ಜಯಮೃತ್ಯುಂಜಯ ಸ್ವಾಮಿಜಿಗಳ ಮಾತಿಗೂ ಸಿಗದ ಮಾನ್ಯತೆ.ಇಲ್ಲಿ ಒನ್ ಪಾಯಿಂಟ್ ಪ್ರೋಗ್ರಾಂ.
ಲಿಂಗಾಯತರಿಗೆ ಡಿಸಿಎಂ ಬೇಡ ಸಿಎಂ ಬೇಕು. ಸಿದ್ದು ವಿರುದ್ಧ ಗುಡುಗಿದ ಶ್ಯಾಮನೂರು ಶಿವಶಂಕರಪ್ಪ.
ಬೆಳಗಾವಿ. ರಾಜ್ಯದಲ್ಲಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಲಿಂಗಾಯತ ಅಧಿಕಾರಿಗಳೇ ಟಾರ್ಗೆಟ್ ಆಗುತ್ತಿದ್ದಾರೆ ಎನ್ನುವುದು ಸುಳ್ಳಲ್ಲ. ಈ ಹಿಂದೆ E belagavi.com ವರದಿ ಸಹ ಮಾಡಿತ್ತು.
ಪರಿಸ್ಥಿತಿ ಹೇಗಾಗಿತ್ತು ಅಂದರೆ, ಕಾಂಗ್ರೆಸ್ ಸರ್ಕಾರ ಲಿಂಗಾಯತ ವಿರೋಧಿ ಹೌದೊ ಅಲ್ಲವೋ ಗೊತ್ತಿಲ್ಲ. ಆದರೆ ಸರ್ಕಾರ ನಡೆಸುವವರ ಹಿಂಬಾಲಕರು ಮಾತ್ರ ಇಲ್ಲಿ ಇಂತಹ ಸಮಾಜದವರಿಗೆ ಪ್ರಾತಿನಿಧ್ಯವಿಲ್ಲ ಎನ್ನುವ ಮೂಲಕ ಬೇರೆ ರೀತಿಯ ಸಂದೇಶ ರವಾನುಸುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಸಿದ್ದು ಸರ್ಕಾರ ಲಿಂಗಾಯತ ವಿರೋಧಿ ಎನ್ನುವ ಹಣೆಪಟ್ಟಿ ಕಟ್ಟಿಕೊಂಡಿದೆ.
ಅಚ್ಚರಿ ಸಂಗತಿ ಅಂದರೆ ಸಧ್ಯ ನಡೆಯುತ್ತಿರುವ ವರ್ಗಾವಣೆಯಲ್ಲಿ ಲಿಂಗಾಯತ, ರೆಡ್ಡಿ, ಬ್ರಾಹ್ಮಣ ಸೇರಿದಂತೆ ಇತರ ವರ್ಗದ ಅಧಿಕಾರಿಗಳೇ ಎತ್ತಂಗಡಿಯೇ ಸಾಕ್ಷಿ..
ಬೆಳಗಾವಿಯ ಪಂಚಮಸಾಲಿಗೆ ಸೇರಿದ ಅಧಿಕಾರಿಯನ್ನು ಇದ್ದ ಸ್ಥಳದಲ್ಲಿಯೇ ಮುಂದುವರೆಸಬೇಕು ಎನ್ನುವ ಒತ್ತಾಯಕ್ಕೆ ಸರ್ಕಾರ ಬಗ್ಗಲೇ ಇಲ್ಲ.
ಅಷ್ಟೇ ಅಲ್ಲ ಪಂಚನಸಾಲಿ 2 A ಮೀಸಲಾತಿ ಹೋರಾಟದ ಮುಖಂಡತ್ವವಹಿಸಿದ್ದ ಶ್ರೀ ಜಯ ಮೃತ್ಯುಂಜಯ ಸ್ವಾಮಿಗಳು ನೇರವಾಗಿ ಮುಖ್ಯಮಂತ್ರಿಗಳಿಗೆ ಮತ್ತು ಸಂಬಂಧಿಸಿದ ಸಮಾಜದ ಸಚಿವರಿಗೆ ಹೇಳಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ಒಂದು ರೀತಿಯಲ್ಲಿ ಟಾರ್ಗೆಟ್ ಮಾಡಿ ಎತ್ತಂಗಡಿ ಮಾಡಿಸುವ ಕೆಲಸ ನಡೆಯಿತು. ಪೊಲೀಸ್, ಕಂದಾಯ ಸೇರಿದಂತೆ ಬೇರೆ ಬೇರೆ ಇಲಾಖೆಯಲ್ಲಿ ರುವ ಪ್ರಮುಖ ಹುದ್ದೆಗಳಲ್ಲಿರುವರನ್ನೇ ಎತ್ತಂಗಡಿ ಮಾಡಿಸುವ ಹುನ್ನಾರ ತೆರೆಮರೆಯಲ್ಲಿ ನಡೆಯಿತು. ಈಗ ಈ ಅಸಮಾಧಾನದ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿವೆ.
