Headlines

ಗಣಪತಿ ವಿಸರ್ಜನೆ ಇದೇ ಮಾರ್ಗದಿಂದ ಸಂಚರಿಸಿ

ಬೆಳಗಾವಿ. ಗಡಿನಾಡ ಬೆಳಗಾವಿ‌ ಗಣೇಶ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಲು ಪೊಲೀಸ್ ಇಲಾಖೆ ಎಲ್ಲ ರೀತಿಯ ಕ್ರಮವನ್ನು ತೆಗೆದುಕೊಂಡಿದೆ.

ನಾಳೆ ದಿ.28 ರಂದು ಸಂಜೆ ವಿಸರ್ಜನಾ ಮೆರವಣಿಗೆ ಆರಂಭವಾಗಲಿದೆ. ಬಹುಶಃ ಅದು ಮರುದಿನವೇ ಮುಗಿಯುತ್ತದೆ.

ಈ ಸಂದರ್ಭದಲ್ಲಿ ಮೆರವಣಿಗೆ ವೀಕ್ಷಣೆಗೆ ಬಂದ. ಜನ ಸಮೂಹಕ್ಕೆ ಯಾವುದೇ ರೀತಿಯ ತೊಂದರೆ ಆಗದಂತೆ ಪೊಲೀಸರು ಮಾರ್ಗ ಬದಲಾವಣೆ ಮಾಡಿದ್ದಾರೆ.

ಸಂಚಾರ ಮಾರ್ಗ ಬದಲಾವಣೆ.

ಮೆರವಣಿಗೆಯು ನರಗುಂದಕರ ಭಾವ ಚೌಕದಿಂದ ಪಾರಂಭವಾಗಿ ಮಾರುತಿ ಗಲ್ಲಿ, ಹುತಾತ್ಮ ಚೌಕ, ರಾಮದೇವ ಗಲ್ಲಿ, ಸಮಾದೇವಿ ಗಲ್ಲಿ, ಯಂಡಬೂಟ, ಕಾಲೇಜ್ ರಸ್ತೆ, ಧರ್ಮವೀರ ಸಂಭಾಜಿ ಚೌಕ (ಬೋಗಾರವೇಸ್), ರಾಮಅಂಗಖಂಡ ಗಲ್ಲ ರಸ್ತೆ, ಅಳಕಚೌಕ, ಹೇಮುಕಲಾನಿ ಚೌಕ (ಶಿವಭವನ), ಶನಿ ಮಂದಿರ, ಕಪಿಲೇಶ್ವರ ಫೈ ಓವರ ರಸ್ತೆ, ರೇಣುಕಾ ಹೊಟೇಲ್ ಕ್ಲಾಸ್ ಮೂಲಕ ಕಪಿಲೇಶ್ವರ ಮಂದಿರ ಬಳ ಮುಕ್ತಾಯಗೊಳಅದೆ.

ಶ್ರೀ ಗಣೇಶ ಮೂರ್ತಿಗಳ ಮೆರವಣಿಗೆ ಹಿನ್ನೆಲೆಯಲ್ಲಿ ಸಾರ್ವಜನಿಕ ಸುಗಮ ಸಂಚಾರ ವ್ಯವಸ್ಥೆ ಕುರಿತು ದಿನಾಂಕ: 28/09/2023 ರಂದು ಮದ್ಯಾಹ್ನ 02.00 ಗಂಟೆಯಿಂದ ದಿನಾಂಕ: 29/09/2023 ರಂದು ಮೆರವಣಿಗೆ ಮುಕ್ತಾಯದವರೆಗೆ ಈ ಕೆಳಗಿನಂತೆ ವಾಹನಗಳ ಸಂಚಾರದಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದ್ದು, ಪರ್ಯಾಯ ಮಾರ್ಗಗಳನ್ನು ಬಳಸಿಕೊಳ್ಳಲು ಸಾರ್ವಜನಿಕರಲ್ಲಿ ಕೋರಲಾಗಿದೆ.

