ಬೆಳಗಾವಿ ಪಾಲಿಕೆಯಲ್ಲಿ ಮೇಯರ್ ಗೆ ಬಂದ ಪತ್ರಗಳೇ ಮಾಯ? .
ಸರ್ಕಾರವೇ ನೇರವಾಗಿ ಮೇಯರ್ ಗೆ ಬರೆದ ಪತ್ರ. ಕಳೆದ ದಿ.21 ರಂದು ಪತ್ರ ಬರೆದ ಪತ್ರ.
ಇಷ್ಡು ದಿನ ಮುಚ್ಚಿಟ್ಟವರು ಯಾರು? ಬೆಳಗಾವಿ ಪಾಲಿಕೆ ಸೂಪರ್ ಸೀಡ್ ಬಯಸೋರು ಯಾರು?
ಪಾಲಿಕೆಯಲ್ಲಿಯೇ ಇದ್ದಾರಾ ವಿಘ್ನ ಸಂತೋಷಿಗಳು.?
ಬೆಳಗಾವಿ.
ದುಷ್ಮನ ಕಹಾ ಹೈ ಎಂದರೆ ಬಗಲ್ಮೆ ಹೈ ಅಂದಂಗಾಗುತ್ತಿದೆ ಬೆಳಗಾವಿ ಮಹಾನಗರ ಪಾಲಿಕೆ ಪರಿಸ್ಥಿತಿ.!
ರಾಜ್ಯ ಸರ್ಕಾರ 2021 -22 ನೇ ಸಾಲಿನಿಂದ ಇಲ್ಲಿ ವರೆಗೆ ಆಸ್ತಿ ತೆರಿಗೆ ಪರಿಷ್ಕರಣೆ ಮಾಡದಿರುವುದು ಸೇರಿದಂತೆ ಇನ್ನಿತರ ಕಾರಣ ನೀಡಿ ಪಾಲಿಕೆಯ ಮೇಯರ್ ಗೆ ನೇರವಾಗಿ ಪತ್ರವನ್ನು ಬರೆದಿತ್ತು.

ಕಳೆದ ದಿ. 29 ರಂದು ಬೆಳಗಾವಿ ಪಾಲಿಕೆ ಮೇಯರ್ ಹುದ್ದೆ ನಮೂದಿಸಿ ಪತ್ರವನ್ನು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಕಳುಹಿಸಿದ್ದರು.
ಅದರಲ್ಲಿ ಗಂಭೀರ ಸ್ವರೂಪದ ಆರೋಪ ಕೂಡ ಉಲ್ಲೇಖ ಮಾಡಲಾಗಿದೆ. ಇಂತಹ ಗಂಭೀರ ಸ್ವರೂಪದ ಪತ್ರಗಳು ಮೇಯರ ಹೆಸರಿನಲ್ಲಿ ಬಂದಿದ್ದರೂ ಕೂಡ ಅದನ್ನು ಅವರಿಗೆ ತೋರಿಸದೇ ಮುಚ್ಚಿಟ್ಟ ಮಹಾನುಭಾವ ಯಾರು ಎನ್ನುವುದು ಸ್ಪಷ್ಟವಾಗಬೇಕಿದೆ.
ಸದಾ ಮೇಯರ್ ಚೇಂಬರದಲ್ಲೇ ಇರುವ ವಿಘ್ನ ಸಂತೋಷಿಗಳೇ ಈ ರೀತಿ ಮಾಡಿದರಾ ಅಥವಾ ಕನ್ನಡದಲ್ಲಿನ ಪತ್ರವನ್ನು ಯಾರೂ ಅವರಿಗೆ ಓದಿ ಹೇಳುವ ಗೋಜಿಗೆ ಹೋಗಲಿಲ್ಲವಾ ಎನ್ನುವ ಪ್ರಶ್ನೆ ಹಲವು ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ .

ಸಹಜವಾಗಿ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಹೆದರಿನ ಮೇಲೆ ಪತ್ರ ಬಂದರೆ ಅದು ನೇರವಾಗಿ ಅವರಿಗೆ ಹೋಗಿ ತಲುಪಬೇಕು. ಅವರು ಇರದಿದ್ದರೆ ಅವರ ಆಪ್ತ ಸಹಾಯಕನ ಮೂಲಕ ಅವರಿಗೆ ತಲುಪಿಸುವ ಕೆಲಸ ಆಗಬೇಕು. ಅದು ನಿಯಮ.
ಸರ್ಕಾರ ಏನೇ ಕಳಿಸಿದರೂ ಅದನ್ನು ಸ್ಪೀಡ ಪೋಸ್ಟ ಅಥವಾ ರಿಜಿಸ್ಟರ್ ಮೂಲಕ ಕಳಿಸುತ್ತದೆ ಇಷ್ಟೆಲ್ಲ ಇದ್ದಾಗ್ಯೂ ಕೂಡ ಈ ಪತ್ರ ಮೇಯರ್ ಗಮನಕ್ಕೆ ಯಾರು ಏಕೆ ತರದೇ ಮುಚ್ಚಿಡುವ ಕೆಲಸ ಮಾಡಿದರು ಎನ್ನುವುದು ಗೊತ್ತಾಗಬೇಕಿದೆ.
