PID ದಂಧೆ, ಭೂ ಮಾಫಿಯಾ ವಿರುದ್ಧ ಸಿಡಿದೆದ್ದ ಪಾಲಿಕೆ.
ಲೋಕಾಯುಕ್ತ, ನಗರಾಭಿವೃದ್ಧಿ ಇಲಾಖೆಗೆ ವಿಚಾರಣೆಗೆ ಪತ್ರ.
138 ಪೌರಕಾರ್ಮಿಕರ ಬಗ್ಗೆ ಮೌನ ತಾಳಿದ ಪಾಲಿಕೆ. ಚರ್ಚೆಗೆ ನಾಳೆ ಬಾ.
ಬೆಳಗಾವಿ .
ಮಾತನಾಡಲು ನಿಂತರೆ ಅಧಿಕಾರಿಗಳು ಉತ್ತರಿಸಲು ತಡವರಿಸಬೇಕು.ಅಂದರೆ ಅಷ್ಟರ ಮಟ್ಟಿಗೆ ಕೇಳುವ ಪ್ರಶ್ನೆಗಳ ಬಗ್ಗೆ ಅಧ್ಯಯನ ಮಾಡಬೇಕು.
ಆದರೆ ಅದೆಲ್ಲವನ್ನು ಮಾಡದೇ ನಾನು ಯಾರನ್ನೊ ಟಾರ್ಗೆಟ್ ಮಾಡುವ ಸಲುವಾಗಿ ಮಾತನಾಡುತ್ತೇನೆ ಎಂದು ಹೊರಟರೆ ಏನಾಗಬಹುದು . ಅದು ಎಲ್ಲರಿಗೂ ಗೊತ್ತಿದ್ದೇ.
ಅದಕ್ಕೆ ಉತ್ತಮ ಉದಾಹರಣೆ ಇವತ್ತಿನ ಪಾಲಿಕೆ ಸಾಮಾನ್ಯ ಸಭೆ. ಆ ರೀತಿ ಮಾತನಾಡಲು ಹೋದವರ ಸ್ಥಿತಿ ಏನಾಯಿತು ಎನ್ನುವುದಕ್ಕೆ ಪಾಲಿಕೆ ಸಭೆಯೇ ಸಾಕ್ಷಿ.

ಇಲ್ಲಿ ಅಂತಹ ಸಣ್ಣ ವಿಷಯದ ಬಗ್ಗೆ ಪ್ರಸ್ತಾಪ ಮಾಡುವುದರ ಬದಲು ನಗರ ಸೇವಕರೊಬ್ಬರು ಯಾವುದೇ ಮುಲಾಜಿಲ್ಲದೇ ಭೂ ಮಾಫಿಯಾ, PID ದಂಧೆಯ ಬಗ್ಗೆ ಮಾತನಾಡಿದ್ದನ್ನು ಮೆಚ್ಚಲೇಬೇಕು. ಅದು ಅವರ ಜಾಣತನ ಎನ್ನಬಹುದು

ಮಹಾನಗರ ಪಾಲಿಕೆಯಲ್ಲಿ ಕಾನೂನು ಬದ್ಧವಾಗಿ ಮಾತನಾಡಿ ಅಧಿಕಾರಿಗಳನ್ನು ಇಕ್ಕಟ್ಡಿಗೆ ಸಿಲುಕಿಸುವಷ್ಡು ಪ್ರಜ್ಞಾವಂತರು ಬಹಳಷ್ಡು ಜನ ಇದ್ದಾರೆ. ಅದಕ್ಕೆ ಉತ್ತಮ ಉದಾಹರಣೆ ಅಂದರೆ ನಗರಸೇವಕ ಹನುಮಂತ ಕೊಂಗಾಲಿ.!

