‘ಇ ಬೆಳಗಾವಿ’ ಡಾಟ್ ಕಾಮ್ ಗೆ ನಿರೀಕ್ಷೆಗೂ ಮೀರಿದ ವೀಕ್ಷಕರು.
ಕೇವಲ 15 ದಿನದಲ್ಲಿ 23 ಸಾವಿರ ದಾಟಿದ ವೀಕ್ಷಕರು.
ಬೆದರಿಕೆಗಳಿಗೆ ಬಗ್ಗಲ್ಲ, ಜಗ್ಗಲ್ಲ. ಇದ್ದದ್ದು ಇದ್ಹಂಗ ಹೇಳೋದು ಬಿಡಲ್ಲ.
ಬೆಳಗಾವಿ.
ಕಳೆದ ಕೇವಲ 15 ರಿಂದ 20 ದಿನಗಳ ಹಿಂದೆ “ಇ ಬೆಳಗಾವಿ” ಡಾಟ್ ಕಾಮ್ ನ್ನು ನಿಮ್ಮ ಮಡಿಲಿಗೆ ಹಾಕಿದ್ದೇವು.
ಆದರೆ ನಮ್ಮನಿರೀಕ್ಷೆಗೂ ಮೀರಿ ತಾವು ಅದನ್ನು ಬೆಳೆಸಿದ್ದೀರಿ. ಇ ಬೆಳಗಾವಿ ಡಾಟ್ ಕಾಮ್ ಸುದ್ದಿ ವಿಷಯದಲ್ಲಿ ರಾಜೀ ಮಾಡಿಕೊಂಡಿಲ್ಲ.
ಎಲ್ಲವನ್ನು ಇದ್ದದ್ದು ಇದ್ಹಂಗ್ ಎನ್ನುವ ಹಾಗೆ ಸುದ್ದಿಯೊಳಗಿನ ಸುದ್ದಿ ಮನೆಯ ಬಾಗಿಲನ್ನು ಮುಕ್ತವಾಗಿ ತೆರೆದಿಡುವ ಕೆಲಸವನ್ಬು ಮಾಡಿದ್ದೇವೆ.


ಇದೇ ಕಾರಣದಿಂದ ಇ ಬೆಳಗಾವಿ ವೀಕ್ಷಕರ ಸಂಖ್ಯೆ ಕೇವಲ 15 ದಿನದಲ್ಲಿ 23 ಸಾವಿರ ಗಡಿ ದಾಟಿದೆ ಎಂದು ತಿಳಿಸಲು ನಮಗೆ ಹೆಮ್ಮೆ ಎನಿಸುತ್ತದೆ.

ಇಲ್ಲಿ ಹೇಳಲೇಬೇಕಾದ ಮುಖ್ಯ ಸಂಗತಿ ಎಂದರೆ, ಇಲ್ಲಿ ಪ್ರಕಟಗೊಂಡ ಸುದ್ದಿಯನ್ನು ಅರಗಿಸಿಕೊಳ್ಳದ ಕೆಲವರು ಬೇರೆ ಬೇರೆ ದೂರವಾಣಿಯಿಂದ ಬೆದರಿಕೆ ಹಾಕುವ ಕೆಲಸವನ್ನೂ ಮಾಡಿದರು. ಅಚ್ಚರಿ ಎಂದರೆ, ತಮ್ಮ ಅಸಲಿ ಹೆಸರು ಹೇಳಿ ಮಾತನಾಡಬೇಕಾದವರು ನಕಲಿ ಹೆಸರು ಹೇಳಿ ಬೆದರಿಸುವ ಕೆಲಸ ಮಾಡಿದರು. ಆದರೆ ಇ ಬೆಳಗಾವಿ ಅಂತಹ ಬೆದರಿಕೆಗಳಿಗೆ ಬಗ್ಗಲಿಲ್ಲ ಮುಂದಿನ ದಿನಗಳಲ್ಲಿ ಅಂತಹವರ ಜಾತಕವನ್ನು ತೆರೆದಿಡುವ ಕೆಲಸ ಮಾಡಲಾಗುವುದು

ಅದೇ ಕಾರಣದಿಂದ ಇ ಬೆಳಗಾವಿ ಅತ್ಯಂತ ಕಡಿಮೆ ಅವಧಿಯಲ್ಲಿ ನಿರೀಕ್ಷೆ ಮೀರಿ ಓದುಗರನ್ನು ಹೊಂದಲು ಕಾರಣವಾಯಿತು ಎನ್ನುವುದು ವಾಸ್ತವ.

ಇಲ್ಲಿ ಗಮನಿಸಬೇಕಾದ ಮುಖ್ಯ ಸಂಗತಿ ಎಂದರೆ, ನಾವು ಇಲ್ಲಿ ಏನೇ ಪ್ರಕಟಿಸಿದರೂ ಅದಕ್ಕೆ ಪಕ್ಕಾ ದಾಖಲೆಗಳಿರುತ್ತವೆ ಎಂದರ್ಥ. ಬರೀ ಅಂತೆ ಕಂತೆಗಳ ಮೇಲೆ ಕಾಗೆ ಹಾರಿಸಿದಂತೆ ಸುದ್ದಿ ಪ್ರಕಟಿಸುವ ಜಾಯಮಾನ ನಮ್ಮಲ್ಲಿಲ್ಲ..

ಬೆದರಿಕೆ ತಂತ್ರಗಳು ಪತ್ರಿಕಾ ರಂಗದಲ್ಲಿ ಹೊಸದೇನಲ್ಲ.ಹೀಗಾಗಿ ಆ ರೀತಿ ಬೆದರಿಕೆ ಹಾಕಿ ಸತ್ಯವನ್ನು ಮುಚ್ವಿಡಬಹುದು ಎಂದು ಯಾರಾದರೂ ಭಾವಿಸಿದ್ದರೆ ಅದು ಅವರ ಭ್ರಮೆ ಅಷ್ಟೇ.!


.
.