ಶ್ಯಾಮನೂರು ಗುಡುಗು
ಸಮಾಜದ ಹಿರಿಯ ವ್ಯಕ್ತಿ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಆಡಿದ ‘ನಾಯಿಪಾಡು‘ ಮಾತು ಈ ಸರ್ಕಾರದ ಕಾರ್ಯವೈಖರಿಗೆ ಒಂದು ತಾಜಾ ಉದಾಹರಣೆ.
ಭಾರತದ ರಾಜಕೀಯ ಇತಿಹಾಸದಲ್ಲಿ 93 ವರ್ಷ ವಯಸ್ಸಿನ ಶಾಸಕರು ಇಷ್ಟೊಂದು ಸಕ್ರಿಯ ರಾಜಕಾರಣದಲ್ಲಿ ಇರುವುದು ಶ್ಯಾಮನೂರು ಮಾತ್ರ. ಶಾಮನೂರು ಶಿವಶಂಕರಪ್ಪ ಅವರು ಮಾತಾನಾಡಿದರೆ ‘ಎಕ್ ಮಾರ್ ದೋ ತುಕಡಾ’ ಇದ್ದಂತೆ.
ಈಗ ರಾಜ್ಯದಲ್ಲಿ ವೀರಶೈವ ಲಿಂಗಾಯತ ಅಧಿಕಾರಿಗಳ ಕಡೆಗಣನೆ ವಿಚಾರ ಸಂಬಂಧ ಸಿಡಿದಿದ್ದೆರುವ ಶಾಮನೂರು ಶಿವಶಂಕರಪ್ಪನವರು ಸಿಎಂ ಸಿದ್ದರಾಮಯ್ಯರ ವಿರುದ್ಧ ಲಿಂಗಾಯತರ ಕಡೆಗಣನೆ ಅಸ್ತ್ರ ಬಿಟ್ಟಿದ್ದಾರೆ. ಸಚಿವ ಸ್ಥಾನ ನೀಡಿಕೆ ಗಮನಿಸಬೇಕಾದ ಸಂಗತಿ ಎಂದರೆ, ಶ್ಮಾಮನೂರು ಅವರು ಸಚಿವ ಸ್ಥಾನದಲ್ಲಿವಿಚಾರದಲ್ಲಿ ಅನ್ಯಾಯ ಆಗಿದೆ ಎಂದು ನಾನು ಹೇಳಿಲ್ಲ. ಆದರೆ ನಮ್ಮ ಸಮುದಾಯದ ಅಧಿಕಾರಿಗಳ ಕಡೆಗಣನೆ ಮಾಡಲಾಗಿದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಧಿಕಾರಿಗಳ ನಿಯೋಜನೆ ಹಾಗೂ ಹುದ್ದೆ ಕೊಡುವಲ್ಲಿ ವೀರಶೈವ ಲಿಂಗಾಯತ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನ ಕೊಡುತ್ತಿಲ್ಲ ಎಂದು ಬಹಿರಂಗವಾಗಿಯೇ ಹೇಳುವ ಮೂಲಕ ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದ್ದಾರೆ.
ಡಿಸಿಎಂ ಬೇಡ..ಸಿಎಂ ಕೊಡಿ
ವೀರಶೈವ ಲಿಂಗಾಯತ ಸಮುದಾಯಕ್ಕೆ ಡಿಸಿಎಂ ಬೇಡ, ಸಿಎಂ ಹುದ್ದೆಯೇ ಬೇಕು ಎನ್ನುವ ಮಾತನ್ನು ಅವರು ಆಡಿದ್ದಾರೆ. ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯದವರೇ ಹೆಚ್ಚಿದ್ದಾರೆ.
ಶಾಸಕರೂ ಹೆಚ್ಚಿದ್ದಾರೆ. ನಾವು ಬೇರೆಯವರ ಸಹಕಾರ ಪಡೆದು ಸರ್ಕಾರ ರಚನೆ ಮಾಡಬಹುದು. ಅಷ್ಟು ಶಕ್ತಿ ನಮಗಿದೆ. ನನಗೇನೂ ಯಾರ ಭಯವಿಲ್ಲ ಎನ್ನುವ ಖಡಕ್ ಎಚ್ಚರಿಕೆಯ ಸಂದೇಶವನ್ಬು ಅವರು ರವಾನಿಸಿದ್ದಾರೆ.. ನಮ್ಮವರಿಗೆ ಅನ್ಯಾಯವಾದರೆ ಸುಮ್ಮನೆ ಕೂರಬೇಕಾ ಎಂದು ಪ್ರಶ್ನೆ ಮಾಡಿದ ಶ್ಯಾಮನೂರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.