Headlines

ಜನತಾದರ್ಶನಕ್ಕೆ ಸಚಿವರ ಗೈರು

ಬೆಳಗಾವಿ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಜಿಲ್ಲೆಯ ಜನತಾದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಗೈರಾಗಿದ್ದಾರೆ..

ಈ ಮೂಲಕ ಲೋಕ ಅಖಾಡಾಕ್ಕೆ ಬೇರೊಬ್ವರನ್ನು ನೇಮಕ ಮಾಡಿದ್ದರ ಬಗ್ಗೆ ಅಸಮಾಧಾನವನ್ನು‌ ಈ ಮೂಲಕ ಹೊರಹಾಕಿದ್ದಾರೆಂದು ವ್ಯಾಖ್ಯಾನಿಸಲಾಗುತ್ತಿದೆ.

ಹಾಗೆ ನೋಡಿದರೆ ಜನತಾ ದರ್ಶನ ಕಾರ್ಯಕ್ರಮ ಕಳೆದ ದಿನ ಅಂದರೆ 25 ರಂದೇ ನಡೆಯಬೇಕಿತ್ತು. ಆದರೆ ಸಚಿವರು ತಮ್ಮ ಸಮಯ ನೋಡಿಕೊಂಡು‌ ಅದನ್ನು ಇಂದಿಗೆ ಮುಂದೂಡಿದ್ದರು.

ಇಂದು ನಡೆಯಬೇಕಿದ್ದ ಜನತಾದರ್ಶನಕ್ಕೆ ಜಿಲ್ಲಾಡಳಿತ ಎಲ್ಲ ರೀತಿಯ ವ್ಯವಸ್ಥೆ ಮಾಡಿತ್ತು. ಆದರೆ ಸಚಿವ ಸತೀಶ ಜಾರಕಿಹೊಳಿ ಇಂದೂ ಕೂಡ ಗೈರಾದರು. ಇದು ಸಾರ್ವಜನಿಕರಲ್ಲಿ ಅಸನಾಧಾನ ಉಂಟಾಗಲು ಕಾರಣವಾಯಿತು.

ಸಚಿವರು ಇನ್ನೂ ಬೆಂಗಳೂರಿನಲ್ಲಿಯೇ ಇದ್ದಾರೆ‌ ‌ಬೆಳಿಗ್ಗೆ 11 ಕ್ಕೆ ಜನತಾದರ್ಶನ‌ ಆರಂಭವಾಗಬೇಕಿತ್ತು. ಸಚಿವರು ಬರಬಹುದು ಎಂದು ಅಧಿಕಾರಿಗಳು ಒಂದು ತಾಸು ಕಾಯ್ದರು. ಹೀಗಾಗಿ ಅಧಿಕಾರಿಗಳೇ ಮನವಿ ಪತ್ರ ಸ್ವೀಕರಿಸುವ ಕೆಲಸ ಮಾಡುತ್ತಿದ್ದಾರೆ.

ಮತ್ತೊಂದು ಕಡೆಗೆ ಸಚಿವೆ ಹೆಬ್ಬಾಳಕರ ಅವರು ಇನ್ನೊಂದು ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ಹೀಗಾಗಿ ಇದು ಸರ್ಕಾರ ಮಟ್ಟದಲ್ಲಿ ಬೇರೆ ರೀತಿಯ ಸಂದೇಶ ರವಾನಿಸಿದಂತಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!