ಸರ್ಕಾರ ಹೇಳಿದ ತಪ್ಪುಗಳು.

ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ಹಾಗೂ ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ 1976ಗಳಿಗೆ ತಿದ್ದುಪಡಿ ತರಲಾಗಿದ್ದು, ಕರ್ನಾಟಕ ಸ್ಟ್ಯಾಂಪ್ ಅಧಿನಿಯಮ 1957ರ 45ಬಿ ಪ್ರಕರಣದಡಿಯಲ್ಲಿ ಪ್ರಕಟಿಸಲಾಗುವ ಚಾಲ್ತಿ ಸಾಲಿನ ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ಬೆಲೆಗಳ ಆಧಾರದ ಮೇರೆಗೆ ಆಸ್ತಿ ತೆರಿಗೆ ನಿರ್ಧರಣೆ ಮಾಡಬೇಕಾಗಿರುತ್ತದೆ, ಮಾರುಕಟ್ಟೆ, ದರಗಳು ಪರಿಷ್ಕರಣೆಯಾಗದ ವರ್ಷಗಳಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಕನಿಷ್ಟ ಶೇ.3 ರಿಂದ ಗರಿಷ್ಮ ಶೇ.5ರೊಳಗೆ ಆಸ್ತಿ ತೆರಿಗೆ ಪರಿಷ್ಕರಣೆ ಮಾಡಲು ಕಾಯ್ದೆ ಗಳಲ್ಲಿ ತಿದ್ದುಪಡಿ ಮಾಡಲಾಗಿದ್ದು, ಉಲ್ಲೇಖ(2) ರ ಸುತ್ತೋಲೆಯಲ್ಲಿ ಈ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ.
2023-24ನೇ ಸಾಲಿನಲ್ಲಿ ಮಾರುಕಟ್ಟೆ ದರಸೂಚಿಗಳು ಪರಿಷ್ಕರಣೆಯಾಗದಿದ್ದಲ್ಲಿ ಶೇ.3 ರಿಂದ ಶೇ.5 ರಷ್ಟು ಆಸ್ತಿ ತೆರಿಗೆ ದರ ಪರಿಷ್ಕರಣೆ ಮಾಡಲು ತಮ್ಮ ನಗರ ಸ್ಥಳೀಯ ಸಂಸ್ಕೃಗಳ ಕೌನ್ಸಿಲ್ ನಲ್ಲಿ ಮಂಡಿಸಿ ಸರ್ಕಾರದ ಅಧಿಸೂಚನೆ/ಸುತ್ತೋಲೆಯನ್ವಯ ಕ್ರಮವಹಿಸಿ, ಪೌರಾಡಳಿತ ನಿರ್ದೇಶನಾಲಯಕ್ಕೆ ಅನುಸರಣ ವರದಿ ಸಲ್ಲಿಸಲು ಉಲ್ಲೇಖ(3)ರ ಪತ್ರದಲ್ಲಿ ಸೂಚಿಸಲಾಗಿರುತ್ತದೆ.ಆಸ್ತಿ ತೆರಿಗೆ ನಗರ ಸ್ಥಳೀಯ ಸಂಸ್ಥೆಗಳ ಮೂಲ ಆರ್ಥಿಕ ಸಂಪನ್ಮೂಲವಾಗಿದ್ದು, ಸಂಪನ್ಮೂಲ ಕ್ರೂಡಿಕರಣಕ್ಕಾಗಿ ಪಾಲಿಕೆಯಿಂದ ವಿಧಿಸಲಾಗುವ ತೆರಿಗೆ/ಶುಲ್ಕಗಳನ್ನು ಸರ್ಕಾರದ ನಿರ್ದೇಶನಗಳಂತೆ ಕಾಲಕಾಲಕ್ಕೆ ಪರಿಷ್ಕರಿಸಲು ಕ್ರಮ ವಹಿಸಬೇಕಾಗಿರುವುದು ಪಾಲಿಕೆಯ ಕೌನ್ಸಿಲ್‌ನ ಆದ್ಯ ಕರ್ತವ್ಯವಾಗಿರುತ್ತದೆ.
ಆದಾಗ್ಯೂ ಉಲ್ಲೇಖ(4)ರಂದು ನಡೆದ ಆಸ್ತಿ ತೆರಿಗೆ ವರಿಶೀಲನಾ ಸಭೆಯಲ್ಲಿನ ಪರಿಶೀಲನೆಯಂತೆ 2021-22ನೇ ಸಾಲಿನಿಂದ ಆಸ್ತಿ ತೆರಿಗೆ ಪರಿಷ್ಕರಣೆ ಮಾಡಿರುವುದಿಲ್ಲ, ಇದರಿಂದಾಗಿ ಪಾಲಿಕೆಗೆ ಆರ್ಥಿಕ ನಷ್ಟವಾಗುವುದಲ್ಲದೇ, ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗುವ 15ನೇ ಹಣಕಾಸು ಆಯೋಗದ ಅನುದಾನ, ಸ್ವಚ್ಛ ಭಾರತದ ಮಿಷನ್ ಅನುದಾನವನ್ನು ತಡೆಹಿಡಿಯುವ ಸಂಭವವಿರುತ್ತದೆ, ಇದರಿಂದ ಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಕುಂಠಿತವಾಗುತ್ತದೆ.