ಸ್ವತಃ ವಕೀಲರಾಗಿರುವ ಅವರು ಪ್ರತಿಯೊಂದನ್ಬು ಅಳೆದು ತೂಗಿ ಮಾತನಾಡುತ್ತಾರೆ. ಇವತ್ತು ಬೆಳಗಾವಿ ಪಾಲಿಕೆಯಲ್ಲಿ ನಡೆಯುತ್ತಿರುವ PID ದಂಧೆ ಮತ್ತು ಭೂ ಮಾಫಿಯಾ ಬಗ್ಗೆ ಬಸವನ ಕುಡಚಿಯ ದಾಖಲೆಗಳನ್ಬು ಮುಂದಿಟ್ಟುಕೊಂಡು ಚರ್ಚೆ ನಡೆಸಿದರು. ಗಮನಿಸಬೇಕಾದ ಸಂಗತಿ ಎಂದರೆ, ಅವರು ಯಾರನ್ನೂ ಟಾರ್ಗೆಟ್ ಮಾಡಿ ಮಾತನಾಡಲಿಲ್ಲ. ವಾಸ್ತವತೆಯನ್ಬು ಬಿಚ್ವಿಡುತ್ತ ಮಾತನಾಡಲಿಲ್ಲ. ಹೀಗಾಗಿ ಇಡೀ ಸದನ ಅವರ ಮಾತಿಗೆ ಧ್ವನಿಗೂಡಿಸಿತು.
ಕೊನೆಗೆ ಆಯುಕ್ತ ಅಶೋಕ ದುಡಗುಂಟಿ ಅವರು ಕೊಂಗಾಲಿ ಅವರ ಹೆಸರು ಮತ್ತು ಪ್ರಸ್ತಾಪಿಸಿದ ವಿಷಯವನ್ಬು ಉಲ್ಲೇಖಿಸಿ ಲೋಕಾಯುಕ್ತರು ಮತ್ತು ನಗರಾಭಿವೃದ್ಧಿ ಇಲಾಖೆಗೆ ತನಿಖೆಗೆ ಪತ್ರ ಬರೆಯುವುದಾಗಿ ಘೋಷಿಸಿದರು.
ಇಲ್ಲಿ ಆಯುಕ್ತರು ಇದೇ ವಿಷಯಕ್ಕೆ ಸಂಬಂಧಿಸಿದಂತೆ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ವಾಣಿ ಜೋಶಿ ಅವರು ನೀಡಿದ ಪತ್ರದ ಉಲ್ಲೇಖವನ್ನೂ ಸಭೆಯಲ್ಲಿ ಪ್ರಸ್ತಾಪ ಮಾಡಿದರು.
ವಿರೋಧ ಪಕ್ಷದ ಸದಸ್ಯ ಕಿಲ್ಲೇದಾರ, ಮುಜಮಿಲ್ ಡೋಣಿ,. ಶಾಸಕ ರಾಜು ಶೇಠ ಅವರು ಈ ಚರ್ಚೆಯಲ್ಲಿ ಭಾಗವಹಿಸಿದ್ದರು.
ಆಡಳಿತ ಪಕ್ಷದ ನಾಯಕ ರಾಜಶೇಖರ ಡೋಣಿ, ಗುರೀಶ ಧೋಂಗಡಿ, ಸಂತೋಷ ಪೇಡ್ನೆಕರ, ನಿತಿನ ಜಾಧವ ಮುಙತಾದವರು ಚರ್ಚೆಯಲ್ಲಿ ಭಾಗವಹಿಸಿದ್ದರು
ಯಾರು ವಿರೋಧ, ಯಾರು ಆಡಳಿತ?

ಮಹಾನಗರ ಪಾಲಿಕೆಯ ಒಟ್ಟಾರೆ ಸಭೆ ನಡೆದ ರೀತಿಯನ್ನು ಗಮನಿಸಿದರೆ ಯಾರು ಆಡಳಿತ ಪಕ್ಷ, ಯಾರು ವಿರೋಧ ಪಕ್ಷ ಎನ್ನುವ ಗೊಂದಲ ಮೂಡಿತ್ತು
ಆಡಳಿತ ಬಿಜೆಪಿಯ ಕೆಲ ಸದಸ್ಯರು ಅಧಿಕಾರಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದರು. ವಿರೋಧ ಪಕ್ಷದವರು ಅಧಿಜಾರಿಗಳ ಪರ ನಿಂತಿದ್ದು ಕಂಡು ಬಂದಿತು.
ಇನ್ನೂ ಅಚ್ಚರಿ ಸಂಗತಿ ಅಂದರೆ, ಮೇಯರ್ ಸ್ಥಾನದಲ್ಲಿ ಕುಳಿತವರಿಗೆ ಯಾವ ರೀತಿ ಗೌರವ ಕೊಡಬೇಕು ಎನ್ನುವ ಬುದ್ದಿ ಮಾತನ್ನು ವಿರೋಧ ಪಕ್ಷದವರಿಂದ ಹೇಳಿಸಿ ಕೊಳ್ಳಬೇಕಾದ ಸ್ಥಿತಿ ಆಡಳಿತ ಪಕ್ಷದ ಸದಸ್ಯರಿಗೆ ಬಂದೊದಗಿದ್ದು ರ್ದೈವದ ಸಂಗತಿ.
ಪಿಕೆಗಳ ಕಣ್ಣೀರ ಕಥೆ

https://ebelagavi.com/index.php/2023/09/15/vk/