1) ಅಶೋಕ ಪಿಲ್ಲರ ವೃತ್ತ-ಆರ್‌ಟಓ-ಚನ್ನಮ್ಮ ಸರ್ಕಲ್ ಮಾರ್ಗವಾಗಿ ಕಾಲೇಜ್ ರಸ್ತೆ ಮುಖಾಂತರ ಖಾನಾಪೂರ, ಕಡಗೆ ಸಾಗುವ ವಾಹನಗಳ ಚಾಲಕ/ಸವಾರರು ಸಂಗೊಳ್ಳಿ ರಾಯಣ್ಣ ವೃತ್ತದಿಂದ ಹಳೆ ಪಿಬಿ ರಸ್ತೆ ಮಾರ್ಗವಾಗಿ ಕೃಷ್ಣದೇವರಾಯ (ಕೊಲ್ಲಾಪುರ) ವೃತ್ತ, ವಾಯ್-ಜಂಕ್ಷನ್, ಸದಾಶಿವ ನಗರ ಲಕ್ಷ್ಮೀ ಕಾಂಪ್ಲೆಕ್ಸ್, ವಿಶ್ವೇಶ್ವರಯ್ಯ ನಗರ, ಬಾಚಿ ಕ್ರಾಸ್‌, ಗಾಂಧಿ ಸರ್ಕಲ್ (ಅರಗನ ತಲಾಬ), ಶೌರ್ಯ ಚೌಕ (ಮಿಲ್ಬ ಆಸ್ಪತ್ರೆ ಸರ್ಕಲ್), ಕೇಂದ್ರಿಯ ವಿದ್ಯಾಲಯ ನಂ.2. ಶರ್ಕತ್ ಪಾರ್ಕ, ಗ್ಲೋಬ್ ಥಿಯೇಟರ್ ಸರ್ಕಲ್ ಮೂಲಕ ಖಾನಾಪೂರ ರಸ್ತೆಗೆ ಸೇರಿ ಮುಂದೆ ಸಾಗುವುದು.

2) ಜೀಜಾಮಾತಾ ಸರ್ಕಲ್ ದಿಂದ ದೇಶಪಾಂಡೆ ಪೆಟ್ರೋಲ್ ಪಂಪ್, ನರಗುಂದಕರ ಭಾವ ಚೌಕ/ಕಂಬಳ ಖೂಟ, ಪಿಂಪಳ ಕಟ್ಟಾ, ಪಾಟೀಲ ಗಲ್ಲಿ ಕಡೆಗೆ ಸಂಚರಿಸುವ ವಾಹನಗಳನ್ನು ಜೀಜಾಮಾತಾ ಸರ್ಕಲ್‌ದಿಂದ ನೇರವಾಗಿ ಕೇಂದ್ರ ಬಸ್ ನಿಲ್ದಾಣ/ಪ್ಯಾಟ್ರನ್ ಶೋ ರೂಮ್, ಹಳೆ ಪಿಬಿ ರಸ್ತೆ ಮೂಲಕ ಮುಂದೆ ಸಂಚರಿಸುವುದು,

3) ಖಾನಾಪೂರ ಕಡೆಯಿಂದ ನಗರ ಭಾಗದಿಂದ ರಾಷ್ಟ್ರೀಯ ಹೆದ್ದಾರಿಗೆ ಸೇರುವ ಮತ್ತು ಗೋಗಟೆ ಸರ್ಕಲ್‌ ಕಡೆಯಿಂದ ರೇಲ್ವೆ ಸ್ಟೇಶನ, ಹೆಡ್ ಪೋಸ್ಟ್ ಆಫೀಸ್ ಸರ್ಕಲ್ ಮೂಲಕ ಶನಿ ಮಂದಿರಕಡೆಗೆ ಸಂಚರಿಸುವ ವಾಹನಗಳು ಗ್ಲೋಬ್ ಥಿಯೇಟರ್ ಸರ್ಕಲ್‌ದಲ್ಲಿ ಎಡತಿರುವ ಪಡೆದುಕೊಂಡು ಶರ್ಕತ್ ಪಾರ್ಕ ಕೇಂದ್ರಿಯ ವಿದ್ಯಾಲಯ ನಂ.2, ಶೌರ್ಯ ಚೌಕ (ಮಿಸ್ಟ್ರಿ ಆಸ್ಪತ್ರೆ ಸರ್ಕಲ್‌), ಗಾಂಧಿ ಸರ್ಕಲ್ (ಅರಗನ ತಲಾಖ), ಗಣೇಶ ಮಂದಿರ, ಹಿಂಡಲಗಾ ರಸ್ತೆ, ಡಬಲ್ ರೋಡ್ ಕಡೆಯಿಂದ ಬಾಕ್ಸಾಟ್ ರಸ್ತೆ ಮೂಲಕ ರಾಷ್ಟ್ರೀಯ ಹೆದ್ದಾರಿ ಸೇರಿ ಮುಂದೆ ಸಂಚರಿಸುವುದು,

