಲ್ಲಿ 138 ಎನ್ನುವ ಶಬ್ದ ಕೇಳಿದಾಕ್ಷಣ ಕೆಲವರಿಗೆ ಒಂದು ರೀತಿಯ ಭಯ ಶುರುವಾಗಿದೆ,
ಈ 138 ರ ಹಿಂದಿನ ಕಥೆಯನ್ನು ಕೇಳಿದರೆ ಅಯ್ಯೋ ಅನಿಸದೇ ಇರದು, ಅಂದ ಹಾಗೆ ಇಷ್ಟು ಸಂಖ್ಯೆಯಲ್ಲಿ ಮಹಾನಗರ ಪಾಲಿಕೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಪೌರ ಕಾರ್ಮಿಕರ ಗೋಳು ಕೇಳಿದರೆ ಕರುಳು ಚುರ್ ಎನ್ನುತ್ತದೆ,


ಕಳೆದ ಸುಮಾರು ಎರಡು ತಿಂಗಳಿಂದ ಅವರು ನಿತ್ಯ ಕೆಲಸ ನಿರ್ವಹಿಸಿದರೂ ಕೂಡ ಅವರು ಸಂಬಳಕ್ಕಾಗಿ ಪರದಾಟ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ,
ಇಲ್ಲಿ 138 ಜನ ಪಿಕೆಗಳ ನೇಮಕಾತಿಯಲ್ಲಿಯೇ ಒಂದಿಷ್ಟು ಗೊಂದಲಗಳು ಮೂಡಿದ್ದು ಇದಕ್ಕೆಲ್ಲ ಕಾರಣ ಎನ್ನಲಾಗುತ್ತಿದೆ,

ಅವರಿಗೆ ಪಾಲಿಕೆಯ ನೇಮಕಾತಿ ಆದೇಶ ಕೊಡುವ ಮುನ್ನವೇ ಅವರನ್ನು ಯಾವ ಆಧಾರದ ಮೇಲೆ ಕೆಲಸಕ್ಕೆ ತೆಗೆದು ಕೊಳ್ಳಲಾಯಿತು ಎನ್ನುವ ಬಹುದೊಡ್ಡ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.

ಹೀಗಾಗಿ ಈಗ ಅವರಿಗೆ ಸಂಬಳ ಕೊಟ್ಟರೆ ಆಯುಕ್ತರು ಅಡಕತ್ತರಿಯಲ್ಲಿ ಸಿಗುವ ಸಾಧ್ಯತೆಗಳಿವೆ, ಈ ಕಾರಣದಿಂದ ಆಯುಕ್ತರು 138 ಪಿಕೆಗಳ ಸಂಬಳದ ಕಡತಕ್ಕೆ ಸಹಿ ಮಾಡದೇ ವಾಪಸ್ಸು ಕಳಿಸಿದ್ದಾರೆಂದು ಗೊತ್ತಾಗಿದೆ.,

ಪ್ರದೀಪ ಶೆಟ್ಟಿ ನೆನಪು ಮಾತ್ರ

https://ebelagavi.com/index.php/2023/09/15/m/

ಸಧ್ಯ ಬಂದಿರುವ ಮಾಹಿತಿ ಪ್ರಕಾರ ಹಣಕಾಸಿನ ವಿಷಯವಾಗಿದ್ದರಿಂದ ಅದರ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದರು ಅಚ್ಚರಿ ಪಡಬೇಕಿಲ್ಲ.

ಈ ವಿಷಯದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರ ವಿರುದ್ಧ ಶಿಸ್ತು ಕ್ರಮಕ್ಕೆ ಸರ್ಕಾರಕ್ಕೆ ಪತ್ರ ಬರೆಯುವ ಸಾಧ್ಯತೆಗಳು ಹೆಚ್ಚಾಗಿ ಕಾಣಸಿಗುತ್ತಿವೆ,

ಸಭೆಯಲ್ಲಿ ಚರ್ಚೆ ಸಂಭವ…
ಸಧ್ಯ ಬಂದ ಮಾಹಿತಿ ಪ್ರಕಾರ ಪರಿಷತ್ನಲ್ಲಿ 138 ಪೌರ ಕಾರ್ಮಿಕರ ಸಂಬಳ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಆದರೆ ಅಧ್ಯಕ್ಷರ ಅಪ್ಪಣೆ ಮೇರೆಗೆ ಯಾರಾದರೂ ವಿಷಯ ಪ್ರಸ್ತಾಪಿಸಿದರೆ ಮಾತ್ರ ಕಾವೇರಿದ ಚರ್ಚೆ ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ,

Leave a Reply

Your email address will not be published. Required fields are marked *

error: Content is protected !!