ಬೆಳಗಾವಿ.ಗಣೇಶ ವಿಸೆರ್ಜನೆಗೆ ಇನ್ನು ಕೇವಲ ಒಂದು ದಿನ ಬಾಕಿ ಉಳಿದಿರುವಾಗ ಶಾಸಕ ಅಭಯ ಪಾಟೀಲ ಮತ್ತು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠರು ಮಧ್ಯರಾತ್ರಿವರೆಗೂ ಗಣೇಶ ದರ್ಶನ ಮಾಡಿದರು.

ಸಸಂಜೆ ಸರಿಯಾಗಿ ಆರು ಗಂಟೆಗೆ ದ್ವಿಚಕ್ರ ವಾಹನ ಏರಿದ ಈ ಇಬ್ಬರೂ ನಾಯಕರು ಬೆಳಗಿನ ಜಾವ ಒಂದು ಗಂಟೆವರೆಗೆ ಗಣಪತಿ ದರ್ಶನ ಮಾಡಿದರು.

ಬೆಳಗಾವಿ ದಕ್ಷಿಣ ಕ್ಷೇತ್ರದ ಹಿಂದವಾಡಿ, ಟಿಳಕವಾಡಿ, ಭಾಗ್ಯನಗರ, ಅನಗೋಳ , ವಿದ್ಯಾ ನಗರ ಮುಂತಾದ ಕಡೆಗೆ ಪ್ರತಿಷ್ಠಾಪಿಸಲಾದ ಸಾರ್ವಜನಿಕ ಗಣೇಶ ಮಂಡಳಕ್ಕೆ ಭೆಟ್ಡಿ ನೀಡಿದರು.

ಬಹುತೇಕ ಕಡೆಗೆ ಅಭಯ ಪಾಟೀಲ ಮತ್ತು ಮಹಾಂತೇಶ ಕವಟಗಿಮಠ ಅವರನ್ನುಗಣೇಶ ಮಂಡಳದವರು ಶಾಲು ಹೊದಿಸಿ ಸನ್ಮಾನಿಸಿದರು.


ಭಾಗ್ಯನಗರದ, ವಿದ್ಯಾನಗರಕ್ಕೆ ಭೆಟ್ಡಿ ನೀಡಿದಾಗ ಅಲ್ಲಿನ ಮಧು ಗುರವ, ಪವನ ಖಡೆ, ಗಜಾನನ ಬಾಂದುರ್ಗೆ,, ಶೇಖರ ಖಾಂಡೆಕರ, ಮಹೇಶ ಶಿರಹಟ್ಟಿ, ಕುಶಾಲ ಶೇಣವೆ ಮುಂತಾದವರು ಇವರನ್ನು ಸನ್ಮಾನಿಸಿದರು.

ಇನ್ನೂ ಕೆಲ ಮಂಡಳಗಳಲ್ಲಿ ಮಹಿಳೆಯರು ಆರತಿಮಾಡಿ ಬರಮಾಡಿಕೊಂಡರು.

27 ಕ್ಕೆ ಚಿದಂಬರ ನಗರಕ್ಕೆ ಭೆಟ್ಟಿ
ದಿನಾಂಕ 27 ರಂದು ಶಾಸಕ ಅಭಯ ಪಾಟೀಲ ಮತ್ತು ಮಹಾಂತೇಶ ಕವಡಗಿಮಠ ಅವರು ಚಿದಂಬರನಗರದ ಗಣೇಶ ದರ್ಶನ ಮಾಡುವರು .

ಸಂಜೆ 6 ಕ್ಕೆ ಚಿದಂಬರ ನಗರಕ್ಕೆ ಅವರು ಆಗಮಿಸಲಿದ್ದಾರೆ.ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾದ ಗಣೇಶ ದರ್ಶನ ಮಾಡಿ ನಂತರ ಮುಂದೆ ಸಾಗಲಿದ್ದಾರೆ. ಆದ್ಸರಿಂದ ಸಗರ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿರಬೇಕೆಂದು ನಗರಸೇವಕಿ ಮತ್ತು ಪಿಡಬ್ಲುಡಿ ಸ್ಥಾಯಿ ಸಮಿತಿ ಅಧ್ಯಕ್ಷೆ ವಾಣಿ ಜೋಶಿ ಮನವಿ ಮಾಡಿದ್ದಾರೆ.