4) ನಾಥ-ಪೈ ಸರ್ಕಲ್‌ ಕಡೆಯಿಂದ ಬ್ಯಾಂಕ ಆಫ್ ಇಂಡಿಯಾ, ಎಸ್‌ಪಿಎಮ್ ರಸ್ತೆ ಮಾರ್ಗವಾಗಿ ಕಪಿಲೇಶ್ವರ, ಫೈ ಓವರ್‌ ರಸ್ತೆ ಮುಖಾಂತರ ಸಂಚರಿಸುವ ವಾಹನಗಳು ಬ್ಯಾಂಕ್ ಆಫ್ ಇಂಡಿಯಾ ವೃತ್ತದಿಂದ ಹಳೆ ಪಿಬಿ ರಸ್ತೆ ಸೇರಿ ಮುಂದೆ ಸಂಚರಿಸುವುದು.

5) ಹಳೆ ವಿವಿ ರಸ್ತೆ, ವಿ.ಆರ್.ಎಲ್ ಲಾಜಿಸ್ಟಿಕ್, ಭಾತಕಾಂಡೆ ಸ್ಕೂಲ್ ಮಾರ್ಗವಾಗಿ ಕಪಿಲೇಶ್ವರ ಹೈ ಓವರ್‌ ರಸ್ತೆ ಮುಖಾಂತರ ಸಂಚರಿಸುವ ವಾಹನಗಳು ಸಂಭಾಜಿ ರಸ್ತೆ ಬಳಸಿಕೊಂಡು ಬಸವೇಶ್ವರ ವೃತ್ತ ಖಾಸಬಾಗ, ನಾಥ-ಪೈ ಸರ್ಕಲ್ ಮೂಲಕ ಸಂಚರಿಸುವುದು.

6) ಹಳೆ ಪಿಬಿ ರಸ್ತೆ, ಯಶ್ ಆಸ್ಪತ್ರೆ, ಮಹಾದ್ವಾರ ರಸ್ತೆ, ಕಪಿಲೇಶ್ವರ ಮಂದಿರ ಕಡೆಗೆ ಸಾಗುವ ವಾಹನಗಳು ಯಶ್ ಆಸ್ಪತ್ರೆ ಹತ್ತಿರ ಎಡ ತಿರುವು ಪಡೆದುಕೊಂಡು ವಿ.ಆರ್.ಎಲ್ ಲಾಜಿಸ್ಟಿಕ್ ಮೂಲಕ ಹಳೆ ಪಿಬಿ ರಸ್ತೆ ಸೇರಿ ಮುಂದೆ ಸಂಚರಿಸುವುದು.

7) ಗೂಡ್ಸ್ ಶೆಡ್ ರಸ್ತೆ ಮೂಲಕ ಕಪಿಲೇಶ್ವರ ಫೈ ಓವರ್‌ ರಸ್ತೆ ಕಡೆಗೆ ಸಂಚರಿಸುವ ವಾಹನಗಳು ಎಸ್‌ಪಿಎಮ್ ರಸ್ತೆ ಕಡೆಗೆ ಸಂಚರಿಸದೆ ಮರಾಠಾ ಮಂದಿರ, ಗೋವಾ ವೇಸ್ ಸರ್ಕಲ್ ಕಡೆಗೆ ಸಂಚರಿಸುವುದು.

