ಬೆಳಗಾವಿ.
ಗಡಿನಾಡ ಬೆಳಗಾವಿಯಲ್ಲಿ ಗಣೇಶನ ಸಂಭ್ರಮ ನೋಡಲು ಎರಡು ಕಣ್ಣು ಸಾಲದು. ಹೀಗಾಗಿ ಇಲ್ಲಿನ ಗಣಪನನ್ನು ನೋಡಲು ಪರ ರಾಜ್ಯದ ಜನರ ಬರುತ್ತಾರೆ.

ಈಗ ನಿಮ್ಮE Belagavi. ವೆಬ್ ನಿಮ್ಮ ಗಣೇಶನ ಸಂಭ್ರಮವನ್ನು ದಾಖಲಿಸಲು ಯೋಜನೆ ರೂಪಿಸಿತ್ತು.ಅದಕ್ಕೆ ಸಿಕ್ಕ ಸ್ಪಂದನೆ ಅಪಾರ.


ಅದರಲ್ಲಿ ಈಗ ಆಯ್ದ ಕೆಲವನ್ನು ಇಲ್ಲಿ ಪ್ರಕಟಿಸಲಾಗುತ್ತುದೆ. ಗಮನಿಸಬೇಕಾದ ಸಂಗತಿ ಅಂದರೆ ಗ್ರಾಮೀಣ ಪ್ರದೇಶದುಂದಲೂ ಕೂಡ ಕೆಲವರು ಗಣೇಶನೊಂದಿಗೆ ಸೆಲ್ಫಿ ತೆಗೆಸಿಕೊಂಡು ಕಳಿಸಿದ್ದಾರೆ.

.

ಪರಿವಾರದೊಂದಿಗೆ ಅಭಯ..!

ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಕೆಲವೊಂದು ವಿಷಯದಲ್ಲಿ ನಿಷ್ಠುರವಾದಿ.
ಪಕ್ಷ ಸಂಘಟನೆ ಬಂದಾಗ ಯಾವುದಕ್ಜೂ ರಾಜಿ ಮಾಡಿಕೊಳ್ಳದ ವ್ಯಕ್ತಿ.ಕಳೆದ ಒಂದು ತಿಂಗಳುಗಳ ಕಾಲ ಛತ್ತೀಸಗಡದಲ್ಲಿ ಠಿಕಾಣಿ ಹೂಡಿ ಕಳೆದ ದಿನ ರಾತ್ರಿ ಬೆಳಗಾವಿಗೆ ಬಂದಿದ್ದರು.

ಗಣೇಶ ಹಬ್ಬವನ್ನು ಕುಟುಂಬ ಸಮೇತ ಆಚರಿಸಿದ್ದಾರೆ. ಅವರ ಸಹೋದರರಾದ ಭರತ, ಸಂತೋಷ ಹಾಗೂ ಇಡೀ ಪರಿವಾರ ವಿಘ್ನನಿವಾರಕನನ್ನು ಪೂಜಿಸಿದ್ದಾರೆ.





ಅದೇ ರೀತಿ ಇ ಬೆಳಗಾವಿಗೆ ಬಂದ ಸಾಕಷ್ಟು ಪ್ರಮಾಣದಲ್ಲಿ ಗಣೇಶನೊಂದಿಗೆ ಸೆಲ್ಫಿ ಪೊಟೊಗಳು ಬಂದಿವೆ. ಎಲ್ಲವನ್ನೂ ಒಂದೇ ದಿನದಲ್ಲಿ ಪ್ರಕಟಿಸಲು ಸಾಧ್ಯವಿಲ್ಲ. ಅವುಗಳನ್ನು ಹಂತ ಹಂತವಾಗಿ ಪ್ರಕಟಿಸುವ ಕೆಲಸ ಮಾಡಲಾಗುವುದು. ನಿಮ್ಮೂರಿನ ಗಣೇಶನ ಸಂಭ್ರಮ ವನ್ನು ಬರೆದು ಕಳಿಸಿದರೆ ಅದನ್ನೂ ನಿಮ್ಮಹೆಸರಿನೊಂದಿಗೆ ಪ್ರಕಟಿಸುತ್ತೇವೆ.


