
ಟ್ರ್ಯಾಕ್ಟರ್ ಓಡಿಸಿದ ಗಣಪ
ಬೆಳಗಾವಿ. ಈ ಬಾರಿ ಗಣೇಶ ಟ್ರ್ಯಾಕ್ಟರ್ ಏರಿದ್ದಾನೆ. ಅದೂ ಕಿತ್ತೂರಿನಲ್ಲಿ.! ಅದು ರೈತನ ವೇಷದಲ್ಲಿ ಚಾಲನೆ ಮಾಡುತ್ತಿದ್ದಾನೆ. ಟ್ರ್ಯಾಕ್ಟರ್ ಓಡಿಸುವ ಗಣಪನನ್ನು ನೋಡಬೇಕು ಅಂದರೆ ನೀವು ಚನ್ನಮ್ಮನ ಕಿತ್ತೂರಿಗೆ ಹೋಗಬೇಕು ಅಲ್ಲಿ ಆಕಾಶ ಬಡಿಗೇರ ಮತ್ತು ವಿಶಾಲ್ ಬಡಿಗೇರ ಅವರು ರೈತ ಟ್ರ್ಯಾಕ್ಟರ್ ಓಡಿಸುವ ರೀತಿ ಗಣೇಶನ ಮುರ್ತಿ ತಯಾರಿಸಿದ್ದಾರೆ. ನೋಡಲು ಅಂದವಾಗಿದ್ದು ಗಣೇಶ ಭಕ್ತರನ್ನು ಆಕರ್ಷಿಸುತ್ತಿದೆ.