ಮಧ್ಯರಾತ್ರಿವರೆಗೂ ಗಣೇಶ ದರ್ಶನ

https://ebelagavi.com/index.php/2023/09/26/t-4/

8) ಮೆರವಣಿಗೆ ಮಾರ್ಗದಲ್ಲಿ ಎರಡು ಕ್ಯಾರೇಟ್-ವೇ ಇದ್ದ ಕಡೆ ಒಂದು ಮಾರ್ಗವನ್ನು ಹಾಗೂ ಒಂದು ಉಪಯೋಗಿಸಲಾಗುತ್ತಿದೆ. ರಸ್ತೆಯನ್ನು ಸಂಪೂರ್ಣವಾಗಿ ಮೆರವಣಿಗೆಗೆ

9) ದಿನಾಂಕ:28/09/2023 ರಂದು ಮದ್ಯಾಹ್ನ 02.00 ಗಂಟೆಯಿಂದ ದಿನಾಂಕ: 29/09/2023 dow ಮುಂಜಾನೆ 10.00 ಗಂಟೆಯವರೆಗೆ ಎಲ್ಲ ದಿಕ್ಕುಗಳಿಂದ ನಗರ ಪ್ರವೇಶಿಸುವ ಭಾರಿ ವಾಹನಗಳನ್ನು ನಗರದಲ್ಲಿ ಸಂಚರಿಸುವುದನ್ನು ನಿರ್ಬಂಧಿಸಲಾಗಿದೆ.

10)ಚನ್ನಮ್ಮ ವೃತ್ತದಿಂದ ಮುಖ್ಯ ಮೆರವಣಿಗೆ ಸೇರುವ ಮಾರ್ಗ : ಚನ್ನಮ್ಮ ವೃತ್ತದಿಂದ ಶನಿವಾರ ಖೂಟವರೆಗಿನ ಕಾಕತಿವೇಸ್ ರಸ್ತೆ, ಶನಿವಾರ ಖೂಟದಿಂದ ಕಂಬಳ ಖೂಟವರೆಗಿನ ಗಣಪತಿ ಗಲ್ಲಿ ರಸ್ತೆ ಹಾಗೂ ಮೆರವಣಿಗೆ ಸಾಗುವ ಮಾರ್ಗವಾದ ನರಗುಂದಕರ ಭಾವೆ ಚೌಕ, ಮಾರುತಿ ಗಲ್ಲ, ಹುತಾತ್ಮ ಚೌಕ, ರಾಮದೇವ ಗಲ್ಲ, ಸಮಾದೇವಿ ಗಲ್ಲ, ಕಾಲೇಜ್ ರಸ್ತೆ, ಧರ್ಮವೀರ ಸಂಭಾಜಿ ಚೌಕ, ರಾಮಲಿಂಗಖಿಂಡ ಗಲ್ಲ ರಸ್ತೆ, ಬೆಳಕಚೌಕ, ಹೇಮುಕಾಲನಿ ಚೌಕ, ಶನಿಮಂದಿರ, ಕಪಿಲೇಶ್ವರ ಫೈ ಓವರ್‌ ರಸ್ತೆ, ಕಪಿಲೇಶ್ವರ ಮಂದಿರದ ಎರಡೂ ಬದಿಯ ರಸ್ತೆಗಳಲ್ಲಿ ಮತ್ತು ಕ್ಯಾಂಪ್ ಪ್ರದೇಶ ವ್ಯಾಪ್ತಿಯ ಹ್ಯಾವಲಾಕ್ ರಸ್ತೆ, ಕ್ಯಾಟಲ್ ರೋಡ್, ಯಂಡೇಬೂಟ ದಿಂದ ದೇಶಪಾಂಡೆ ಬೂಟವರೆಗಿನ ಹಾಗೂ ಪವನ ಹೊಟೇಲ್ ವರೆಗಿನ ರಸ್ತೆಗಳಲ್ಲಿ ದಿನಾಂಕ: 28/09/2023 ರಂದು ಮದ್ಯಾಹ್ನ 02.00 ಗಂಟೆಯಿಂದ ಮೆರವಣಿಗೆ ಮುಕ್ತಾಯದವರೆಗೆ ಎಲ್ಲ ಮಾದರಿಯ ವಾಹನಗಳ ನಿಲುಗಡೆಯನ್ನು ನಿರ್ಬಂಧಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!