ಆದ್ದರಿಂದ ಮೇಲಿನ ಅಂಶಗಳನ್ನು ತಮ್ಮ ಪಾಲಿಕೆಯ ಕೌನ್ಸಿಲ್‌ಗೆ ಮನವರಿಕೆ ಮಾಡಿ ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ 1976 ರನ್ನದ ಕಡ್ಡಾಯವಾಗಿ ಆಸ್ತಿ ತೆರಿಗೆ ಪರಿಷ್ಕರಣೆ ಮಾಡಲು ತುರ್ತಾಗಿ ಅಗತ್ಯ ಕ್ರಮ ವಹಿಸಲು ಕೋರಿದೆ. ಸಂಬಂಧಿಸಿದಂತೆ ಕರ್ನಾಟಕ, ಮಹಾನಗರ ಪಾಲಿಕೆಗಳ ಅಧಿನಿಯಮ 1976ರ ಕಲಂ 99 ರಲ್ಲಿ ಈ ಕೆಳಗಿನಂತೆ ಉಲ್ಲೇಖಿಸಲಾಗಿರುತ್ತದೆ.
Power of the Government to [dissolve] Corporation: (1) If in the opinion of Government the Corporation is not competent to perform or makes default in the performance of any of the duties imposed on it or undertaken by it, by or under this Act or any other law for the time being in force or exceeds or abuses its powers or fails to carry out directions or orders given by Government to it under this Act or any other law or is acting in a manner prejudicial to the interests of the Corporation, the Government may, by an order published, together with a statement of reasons therefor, in the official Gazette, declare the Corporation to be incompetent or in default or to have exceeded or abused its powers or to have failed to carry out the directions given to it, or to have acted in a manner prejudicial to the interest of the Corporation, as the case may be, and may [dissolve it]. Provided that before making an order of dissolution as aforesaid reasonable opportunity shall be given to the Corporation to show cause why such order should not be made.

ಆದರೆ ಕಳೆದ ತಿಂಗಳು 21 ಕ್ಕೆ ಪತ್ರ ಮೇಯರ್ ಹೆಸರಿನಲ್ಲಿ ಪತ್ರ ಬಂದಿದ್ದರೂ ಅದನ್ನು ಯಾವ ಉದ್ದೇಶದಿಂದ ಮುಚ್ಚಿಡಲಾಗಿತ್ತು? ಇದರ ಹಿಂದಿರುವ ಉದ್ದೇಶವಾದರೂ ಏನು ಎನ್ನುವುದು ಇಲ್ಲಿ ಗೊತ್ತಾಗಬೇಕಿದೆ.
.ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಈ ಪತ್ರದಲ್ಲಿ ಯಾವುದೇ ಒಂದು ನೋಟೀಸ್ ಕಳಿಸಿದರೂ ಅದಕ್ಕೆ ಉತ್ತರಿಸಲು ಇಂತಿಷ್ಟು ದಿನಗಳ ಕಾಲ ಸಮಯ ಕೊಡಲಾಗಿರುತ್ತದೆ.
ಆದರೆ ಮೇಯರ್ ಗೆ ಪತ್ರದಲ್ಲಿ ಅಂತಹ ಸಮಯವನ್ನು ಉಲ್ಲೇಖ ಮಾಡಿಲ್ಲ.
ಏನು ಬರೆಯಲಾಗಿದೆ?
ಸರ್ಕಾರದ ಆದೇಶ ಮತ್ತು ನಿರ್ದೇಶನಗಳನ್ನು ಅನುಷ್ಠಾನಗೊಳಿಸಲು ವಿಫಲವಾದಲ್ಲಿ ಅಥವಾ ಪಾಲಿಕೆಯ ಹಿತಾಸಕ್ತಿಗೆ ವ್ಯತಿರಿಕ್ತವಾಗಿ ಕಾರ್ಯನಿರ್ವಹಿಸಿದಲ್ಲಿ ಮಹಾನಗರ ಪಾಲಿಕೆಯನ್ನು ವಿಸರ್ಜಿಸಲು ರಾಜ್ಯ ಸರ್ಕಾರಕ್ಕಿರುವ ಅಧಿಕಾರ ಹಾಗೂ ಕ್ರಮಗಳ ಬಗ್ಗೆ ವಿವರಿಸಲಾಗಿದೆ. ಅಷ್ಟೇ ಅಲ್ಲ ಮೇಲಿನ ನಿಯಮದಂತೆ ಪ್ರದತ್ತವಾದ ಅಧಿಕಾರವನ್ನು ಬಳಸಿಕೊಂಡು ನಿಯಮಾನುಸಾರ ಸೂಕ್ತ ಕ್ರಮವಹಿಸಲು ರಾಜ್ಯವಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎನ್ನುವ ಅಂಶವನ್ನು ಮೇಯರ್ ಗೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.